ರಾಜ್ಯ
Trending

ಗಣಿತಿಕಾರರಿಗೆ ಕಿಟ್ ವಿತರಣೆ -ಸಮಿಕ್ಷಾ ಕಾರ್ಯದ ಸ್ಥಳಗಳಿಗೆ ತಹಶಿಲ್ದಾರ ಬೆಟ್ಟಿ ಪರಿಶೀಲನೆ

ಪರಿಶಿಷ್ಠ ಜಾತಿ ಒಳ ಮಿಸಲಾತಿ ಸಮೀಕ್ಷೆ ಕಾರ್ಯ ಬಹಳ ಎಚ್ಚರದಿಂದ ಹಾಗೂ ಜಾಗೃತಿಯಿಂದ ಕೈಗೊಳ್ಳಿ ಸಮಿಕ್ಷಾ ಕಾರ್ಯದ ಸಮಯದಲ್ಲಿ ಯಾವುದೇ ತಪ್ಪಾಗದಂತೆ ಏಚ್ಚರವಹಿಸಬೇಕೆಂದು ತಾಲೂಕಾ ತಹಶಿಲ್ದಾರ ಶ್ರೀಮತಿ ಡಾ.ವಿನಯಾ ಹೂಗಾರ ಅವರು ಹೇಳಿದರು.

ತಹಶಿಲ್ದಾರ ಕಾರ್ಯಾಲಯದಲ್ಲಿ ನಡೆದ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗ (ಪರಶಿಷ್ಠ ಜಾತಿ ಒಳ ಮಿಸಲಾತಿ ವರ್ಗಿಕರಣ) ತಾಲೂಕಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರದ ನಂತರ ಸಮಿಕ್ಷಾ ಕಾರ್ಯಕೈಗೊಳ್ಳುವವರಿಗೆ ಸಮಿಕ್ಷಾ ಕಿಟ್ ವಿತರಿಸಿ ಮಾತನಾಡಿದ ಅವರು ಈಗಾಗಲೇ ಒಳ ಮಿಸಲಾತಿಯ ಸಂಬಂದಿಸಿ ಸಮಿಕ್ಷಾ ಕಾರ್ಯದ ಕುರಿತು ತರಬೇತಿಯನ್ನು ನೀಡಲಾಗಿದೆ ಭಾರತ ಸಂವಿದಾನದ ೩೪೧ನೇ ವಿಧಿಯ ಅಡಿಯಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಠ ಜಾತಿಯ ಪಟ್ಟಿಯಲ್ಲಿ ೧೦೧ ಜಾತಿಗಳನ್ನು ಗುರುತಿಸಲಾಗಿದೆ ಮಿಸಲಾತಿ ಸೌಲಭ್ಯಗಳು ಎಲ್ಲಾ ಸಮಾನ ಅವಕಾಶ ಕಲ್ಪಿಸಲು ಒಳ ಮೀಸಲಾತಿ ವರ್ಗಿಕರಣ ಸ್ಪಷ್ಟವಾಗಿ ಮಾಹಿತಿ ಒದಗಿಸಲು ಆಯೋಗವು ಸಮನ್ವಯ ಸಮಿತಿ ರಚಿಸಲಾಗಿದೆ ಈಗಾಗಲೇ ತಾಲೂಕಾ ಮಟ್ಟದಲ್ಲಿ ಎಲ್ಲ ತರಬೇತಿಯನ್ನು ನೀಡಲಾಗಿದ್ದು ಗಣತಿದಾರರು ಕಡ್ಡಾಯವಾಗಿ ಶಿಕ್ಷಕರನ್ನೇ ಆಯ್ಕೆ ಮಾಡಲಾಗಿದ್ದು ಗಣಿತಿದಾರರು ಪ್ರತಿ ಮನೆ ಮನೆಗೆ ಬೆಟ್ಟಿ ನೀಡಿ ಸಂಪೂರ್ಣ ಮತ್ತು ಸ್ಪಷ್ಟವಾದ ಮಾಹಿತಿ ಪಡೆದುಕೊಂಡು ಅತ್ಯಂತ ಏಚ್ಚರಿಕೆಯಿಂದ ಸಮಿಕ್ಷೆ ನಡೆಸಬೇಕೆಂದು ತಹಶಿಲ್ದಾರ ಡಾ.ವಿನಯಾ ಹೂಗಾರ ಅವರು ಹೇಳಿದರು.

ಸಮಿಕ್ಷಾ ಸ್ಥಳಕ್ಕೆ ತಹಶಿಲ್ದಾರರ ಬೆಟ್ಟಿ ಪರಿಶೀಲನೆ :-

ಪರಶಿಷ್ಠ ಜಾತಿ ಒಳ ಮಿಸಲಾತಿ ಸಮಿಕ್ಷಾ ಕಾರ್ಯ ನಡೆಯುವ ಸ್ಥಳಗಳಿಗೆ ತಹಶಿಲ್ದಾರ ಡಾ.ವಿನಯಾ ಹೂಗಾರ ಅವರು ಮಂಗಳವಾರರಂದು ಬೆಟ್ಟಿ ನೀಡಿ ಪರಿಶೀಲನೆ ನಡೆಸಿದರು.ಗಣತಿ ಕಾರ್ಯದ ಸಮಯದಲ್ಲಿ ಅಲ್ಲಿಯ ಜನರೊಂದಿಗೆ ಸಮನ್ವಯತೆ ಸಾದಿಸುದರಬಗ್ಗೆ ಹಾಗೂ ಗಣತಿ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಏಚ್ಚರ ವಹಿಸಲು ಸಮಿಕ್ಷಾ ಕಾರರಿಗೆ ತಿಳಿಸಿದರಲ್ಲದೇ ಪರಿಶಿಷ್ಠ ಜಾತಿ ಸಮುದಾಯದವರು ವಾಸಿಸುವ ಎಲ್ಲ ಬಡಾವಣೆಗಳಿಗೆ ಬೆಟ್ಟಿ ನೀಡಿದ ಅವರು ಗಣತಿ ಕಾರರಿಗೆ ಸರಿಯಾದ ಮಾಹಿತಿ ಒದಗಿಸುವ ಬಗ್ಗೆ ಜನರೊಂದಿಗೆ ಚರ್ಚಿಸಿ ತಿಳಿಸಿದರು.

ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ತಹಶಿಲ್ದಾರ ಕಾರ್ಯಾಲಯದ ಕಂದಾಯ ಅಧಿಕಾರಿ ಜಗದೀಶ ಜೈನಾಪೂರ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಎಸ್.ಎನ್.ಮಲ್ಲಾಡೆ, ಎಸ್.ಎಂ.ಕಲ್ಬುರ್ಗಿ, ಮಂಜುನಾಥ ನರ್ಸುಣಗಿ, ಎನ್.ವ್ಹಿ.ಕೋರಿ, ಎನ್.ಸಿ.ಗುಡಗುಂಟಿ, ಸಿ.ಆರ್.ಸಿ.ರಾಜು ವಿಜಾಪೂರ, ಮೊದಲಾದವರು ಇದ್ದರು.

Related Articles

Leave a Reply

Your email address will not be published. Required fields are marked *

Back to top button