ಕ್ರೀಡೆಗಿಂತ ಯಾರೂ ದೊಡ್ಡವರಲ್ಲ ವಿರಾಟ್, ರೋಹಿತ್ ವಿರುದ್ಧ ಠಾಕೂರ್ ಗರಂ..
ನವದೆಹಲಿ, ಡಿ.15- ಟೀಂ ಇಂಡಿಯಾದ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರ ನಡುವಿನ ವಿರಸದ ವಿಚಾರವು ತಾರಕಕ್ಕೇರಿರುವ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಗರಂ ಆಗಿದ್ದಾರೆ.ಆಟಗಾರರಿಗಿಂತ ಕ್ರೀಡೆಯು ಮಹತ್ತರವಾಗಿದ್ದು ಅದನ್ನು ಉಳಿಸಲು ನಾನು ಸದಾ ಸಿದ್ಧವಾಗಿದ್ದೇನೆ, ಈಗ ಬಿಸಿ ಬಿಸಿ ಚರ್ಚೆಯಾಗುತ್ತಿರು ಭಾರತದ ಏಕದಿನ ಹಾಗೂ ಟ್ವೆಂಟಿ-20 ನಾಯಕ ರೋಹಿತ್ ಶರ್ಮಾ ಹಾಗೂ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ನಡುವೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಬಿಸಿಸಿಐ, ಫೆಡರೇಷನ್ ಹಾಗೂ ಅಸೋಸಿಯೇಷನ್‍ನಿಂದ ಮಾಹಿತಿಯನ್ನು ಕಲೆ ಹಾಕಿ ಅವರ ನಡುವಿನ ವಿಷಯವನ್ನು ತಿಳಿಗೊಳಿಸುತ್ತೇನೆ ಎಂದು ಅನುರಾಗ್ ಠಾಕೂರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕ್ರೀಡೆಯೇ ಸುಪ್ರೀಂ ಆಗಿದ್ದು ಅದರ ಮುಂದೆ ಯಾವ ಆಟಗಾರರು ಮುಖ್ಯವಾಗುವುದಿಲ್ಲ, ನಾನು ಭಾರತದ ನಾಯಕರ ಕುರಿತು ಬಿಸಿಸಿಐ, ಫೆಡರೇಷನ್ ಹಾಗೂ ಅಸೋಸಿಯೇಷನ್‍ನಿಂದ ಮಾಹಿತಿ ಪಡೆದ ನಂತರವೇ ನಾನು ಅದರ ಬಗ್ಗೆ ಪ್ರತಿಕ್ರಿಯಿಸುತ್ತೆಯೇ ಹೊರತು ಅದಕ್ಕೂ ಮುನ್ನ ನಾನು ಅವರ ಬಗ್ಗೆ ಯಾವ ಹೇಳಿಕೆಯನ್ನು ನೀಡುವುದಿಲ್ಲ ಎಂದು ಹೇಳಿದರು.
ಚುಟುಕು ವಿಶ್ವಕಪ್‍ನ ನಂತರ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಒಟ್ಟಿಗೆ ಪಂದ್ಯದಲ್ಲಿ ಕಾಣಿಸಿಕೊಳ್ಳ ದಿರುವುದರಿಂದ ಅವರ ನಡುವೆ ವಿರಸ ಉಂಟಾಗಿದೆ ಎಂಬ ಸುದ್ದಿ ಹಬ್ಬಿರುವ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಿರುವುದು ಮಹತ್ತರ ಪಡೆದುಕೊಂಡಿದೆ.