ಗಂಗೆ ಯಾರ ಸ್ವತ್ತಲ್ಲ- ಡಿಕೆ ಶಿವಕುಮಾರ್

ಗಂಗೆಯಲ್ಲಿ ಮಿಂದ ತಕ್ಷಣ ಡಿಕೆ ಶಿವಕುಮಾರ್ (DK Shivakumar) ಅವರ ಪಾಪಗಳೆಲ್ಲ ಕಳೆದುಹೋಗುತ್ತಾ? ಎಂಬ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಹೇಳಿಕೆಗೆ ಡಿಸಿಎಂ ಡಿಕೆ ಶಿಕವಕುಮಾರ್ ತಿರುಗೇಟು ನೀಡಿದ್ದಾರೆ. ಕುಂಭಮೇಳಕ್ಕೆ ಹೋಗುವುದು ಬಿಡುವುದು ನನ್ನ ವೈಯಕ್ತಿಕ ವಿಚಾರ. ನನ್ನ ವೈಯಕ್ತಿಕ ನಂಬಿಕೆ, ಭಕ್ತಿ ಬಗ್ಗೆ ಮಾತನಾಡುವ ನೈತಿಕತೆ ಯಾರಿಗೂ ಇಲ್ಲ. ಎಲ್ಲರಿಗೂ ಅವರದ್ದೇ ಆದ ಭಕ್ತಿ, ನಂಬಿಕೆಗಳು ಇರುತ್ತವೆ ಎಂದು ವಾಗ್ದಾಳಿ ಮಾಡಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇದು ನಮ್ಮ ಧರ್ಮ-ಕರ್ಮ, ನಮ್ಮ ಆಚಾರ-ವಿಚಾರ ಮತ್ತು ನಮ್ಮ ನಂಬಿಕೆ. ಗಂಗೆ, ಕಾವೇರಿ, ಕೃಷ್ಣ ಮತ್ತು ಭ್ರಹ್ಮಪುತ್ರ ನದಿಗಳು ಯಾರ ಸ್ವತ್ತು ಅಲ್ಲ. ಹಾಗಾದರೆ, ಅವರು ಅಶೋಕ್ ಅಂತ ಯಾಕೆ ಹೆಸರು ಇಟ್ಟುಕೊಂಡಿದ್ದಾರೆ. ಅಶೋಕ್ ಬದಲು ಕಲ್ಲು ಮಣ್ಣು ಎಂದು ಹೆಸರು ಇಟ್ಟುಕೊಳ್ಳಬಹುದಲ್ಲ. ನನ್ನ ನಂಬಿಕೆ ಬಗ್ಗೆ ಮಾತಾಡುವ ಅಶೋಕ್ ಅವರಿಗೆ ಏನೋ ಸಮಸ್ಯೆ ಇರಬೇಕು. ಮೊದಲು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಿ. ನನ್ನ ಹೆಸರು ಹೇಳದಿದ್ರೆ ಕೆಲವರಿಗೆ ನಿದ್ದೆ ಬರುವುದಿಲ್ಲ, ಉತ್ಸಾಹ ಬರಲ್ಲ ಎಂದು ಆಕ್ರೋಶಗೊಂಡರು.