ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಶಾಸಕ ನಾಡಗೌಡ ಚಾಲನೆ
ಮುಂಜಾನೆ ವಾರ್ತೆ ಸುದ್ದಿ ತಾಳಿಕೋಟಿ: ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ ಅಪ್ಪಾಜಿ ಅವರು ಸುಮಾರು 17.36 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ತಾಳಿಕೋಟಿ ತಾಲೂಕಿನ ವ್ಯಾಪ್ತಿಗೆ ಬರುವ ತಾಳಿಕೋಟಿ- ಹಡಗಿನಾಳ ರೂ. 5 ಕೋಟಿ ಮೊತ್ತದ ಮುಖ್ಯ ಸಂಪರ್ಕ ರಸ್ತೆ. ತಾಳಿಕೋಟಿ ಮೂಕಿಹಾಳ ಮುಖ್ಯ ರಸ್ತೆಯಿಂದ ಹಳೆ ಹಡಗಿನಾಳ ಗ್ರಾಮಕ್ಕೆಕೂಡು ರಸ್ತೆರೂ. 2.25 ಕೋಟಿ. ಪಟ್ಟಣದ ದೇವರ ಹಿಪ್ಪರಗಿ ರಸ್ತೆಯ ರಾಜ್ಯ ಹೆದ್ದಾರಿ 124 ಬಾರಖೇಡ ಬೀಳಗಿ ಮೊತ್ತ ರೂ. 5 ಕೋಟಿಯ ದ್ವಿಪಥ ರಸ್ತೆ. ಪಟ್ಟಣದ ಎಪಿಎಂಸಿ ಪ್ರಾಂಗಣ ರಸ್ತೆ ಅಭಿವೃದ್ಧಿ ರೂ.2 ಕೋಟಿ. ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪಟ್ಟಣದ ಮಿಲ್ಲತ್ ಹಾಗೂ ಟಿಪ್ಪು ನಗರದಲ್ಲಿ ರೂ. 1.50 ಕೋಟಿ ಮೊತ್ತದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ಹಾಗೂ ಪಟ್ಟಣದಲ್ಲಿ ನಿರ್ಮಾಣಗೊಳ್ಳಲಿರುವ ಇಂದಿರಾ ಕ್ಯಾಂಟೀನಗೆ ಭೂಮಿ ಪೂಜೆಯನ್ನು ಅವರು ನೆರವೇರಿಸಿದರು. ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಬೂಬ ಚೋರಗಸ್ತಿ. ಪ್ರಭುಗೌಡ ಮದರಕಲ್ಲ. ಸುರೇಶಗೌಡ ನಾಡಗೌಡ(ಬಿಜಲಬಾವಿ) ಸಿದ್ದನಗೌಡ ಪಾಟೀಲ ನಾವದಗಿ. ಶರಣುಧಣಿ ದೇಶಮುಖ. ಚಿನ್ನುಧಣಿ ದೇಶಮುಖ. ಬಸನಗೌಡ ಜೈನಾಪುರ.ಬಿ.ಎಂ.ಪಾಟೀಲ ತಮದಡ್ಡಿ. ಬಸವರಾಜ ಕುಂಬಾರ. ಸಂಗನಗೌಡ ಅಸ್ಕಿ. ವೀರೇಶ ಬಾಗೇವಾಡಿ. ಇಬ್ರಾಹಿಂ ಮನ್ಸೂರ.ಸಿಕಂದರ ವಠಾರ. ಕಾಸೀಮಪಟೇಲ ಮೂಕಿಹಾಳ. ಅಬ್ದುಲ್ ಸತ್ತಾರ ಅವಟಿ. ಮೋದಿನ ನಗಾರ್ಚಿ. ಫಯಾಜ ಉತ್ನಾಳ.ರಫೀಕ ಬೇಪಾರಿ. ಶಿವಕುಮಾರ ದೇಶಮಾನೆ. ಕಾಶಿನಾಥ ದೇಸಾಯಿ. ಕಾರ್ತಿಕ್ ಕಟ್ಟಿಮನಿ.ನಬಿ ಗುತ್ತಿಹಾಳ. ಮುನ್ನಾ ಅರ್ಜುಣಗಿ. ಮೆಹಬೂಬ ಕೆಂಭಾವಿ.ರಹೆಮಾನ ವಠಾರ. ತನ್ವೀರ ಮನಗೂಳಿ. ಗೋಪಾಲ ಕಟ್ಟಿಮನಿ ಆಸೀಫ ಕೆಂಭಾವಿ. ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ. ಎಇ ಇ ಸಂಗಮೇಶ ಶಿವನಗುತ್ತಿ. ಅಭಿಯಂತರರಾದ ಮಾಂತೇಶ ಜಮ್ಮಲದಿನ್ನಿ ಪ್ರವೀಣ ಆರ್ ಬಿರಾದಾರ ಗೊಟಖಂಡಕಿ .ವಠಾರ ಹಾಗೂ ಪುರಸಭೆ ಸಿಬ್ಬಂದಿಗಳು ಇದ್ದರು.