ವಿದೇಶ

ಕೋವಿಡ್ ಇದ್ಯಾ ಇಲ್ವಾ ಅಂತ ನಾಯಿಗಳು ಗುರುತಿಸುತ್ತವಂತೆ, ಇದರ ರಿಸಲ್ಟ್ ಯಾವಾಗ್ಲೂ ಸರಿಯಾಗೇ ಇರುತ್ತಂತೆ!

ಸಾಮಾನ್ಯವಾಗಿ ನಮ್ಮ ದೇಶದಲ್ಲಿ(Country) ಯಾವುದಾದರೂ ಮನೆ(Home) ಕಳ್ಳತನವಾದರೆ(Robbery) ಅಲ್ಲಿ ಕಳ್ಳರ(Thief) ವಾಸನೆ ಗ್ರಹಿಸಿ ಅವರು ಯಾವ ಕಡೆ ಓಡಿ ಹೋಗಿದ್ದಾರೆ ಎನ್ನುವುದನ್ನು ಪೊಲೀಸರ(Police) ಬಳಿ ಇರುವ ತರಬೇತಿ ಪಡೆದ ಶ್ವಾನಗಳು)Dogs) ಆ ಕಳ್ಳರ ಬಗ್ಗೆ ಸುಳಿವು ನೀಡುವ ಕೆಲಸ ಮಾಡುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಈ ಶ್ವಾನಗಳನ್ನು ಅಮೆರಿಕದಲ್ಲಿ(America) ಬೇರೆ ಒಂದು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅದೇನು ಅಂತೀರಾ? ಯುಎಸ್‌ನ ಒಂದು ಜಿಲ್ಲೆಯ ಶಾಲೆಗಳಲ್ಲಿ ಶ್ವಾನಗಳನ್ನು ಸಾರ್ವಜನಿಕರ ಆರೋಗ್ಯ ರಕ್ಷಕರು ಎಂದು ಕರೆಯಲಾಗುತ್ತಿದೆ ಮತ್ತು ಅದೇ ರೀತಿಯ ಒಂದು ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಕೊರೋನಾ ಸೋಂಕು ಪತ್ತೆ ಹಚ್ಚಲು  ಶ್ವಾನಗಳ ಬಳಕೆ

ಸುಮಾರು ಎರಡು ವರ್ಷಗಳಿಂದ ಇಡೀ ಜಗತ್ತಿಗೆ ದೊಡ್ಡ ತಲೆ ನೋವಾಗಿರುವ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ನಾನಾ ದೇಶಗಳು ಮಾಡುತ್ತಿರುವ ಪ್ರಯತ್ನಗಳು ಒಂದೆರಡಲ್ಲ. ಕೋವಿಡ್ ಸಂಭಾವ್ಯ ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ಮಸಾಚುಸೆಟ್ಸ್ ನಗರದ ಶಾಲೆಯಲ್ಲಿ ವಿಶೇಷ ತರಬೇತಿ ಪಡೆದ ನಾಯಿಗಳಾದ ಹಂಟಾ ಮತ್ತು ಡ್ಯೂಕ್‌ರನ್ನು ಶಾಲೆಯ ಸಭಾಂಗಣಗಳಲ್ಲಿ ತಿರುಗಾಡಲು ಮತ್ತು ವಿದ್ಯಾರ್ಥಿಗಳನ್ನು ಮೂಸಿ ನೋಡಲು ನೇಮಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸುದ್ದಿ ಮಾಧ್ಯಮದ ವರದಿಯ ಪ್ರಕಾರ, 14 ತಿಂಗಳ ಲ್ಯಾಬ್ರಡಾರ್‌ಗಳನ್ನು ಫ್ರೀಟೌನ್-ಲೇಕ್ ವಿಲ್ಲೆ ರೀಜನಲ್ ಸ್ಕೂಲ್ ಜಿಲ್ಲೆಗಳ ಶಾಲೆಗಳ ಕ್ಯಾಂಪಸ್‌ಗಳಲ್ಲಿ ತಿರುಗಾಡಲು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎರಡು ನಾಯಿಗಳಿಗೆ ಬ್ರಿಸ್ಟಲ್ ಕೌಂಟಿ ಶೆರಿಫ್ ಕಚೇರಿ ಮತ್ತು ಫ್ಲೋರಿಡಾ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ತರಬೇತಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಎರಡು ನಾಯಿಗಳ ಫೋಟೋಗಳನ್ನು ಬ್ರಿಸ್ಟಲ್ ಕೌಂಟಿ ಶೆರಿಫ್ ಕಚೇರಿ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯ ಪುಟದಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಫೋಟೋ ಹಂಚಿ ಕೊಳ್ಳುವುದರ ಜೊತೆಗೆ ಇವರು “ಕೆ9ರ ಹಂಟಾ ಮತ್ತು ಡ್ಯೂಕ್ ಇಂದು ಕೆಲವು ಕೋವಿಡ್ ಪ್ರಕರಣಗಳ ಪತ್ತೆ ಕಾರ್ಯಕ್ಕಾಗಿ ನಾರ್ಟನ್ ಮಿಡಲ್ ಸ್ಕೂಲ್‌ಗೆ ಭೇಟಿ ನೀಡಿದವು. ಸುಪರಿಟೆಂಡೆಂಟ್ ಬೇಟಾ ಮತ್ತು ನಾರ್ಟನ್ ಸ್ಕೂಲ್ ಸಿಬ್ಬಂದಿಗಳಿಗೆ ಮತ್ತು ಫೋರೆಂಸಿಕ್ ಸಿಬ್ಬಂದಿಯ ಸಹಾಯಕ್ಕಾಗಿ ಧನ್ಯವಾದಗಳು” ಎಂದು ಶೀರ್ಷಿಕೆಯಲ್ಲಿ ಬರೆದಿರುವುದನ್ನು ಸಹ ನೋಡಬಹುದಾಗಿದೆ.

ಕೋವಿಡ್ ಪಾಸಿಟಿವ್ ಇರುವ ರೋಗಿಯು ಧರಿಸಿದ್ದ ಮಾಸ್ಕ್‌ಗಳನ್ನು ಈ ಪತ್ತೆ ಮಾಡುವ ಕಾರ್ಯದಲ್ಲಿ ಬಳಸಲಾಯಿತು. ಯುವಿ ಬೆಳಕಿನಿಂದ ವೈರಸ್ ಅನ್ನು ಕೊಂದ ನಂತರ, ಮಾಸ್ಕ್ ಅನ್ನು ಅನೇಕ ತುಂಡುಗಳಾಗಿ ಕತ್ತರಿಸಿ ಅದನ್ನು ನಂತರ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ನಾಯಿಗಳಿಗೆ ಆ ವಾಸನೆ ಕಂಡು ಹಿಡಿಯಲು ಇರಿಸಲಾಗುತ್ತದೆ.ಕೋವಿಡ್ ಸೋಂಕು ತಗುಲಿದ ರೋಗಿಗಳ ಚಯಾಪಚಯ ಕ್ರಿಯೆಯಲ್ಲಿ ಒಂದು ನಿರ್ದಿಷ್ಟವಾದ ವಾಸನೆಯನ್ನು ಉತ್ಪಾದಿಸುತ್ತದೆ, ಆದ್ದರಿಂದಲೇ ಇದನ್ನು ಎಫ್‌ಐಯು ಸಂಶೋಧನೆಯ ಆಧಾರದ ಮೇಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣಗಳ ಹರಡುವಿಕೆಯನ್ನು ಈ ಎರಡು ನಾಯಿಗಳು ತಡೆಗಟ್ಟಲು ಸಹಾಯ ಮಾಡುತ್ತವೆ ಎಂದು ಸಂಸ್ಥೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಜೊನಾಥನ್ ಡಾರ್ಲಿಂಗ್ ಹೇಳಿದರು.

ಕೋವಿಡ್ ಪ್ರಕರಣಗಳನ್ನು ಪತ್ತೆ ಹಚ್ಚಲು ನಾಯಿಗಳನ್ನು ಏಕೆ ಬಳಸಲಾಗುತ್ತಿದೆ?

ಲಂಡನ್ ಸ್ಕೂಲ್ ಆಫ್ ಹೈಜೀನ್ ಅಂಡ್ ಟ್ರಾಪಿಕಲ್ ಮೆಡಿಸಿನ್‌ನ ಮತ್ತೊಂದು ಅಧ್ಯಯನವು ನಾಯಿಗಳು 6 ರಿಂದ 8 ವಾರಗಳ ತರಬೇತಿಯನ್ನು ಪಡೆದ ನಂತರ ಕೋವಿಡ್ ಸೋಂಕಿರುವ ರೋಗಿಯನ್ನು ನಿಖರವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಈ ಎರಡು ನಾಯಿಗಳು ಪ್ರತಿ ವಾರ ಶಾಲೆಗಳಿಗೆ ಭೇಟಿ ನೀಡುತ್ತವೆ ಮತ್ತು ಅವುಗಳನ್ನು ಸಿಬ್ಬಂದಿಯು ಖಾಲಿ ತರಗತಿ ಕೋಣೆಗಳಲ್ಲಿ, ಸಭಾಂಗಣಗಳಲ್ಲಿ, ವ್ಯಾಯಾಮ ಮಾಡುವ ಕೋಣೆಯಲ್ಲಿ ಮತ್ತು ಕೆಫೆಟೇರಿಯಾಗಳಲ್ಲಿ ತಿರುಗಾಡಿಸಿಕೊಂಡು ಬರುತ್ತಾರೆ.

“ನಮ್ಮ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಶಾಲೆಯಲ್ಲಿ ಇರಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಿದೆ ಮತ್ತು ಆ ಗುರಿ ತಲುಪಲು ನಮಗೆ ಸಹಾಯ ಮಾಡಲು ಇದು ಉತ್ತಮ ತಂತ್ರವಾಗಿದೆ ಎಂದು ನಾವು ನಂಬುತ್ತೇವೆ” ಎಂದು ಶಾಲಾ ಅಧೀಕ್ಷಕ ರಿಕ್ ಮೆಡೀರೋಸ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button