Rajakiya

‘ಗುಲಾಮಗಿರಿ ಸಂಸ್ಕೃತಿಯ ಬಿಜೆಪಿಯಲ್ಲಿ ಮೋದಿ- ಶಾ ಜೋಡಿಯ ಬೂಟು ನೆಕ್ಕುವ ನಿಯಮ ಕಡ್ಡಾಯ’

ಬೆಂಗಳೂರು: ಬಿಜೆಪಿ ದೇಶಭಕ್ತಿ ಹೊಂದಿರುವ ಪಕ್ಷ, ಕಾಂಗ್ರೆಸ್ ಗುಲಾಮಗಿರಿ ಪಾರ್ಟಿ ಎಂದು ಮುಖ್ಯಮಂತ್ರಿ ಬಸವರಾಜಜ ಬೊಮ್ಮಾಯಿ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಪಕ್ಷ ಸಿಎಂ ಬೊಮ್ಮಾಯಿ ಅವರೇ ಇತ್ತೀಚೆಗಷ್ಟೇ ನಿಮ್ಮದೇ ಪಕ್ಷದ ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿಯಲ್ಲಿ ಬೂಟು ನೆಕ್ಕುವ ಗುಲಾಮರೇ ತುಂಬಿದ್ದಾರೆ ಎಂದು ತಿಳಿಸಿದ್ದು ನೆನಪಿದೆಯೇ? ಎಂದು ಪ್ರಶ್ನಿಸಿದೆ.

ಗುಲಾಮಗಿರಿ ಸಂಸ್ಕೃತಿಯ ಬಿಜೆಪಿಯಲ್ಲಿ ಮೋದಿ- ಅಮಿತ್ ಶಾ ಜೋಡಿಯ ಬೂಟು ನೆಕ್ಕುವ ಕಡ್ಡಾಯ ನಿಯಮವಿದೆ ಎಂದು ನಿಮ್ಮವರೇ ಹೇಳಿದ್ದಾರೆ! ಗುಲಾಮಗಿರಿ’ ಬಿಜೆಪಿಗರಿಗೆ ರಕ್ತಗತವಾಗಿ ಬಂದ ಬಳುವಳಿ! ಎಂದು ಟಾಂಗ್ ನೀಡಿದೆ.

ಈ ಸಂಬಂಧ ಮತ್ತೊಂದು ಟ್ವೀಟ್ ಮಾಡಿರುವ ಕೆಪಿಸಿಸಿ , ಬೊಮ್ಮಾಯಿ ಅವರೇ ಬಿಜೆಪಿ ಹಾಗೂ ಬಿಜೆಪಿಯ ಪೂರ್ವಜರ ಗುಲಾಮಗಿರಿ ಎಂತಹದ್ದು ಎಂದು ಜಗತ್ತಿಗೇ ತಿಳಿದಿದೆ. ಅಂದು ಬ್ರಿಟಿಷರ ಕಂಪೆನಿ ಸರ್ಕಾರದ ಗುಲಾಮಗಿರಿ, ಇಂದು ಅಂಬಾನಿ – ಅದಾನಿಯಂತಹವರ ಕಂಪೆನಿಗಳ ಗುಲಾಮಗಿರಿ, ನಿಮ್ಮ ಪಕ್ಷದ ಸಿದ್ಧಾಂತವೇ ಹಿಟ್ಲರ್‌ನ ಗುಲಾಮಗಿರಿಯದ್ದು, ಕಾಂಗ್ರೆಸ್ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ನಿಮಗಿಲ್ಲ ಟ್ವಿಟ್ಟರ್ ನಲ್ಲಿ ತಪರಾಕಿ ಹಾಕಿದೆ.

Related Articles

Leave a Reply

Your email address will not be published. Required fields are marked *

Back to top button