ಇತ್ತೀಚಿನ ಸುದ್ದಿರಾಜ್ಯ

ಗುಂಡ್ಲುಪೇಟೆ ಗೋಹತ್ಯೆ ಪ್ರಕರಣ ದೂರು ಸಲ್ಲಿಕೆ

ಗುಂಡ್ಲುಪೇಟೆ: ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದ ಪಕ್ಕದ ಜಮೀನಿನಲ್ಲಿ ಅಕ್ರಮವಾಗಿ ಗೋ ಹತ್ಯೆ ಮಾಡಿ ಅದರ ಮಾಂಸವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕಾನೂನು ವಹಿಸುವಂತೆ ಹಿಂದೂ ಜಾಗಣ ವೇದಿಕೆಯಿಂದ ಸಬ್ ಇನ್ ಪೆಕ್ಟರ್ ಸಾಹೇಬ್ ಗೌಡರಿಗೆ ದೂರು ನೀಡಿದ್ದಾರೆ

ಗುಂಡ್ಲುಪೇಟೆ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕದ ಪಕ್ಕದ ಜಮೀನಿನಲ್ಲಿ ಕೆಎ 54 – 98 53 ಎಂಬ ಲಾರಿ ಯೊಂದರಲ್ಲಿ ಹಸುಗಳನ್ನು ತುಂಬಿಕೊಂಡು ಬಂದು ಅದನ್ನು ಅಕ್ರಮವಾಗಿ ಹತ್ಯೆ ಮಾಡಿ ಅದರ ಮಾಂಸವನ್ನು ಹಾಗೂ ಗೋವಿನ ಮೂಳೆ ಮತ್ತು ಇನ್ನಿತರ ಭಾಗವನ್ನು ಮಾರಾಟ ಮಾಡುವ ಜಾಲವನ್ನು ಹಿಂದಾಉ ಜಾಗಣ ವೇದಿಕೆ ಕಾರ್ಯಕರ್ತರು ಮತ್ತು ಸ್ಥಳೀಯ ಸಾರ್ವಜನಿಕರು ಪತ್ತೆ ಹಚ್ಚಿ ಪುರಸಭೆ ಹಾಗೂ ಪೊಲೀಸ್ ಮಾಹಿತಿ ನೀಡಿರುತ್ತಾರೆ ಹಾಗೂ ಅಕ್ರಮ ಗೋ ಹತ್ಯೆ ಚಟುವಟಿಕೆಯಲ್ಲಿ ಶಿಂಡನಪುರ ಗ್ರಾಮದ ಜಡಿಯ ಮತ್ತು ಹಂಗಳ ಗ್ರಾಮದ ಕೆಲವು ವ್ಯಕ್ತಿಗಳು ಭಾಗಿಯಾಗಿರುತ್ತಾರೆ ಹಾಗೂ ಗೋ ಸಾಗಾಟಕ್ಕೆ ಬಳಸಿದಲಾರಿ
ಇವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಜರಗಿಸಿ ವಾಹನವನ್ನು ವಶಪಡಿಸಿ
ಕೊಂಡು ತನಿಖೆ ಮಾಡಬೇಕಾಗಿ ಹಾಗೂ ಗುಂಡ್ಲುಪೇಟೆ ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಗೋ ಹತ್ಯೆ ಸಂಖ್ಯೆ ಹೆಚ್ಚಾಗಿದ್ದು ಹಾಗೂ ರಸ್ತೆ ಬದಿಯಲ್ಲಿ ಇರುವ ಹಲವಾರು ಹೊಟೇಲ್ ಗಳಲ್ಲಿ ಗೋ ಮಾಂಸಗಳ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿರುತ್ತಾರೆ ಹಾಗೂ ಅಕ್ರಮ ಕಸಾಯಖಾನಿ
ಗಳನ್ನು ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಮತ್ತು ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿರುವ ಪುರಸಭೆ ಹಾಗೂ ಪೊಲೀಸ್ ಇಲಾಖೆಯವರು ಈ ಕೃತ್ಯ ನಡೆಸುತ್ತಿರುವವರ ವಿರುದ್ಧ ಈ ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಚೆಕ್ ಪೋಸ್ಟ್ ಗಳಲ್ಲಿ ಅಕ್ರಮವಾಗಿ ಗೋಸಾಗಾಟ ಮಾಡುತ್ತಿರುವವರ ವಾಹನವನ್ನು ಪರಿಶೀಲನೆ ಮಾಡಬೇಕು ಎಂದು ಈ ಮೂಲಕ ಗುಂಡುಪೇಟೆ ತಾಲೂಕಿನ ಹಿಂದೂ ಜಾಗರಣ ವೇದಿಕೆ ವತಿಯಿಂದ ಕೇಳಿಕೊಳ್ಳುತ್ತಿದ್ದೇವೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ತಿಳಿಸಿದರು

ಈಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ನಂದೀಶ ಮಡಹಳ್ಳಿ ನಾಗೇಂದ್ರ (ಪಾನು) ಹಾಗೂ ಇತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button