ಇತ್ತೀಚಿನ ಸುದ್ದಿರಾಜ್ಯಸುದ್ದಿ

ಗುಂಡ್ಲುಪೇಟೆ: ತೆರಕಣಾಂಬಿ ಜಿಂಕೆ ಸಾವು ಪ್ರಕರಣ ಡಿಆರ್‌ಎಫ್ಓ ರಾಮಲಿಂಗಪ್ಪ ಅಮಾನತು

ಗುಂಡ್ಲುಪೇಟೆ: ಬಫರ್ ಜೋನ್ ವ್ಯಾಪೀಯ ತೆರಕಣಾಂಬಿ ವೀರಭದ್ರೇಶ್ವರ ದೇವಸ್ಥಾನ ಸಮೀಪ ಜಿಂಕೆಯೊಂದು ಸಾವನ್ನಪ್ಪಿತ್ತು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಡಿ.ಆರ್.ಎಫ.ಓ.ರಾಮಲಿಂಗಪ್ಪ ಅಮಾನತು ಮಾಡಿ ಬಂಡೀಪುರ ಸಿ.ಎಫ್.ಡಾ.ರಮೇಶ್ ಕುಮಾರ್ ಆದೇಶ ಮಾಡಿದ್ದಾರೆ

ಜಿಂಕೆಯ ಕಳೆಬರ ಸಿಕ್ಕ ಸ್ಥಳದಲ್ಲಿ ನಿಯಮಾನುಸಾರ ಮಹಜರು ಕ್ರಮ ಜರುಗಿಸಿರುವುದಿಲ್ಲ ಹಾಗೂ ಕಳೆಬರವನ್ನು ಪಶು
ವೈಧ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಯಾವುದೇ ಕ್ರಮ ವಹಿಸದೇ ಇರುವುದು ಕಂಡುಬಂದಿರುತ್ತದೆ ಮತ್ತು ಮೃತಪಟ್ಟ ಜಿಂಕೆಯ ಕಳೆಬರ ಸಿಕ್ಕ ಸ್ಥಳದಿಂದ ಅರಣ್ಯ ಪ್ರದೇಶಕ್ಕೆ ಸಾಗಿಸಲು ಇಲಾಖೆಯ ಖಾಯಂ ಕ್ಷೇತ್ರ ಸಿಬ್ಬಂದಿಗಳನ್ನು ನೇಮಿಸದೆ ಬೆಂಕಿ ನಿರ್ವಹಣೆಗಾಗಿ ನೇಮಕ ಮಾಡಿಕೊಂಡಿರುವ ಹೊರಗುತ್ತಿಗೆ ನೌಕರರ ದ್ವಿಚಕ್ರ ವಾಹನದಲ್ಲಿ ಅರಣ್ಯ ಪ್ರದೇಶದ ಬದಲಾಗಿ ಗುಂಡ್ಲುಪೇಟೆಯ ಕಡೆಗೆ ಸಾಗುವ ರಸ್ತೆಯಲ್ಲಿ ಹೋಗಿ ತ್ರಿಯಂಭಕರಪುರ ಗ್ರಾಮಕ್ಕೆ ತೆರಳುವ ರಸ್ತೆಯಿಂದ (ತ್ರಿಯಂಭಕಪುರ ಗೇಟ್) ಗುಂಡ್ಲುಪೇಟೆ ಕಡೆಗೆ ಸುಮಾರು 50 ಮೀಟರ್ ಒಳಭಾಗದಲ್ಲಿ ನಿಲ್ಲಿಸಿಕೊಂಡು ನಂತರ ಇಲಾಖಾ ವಾಹನದಲ್ಲಿ ಗಸ್ತು ವನಪಾಲಕ ಹಾಗೂ ವಾಹನ ಚಾಲಕರನ್ನು ಕರೆಯಿಸಿಕೊಂಡು ದ್ವಿಚಕ್ರ ವಾಹನದಲ್ಲಿದ್ದ ಮೃತ ಜಿಂಕೆಯನ್ನು ಇಲಾಖಾ ವಾಹನಕ್ಕೆ ವರ್ಗಾಯಿಸಿಕೊಂಡ ಸಂದರ್ಭದಲ್ಲಿ ಸಂಬಂಧಪಟ್ಟ ಉಪ ವಲಯ ಅರಣ್ಯಾಧಿಕಾರಿ ಸ್ಥಳದಲ್ಲಿ ಇರುವುದಿಲ್ಲ. ನಂತರ ಗಸ್ತು ವನಪಾಲಕರು ಇಲಾಖಾ ವಾಹನದಲ್ಲಿ ತೆರಕಣಾಂಬಿ ಗ್ರಾಮ ಬಳಿ ತೆರಳಿದಾಗ ಅಲ್ಲಿ ಉಪ ವಲಯ ಅರಣ್ಯಾಧಿಕಾರಿ
ಗಳು ವಾಹನದಲ್ಲಿ ಹತ್ತಿ ಸಿಬ್ಬಂದಿಗಳನ್ನು ಕರೆದುಕೊಂಡು ಜಿಂಕೆ ಕಳೆಬರ ಸಿಕ್ಕ ಸ್ಥಳಕ್ಕೆ ಹೋಗಿ ನಂತರ 2-3 ನಿಮಿಷಗಳ ಕಾಲ ಅಲ್ಲಿಯೇ ಇದ್ದು ನಂತರ ತೆರಕಣಾಂಬಿ ಸೆಕ್ಷನ್-4 ರ ಅರಣ್ಯ ಪ್ರದೇಶದ ಗುಡ್ಡದ ಟ್ಯಾಂಕ್ ಬಳಿಯ ಅರಣ್ಯ ಪ್ರದೇಶದ ಒಳಭಾಗದಲ್ಲಿ ತೆರಳಿ ಅಲ್ಲಿ ಮೃತ ಜಿಂಕೆಯನ್ನು ವಾಹನದಿಂದ ಕೆಳಗೆ ಇಳಿಸಿ ಗಸ್ತು ವನಪಾಲಕ ಹಾಗೂ ವಾಹನ ಚಾಲಕರಿಗೆ ವಾಹನ ಸಮೇತ ವಾಪಸ್ ತೆರಳುವಂತೆ ತಿಳಿದರೆಂದು ಗಸ್ತು ವನಪಾಲಕ ಹಾಗೂ ವಾಹನ ಚಾಲಕ ರವರುಗಳು ವಿಚಾರಣಾ ಸಮಯದಲ್ಲಿ ತಿಳಿಸಿರುತ್ತಾರೆ ಎಂದು ತಿಳಿಸಿದಾಗ ಉಪ ವಲಯ ಅರಣ್ಯಾಧಿಕಾರಿಗಳಿಗೆ ಕೇಳಲಾಗಿ ವಾಪಸ್ ಹೋಗಲು ತಿಳಿಸಿರುವುದು ನಿಜವೆಂದು ತಿಳಿಸಿರುತ್ತಾರೆ. ಈ ಅಂಶವನ್ನು ಗಮನಿಸಲಾಗಿ ಅಧೀನ ಕ್ಷೇತ್ರ ಸಿಬ್ಬಂದಿಗಳನ್ನು ತಕ್ಷಣವೇ ವಾಪಸ್ ಕಳುಹಿಸಿರುವುದು ಅನುಮಾನ ಮೂಡಿಸುತ್ತಿದೆ. ಮೃತ ಜಿಂಕೆಯ ಕಳೆಬರವನ್ನು ಪಶು ವೈಧ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸದೆ ನೇರವಾಗಿ ಕಳೆಬರವನ್ನು ಒಣಸುಡದೆ ಕ್ರಮ ವಹಿಸಿರುವುದನ್ನು ಗಮನಿಸಿದರೆ ಜಿಂಕೆಯ ಸಾವು ನೈಸರ್ಗಿಕವಾಗಿರುವುದಿಲ್ಲ ಎಂಬ ಅನುಮಾನ ಬಲವಾಗಿ ಮೂಡಿಬರುತ್ತಿದೆ. ಜಿಂಕೆಯ ಕಳೆಬರವನ್ನು ಸುಡುವ ಮುನ್ನ ಮೇಲಾಧಿಕಾರಿಗಳಿಂದ ಅನುಮತಿ ಪಡೆಯದೇ ಹಾಗೂ ಸ್ಥಳ ಮಹಜರು ಕ್ರಮ ಜರುಗಿಸದೇ ವಿಲೇ ಮಾಡಿ ನಿಯಮವನ್ನು ಉಲ್ಲಂಘನೆ ಮಾಡಿರುವುದನ್ನು ಗಮನಿಸಿದರೆ ಜಿಂಕೆಯ ಸಾವಿನ ಬಗ್ಗೆ ಅನುಮಾನ ಬಲವಾಗಿ ಮೂಡಿರುತ್ತದೆ ಉಪ ವಲಯ ಅರಣ್ಯಾಧಿಕಾರಿಗಳು ಅವರು ತೆಗೆದುಕೊಂಡಿರುವ ಕ್ರಮದ ಬಗ್ಗೆ ಯಾವುದೇ ಮಾಹಿತಿ
ಯನ್ನು ತಕ್ಷಣ ವಲಯ ಅರಣ್ಯಾಧಿಕಾರಿಗಳಿಗಾಗಲಿ ಅಥವಾ ವನ್ಯಜೀವಿ ಪ್ರಕರಣದ ವಿಚಾರಣಾಧಿಕಾರಿಗಳಿಗಾಗಲಿ ನೀಡಿರುವುದಿಲ್ಲ ಮತ್ತು ವನ್ಯಜೀವಿ ಅರಣ್ಯ ಮೊಕದ್ದಮೆಯನ್ನು ದಾಖಲು ಮಾಡಲು ಕ್ರವಹಿಸಿರುವುದಿಲ್ಲ
ಸದರಿ ಘಟನೆ ದಿನಾಂಕ 29-01-2024 ರಂದು ಬೆಳಗ್ಗೆ ನಡೆದಿದ್ದು ದಿನಾಂಕ 30-01-2024 ರಂದು ಬೆಳಗ್ಗೆ 10:30 ರ ಸಮಯದಲ್ಲಿ ತೆರಕಣಾಂಬಿ ಹೋಬಳಿಯ ನಿಮ್ಮ ಕಾರ್ಯ ಕ್ಷೇತ್ರ ವ್ಯಾಪ್ತಿಯ ಕಿಲಗೆರೆ ಗ್ರಾಮದ ರೈತರ ಜಮೀನಿನ ತೇಗದ ಮರಗಳ ಸಾಗಾಣೆ ಸಂಬಂಧ ಸ್ಥಳ ಪರಿಶೀಲನೆ ವೇಳೆ ವಿಚಾರಣಾಧಿಕಾರಿಗಳು ನಿಮ್ಮೊಡನೆ ಸರಿಸುಮಾರು 45 ನಿಮಿಷಗಳಿದ್ದರು ಸಹ ಜಿಂಕೆ ಸಾವಿನ ಬಗ್ಗೆ ಏಕೆ ಮಾಹಿತಿ ನೀಡಿರುವುದಿಲ್ಲ ಎಂದು ಕೇಳಲಾಗಿ ಉಪ ವಲಯ ಅರಣ್ಯಾಧಿಕಾರಿಯವರು ಯಾವುದೇ ಉತ್ತರ ನೀಡದಿರುವುದು ಅನುಮಾನಕ್ಕೆ ಸಾಕಷ್ಟು ಪುಷ್ಠಿ ನೀಡಿರುತ್ತದೆ.

ಮೇಲೆ ವಿವರಿಸಿರುವಂತೆ ವಿಚಾರಣಾ ಸಮಯದಲ್ಲಿ ಹಾಗೂ ವಿಚಾರವೇನೆಂದರೆ ರಾಮಲಿಂಗಪ್ಪ ಎಸ್. ಉಪ ವಲಯ ಅರಣ್ಯಾಧಿಕಾರಿ ಇವರು ಜಿಂಕೆಯ ಸಾವಿನ ಸಂಬಂಧ ಮೇಲಾಧಿಕಾರಿಗಳಿಗೆ ಸೂಕ್ತ ಮಾಹಿತಿಯನ್ನು ನೀಡದೆ ಹಾಗೂ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ನಿಯಮಾನುಸಾರ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ವಿಫಲರಾಗಿದ್ದು ಮೃತಪಟ್ಟ ಜಿಂಕೆಯ ಸಾವಿನ ಸತ್ಯ ಸಂಗತಿಗಳನ್ನು ತನಿಖೆ ಮಾಡದೆ ಅಥವಾ ಮಾಹಿತಿಗಳನ್ನು ಸಂಗ್ರಹಿಸಲು ವಿಫಲರಾ
ಗಿರುತ್ತಾರೆ ಅಲ್ಲದೆ ಮೃತ ಜಿಂಕೆಯನ್ನು ಸತ್ತ ಸ್ಥಳದಿಂದ ನೇರವಾಗಿ ಪಶು ವೈದ್ಯಾಧಿಕಾರಿ
ಗಳ ಬಳಿ ತೆಗೆದುಕೊಂಡು ಹೋಗದೆ ಗುಂಡ್ಲುಪೇಟೆ ಮಾರ್ಗವಾಗಿ ತ್ರಿಯಂಭಕಪುರ ಗ್ರಾಮದ ಗೇಟ್ ಬಳಿ ತಂದಿರುವುದು ಅನುಮಾನಾಸ್ಪ
ದವಾಗಿರುತ್ತದೆ. ಹಾಗೂ ಮೃತ ಜಿಂಕೆಯನ್ನು ಸತ್ತ ಸ್ಥಳದಿಂದ ಖುದ್ದಾಗಿ ಉಪ ವಲಯ ಅರಣ್ಯಾಧಿಕಾರಿಗಳು ಸದರಿ ಸ್ಥಳಕ್ಕೆ ಇಲಾಖಾ ವಾಹನ ಹಾಗೂ ಹೆಚ್ಚಿನ ಸಿಬ್ಬಂದಿಗಳನ್ನು ಬರಮಾಡಿಕೊಳ್ಳದೆ ಏಕಾಏಕಿ ಜವಾಬ್ದಾರಿ ಇಲ್ಲದ ಬೆಂಕಿ ನಿರ್ವಹಣೆಗಾಗಿ ನೇಮಕ ಮಾಡಿಕೊಂಡಿರುವ ವೀಕ್ಷಕರಿಂದ ದ್ವಿಚಕ್ರ ವಾಹನದಲ್ಲಿ ಗುಂಡ್ಲುಪೇಟೆ ಮಾರ್ಗ ತ್ರಿಯಂಭಕಪುರ ಗೇಟಿನ ಬಳಿ ಸಾಗಿಸಿರುವುದು ಹಾಗೂ ಉಪ ವಲಯ ಅರಣ್ಯಧಿಕಾರಿಗಳ ಉಪಸ್ಥಿತಿ ಇಲ್ಲದಿದ್ದು ಕಂಡುಬಂದಿರುತ್ತದೆ.

ಇಲಾಖಾ ವಾಹನದಲ್ಲಿ ತ್ರಿಯಂಭಕಪುರ ಗೇಟಿನಿಂದ ಸತ್ತ ಪ್ರಾಣಿಯನ್ನು ಗಸ್ತು ವನಪಾಲಕರು ತೆಗೆದುಕೊಂಡು ತೆರಕಣಾಂಬಿಗೆ ಬಂದಾಗ ಮತ್ತೆ ಇಲಾಖಾ ವಾಹನವನ್ನು ಪ್ರಾಣಿ ಸತ್ತ ಸ್ಥಳಕ್ಕೆ ಕರೆದುಕೊಂಡು ಹೋಗಿ ತದ ನಂತರ ತೆರಕಣಾಂಬಿ ಅನುಮಾನಾಸ್ಪ
ದವಾಗಿರುತ್ತದೆ.ಸೆಕ್ಷನ -4 ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿರುವುದು ಹೇಳಿಕೆಗಳಿಂದ ತಿಳಿದುಬಂದಿರುತ್ತಾದೆ
ಉಪ ವಲಯ ಅರಣ್ಯಾಧಿಕಾರಿ ಯವರು ಯಾವುದೇ ನಿಯಮಗಳನ್ನು ಪಾಲಿಸದೆ ಇರುವುದನ್ನು ಗಮನಿಸಿದರೆ ಜಿಂಕೆಯು ಅನುಮಾನಸ್ಪ
ದವಾಗಿ ಮೃತಪಟ್ಟಿರುವುದಾಗಿ ಕಂಡುಬಂದಿರುತ್ತದೆ.
ನೈಜ ಘಟನೆಯನ್ನು ಮರೆಮಾಚಲು ಉಪ ವಲಯ ಅರಣ್ಯಾಧಿಕಾರಿಪ್ರಯತ್ನಿಸಿರುವುದು ಸ್ಪಷ್ಟವಾಗಿದ್ದು ಇವರಿಗೆ ವಹಿಸಿರುವ ಸರ್ಕಾರಿ ಕರ್ತವ್ಯವನ್ನು ಬೇಜ 6/10 ನಿರ್ವಹಿಸಿ ಮೃತ ಜಿಂಕೆಯ ಸಾವಿಗೆ ಕಾರಣವನ್ನು ತಿಳಿಯಲು ಅಡಚಣೆ ಉಂಟು ಮಾಡಿ ಬೇಜವಾಬ್ದಾರಿಯಿಂದ ವರ್ತಿಸಿ ಕರ್ತವ್ಯ ನಿರ್ಲಕ್ಷತನ ತೋರಿರುವುದರಿಂದ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ವಲಯ ಅರಣ್ಯಾಧಿಕಾರಿ, ಗುಂಡ್ಲುಪೇಟೆ ಬಫರ್ ಜೋನ್ ವಲಯ ರವರು ಶಿಫಾರಸ್ಸು ಮಾಡಿರುತ್ತಾರೆ.

ಮೇಲಿನ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ರಾಮಲಿಂಗಪ್ಪ ಎಸ್, ಉಪ ವಲಯ ಅರಣ್ಯಾಧಿಕಾರಿ ಇವರು ಜಿಂಕೆಯ ಸಾವಿನ ಸಂಬಂಧ ಮೇಲಾಧಿಕಾರಿಗಳಿಗೆ ಸೂಕ್ತ ಮಾಹಿತಿಯನ್ನು ನೀಡದೆ ಹಾಗೂ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ನಿಯಮಾನುಸಾರ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ತಿಳಿಸಲಾಗಿದ್ದರು ಸಹ ಯಾವುದೇ ನಿಯಮಗಳನ್ನು ಪಾಲಿಸದೆ ಇರುವುದನ್ನು ಗಮನಿಸಿದರೆ ಅನುಮಾನಸ್ಪದವಾಗಿ ಮೃತಪಟ್ಟಿರುವುದಾಗಿ ಕಂಡುಬಂದಿರುತ್ತದೆ. ನೈಜ ಘಟನೆಯನ್ನು ಮರೆಮಾಚಲು ರಾಮಲಿಂಗಪ್ಪ ಎಸ್, ಉಪ ವಲಯ ಅರಣ್ಯಾಧಿಕಾರಿ ಇವರು ಪ್ರಯತ್ನಿಸಿರುವುದು ಸ್ಪಷ್ಟವಾಗಿ ವಿಚಾರಣೆಯಲ್ಲಿ ಸಾಭೀತಾಗಿರುವುದರಿಂದ ನೀವು ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿದ್ದು, ನಿಮಗೆ ವಹಿಸಿದ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಾಗಿದ್ದು, ದಿನಾಂಕ: 29-01-2024 ರಂದು ಒಂದು ಜಿಂಕೆಯು ಗುಂಡೇಟಿನಿಂದ ಸಾವನ್ನಪ್ಪಿದ್ದು ಸದರಿ ಜಿಂಕೆಯು ಆದುದ್ದರಿಂದ ಉಲ್ಲೇಖ ಪತ್ರ (3) ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗುಂಡ್ಲುಪೇಟೆ ಉಪ ವಿಭಾಗ ಗುಂಡ್ಲುಪೇಟೆ ಇವರು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ಜಿಂಕೆಯು ಅನುಮಾನಸ್ಪದವಾಗಿ ಮೃತಪಟ್ಟಿರುವುದಾಗಿ ಕಂಡು ಬಂದಿದ್ದು, ಘಟನೆಯನ್ನು ಮರೆಮಾಚಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಸಾಭೀತಾಗಿರುವುದು ಕಂಡು ಬಂದಿರುತ್ತದೆ. ಈ ಎಲ್ಲಾ ನಿಮ್ಮ ಕರ್ತವ್ಯದ ಜವಾಬ್ದಾರಿಯನ್ನು ಗಮನಿಸಿದಾಗ ನಿಮ್ಮ ಕರ್ತವ್ಯ ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿತನ ತೋರುತ್ತಿರುವುದು ಹಾಗೂ ಸರ್ಕಾರಿ ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು ಕಂಡು ಬಂದಿರುವುದರಿಂದ ಕರ್ನಾಟಕ ರಾಜ್ಯ ನಾಗರಿಕ ನಿಮ್ಮ ಮೇಲೆ ಕೆ.ಸಿ.ಎಸ್.ಆರ್ ನಿಯಮ 108 ರ ಪ್ರಕಾರ ಏಕೆ ಶಿಸ್ತುಕ್ರಮ ಜರುಗಿಸಬಾರದೆಂಬುದಕ್ಕೆ ಉಲ್ಲೇಖ ಪತ್ರ (4) ರಲ್ಲಿ ಈ ಕಛೇರಿಯಿಂದ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿತ್ತು

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಗುಂಡ್ಲುಪೇಟೆ ಉಪವಿಭಾಗ, ಗುಂಡ್ಲುಪೇಟೆ ಹಾಗೂ ವಲಯ ಅರಣ್ಯಾಧಿಕಾರಿ, ಗುಂಡ್ಲುಪೇಟೆ ಬಫ‌ರ್ ಜೋನ್ ವಲಯ, ಗುಂಡ್ಲುಪೇಟೆ ಇವರ ವರದಿಯನ್ನು ಪರಿಶೀಲಿಸಲಾಗಿ ಸದರಿ ಪ್ರಕರಣವನ್ನು ಮರೆಮಾಚಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಸಾಭೀತಾಗಿರುವುದು ಕಂಡು ಬಂದಿರುವುದರಿಂದ ಹಾಗೂ ಈ ಎಲ್ಲಾ ನಿಮ್ಮ ಕರ್ತವ್ಯದ ಜವಾಬ್ದಾರಿಯನ್ನು ಗಮನಿಸಿದಾಗ ನಿಮ್ಮ ಕರ್ತವ್ಯ ನಿರ್ಲಕ್ಷ್ಯತೆ ಬೇಜವಾಬ್ದಾರಿತನ ತೋರುತ್ತಿರುವುದು ಹಾಗೂ ಸರ್ಕಾರಿ ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು ಕಂಡು ಬಂದಿದು 15-02-2024 ರಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಪಡಿಸಿ ಆದೇಶ ಮಾಡಲಾಗಿದೆ

Related Articles

Leave a Reply

Your email address will not be published. Required fields are marked *

Back to top button