Uncategorized
Trending

ಕೇವಲ 20 ರೂಪಾಯಿಗಾಗಿ ಹೆತ್ತ ತಾಯಿಯನ್ನೇ ಕಡಿದು ಹತ್ಯೆಗೈದ ಮಗ

ಹಣ ಕೊಡಲಿಲ್ಲ ಎನ್ನವು ಕೋಪದಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನೇ ಕಡಿದು ಕೊಲೆ(Murder) ಮಾಡಿರುವ ಘಟನೆ ಹರ್ಯಾಣದ ನೂಹ್​ನಲ್ಲಿ ನಡೆದಿದೆ. ಕೇವಲ 20 ರೂಪಾಯಿಗಾಗಿ 56 ವರ್ಷದ ತಾಯಿಯನ್ನು ಮಗ ಹತ್ಯೆ ಮಾಡಿದ್ದಾನೆ. ಜೈಸಿಂಗ್‌ಪುರ ಗ್ರಾಮದಲ್ಲಿ ಶನಿವಾರ ಈ ಆಘಾತಕಾರಿ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಮಗ ಮಾದಕ ವ್ಯಸನಿಯಾಗಿದ್ದು, ಬಹಳ ದಿನಗಳಿಂದ ಗಾಂಜಾ ಮತ್ತು ಅಫೀಮು ಸೇವಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.ಕೊಲೆ ಮಾಡಿದ ಬಳಿಕ ರಕ್ತ ಸಿಕ್ತ ಸ್ಥಿತಿಯಲ್ಲಿದ್ದ ತಾಯಿ ಜತೆಯೇ ಒಂದೇ ಮನೆಯಲ್ಲಿ ಆತ ಇಡೀ ರಾತ್ರಿ ಕಳೆದಿದ್ದಾನೆ. ಶನಿವಾರ ರಾತ್ರಿ ಜೆಮ್ಶೆಡ್ ಎಂಬಾತ ತಾಯಿ ರಜಿಯಾ ಬಳಿ 20 ರೂ. ಕೊಡುವಂತೆ ಕೇಳಿದ್ದ. ಆದರೆ ಅವರು ನಿರಾಕರಿಸಿದ್ದರು. ಅದಕ್ಕೆ ಕೋಪಗೊಂಡ ಮಗ ತಾಯಿಯನ್ನು ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾನೆ.ಎಫ್​ಐಆರ್ ದಾಖಲಿಸಲಾಗಿದೆ, ಮರಣೋತ್ತರ ಪರೀಕ್ಷೆಯ ನಂತರ ರಾಜಿಯಾ ಅವರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ರಾಜಿಯಾ ಅವರ ಪತಿ ಮುಬಾರಕ್ ಕೇವಲ ನಾಲ್ಕು ತಿಂಗಳ ಹಿಂದೆ ನಿಧನರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಘಟನೆ ತಾಯಿಯ ಪ್ರಿಯಕರನಿಂದ ಬಾಲಕನ ಹತ್ಯೆ, ಸೂಟ್​ಕೇಸ್​ನಲ್ಲಿ ಶವ ಪತ್ತೆ ತಾಯಿಯ ಪ್ರಿಯಕರನೇ 10 ವರ್ಷದ ಬಾಲಕನನ್ನು ಕೊಲೆ(Murder) ಮಾಡಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ. ಬಾಲಕನನ್ನು ಪೊದೆಯ ಬಳಿಕ ಕೊಂದು ಸೂಟ್​ಕೇಸ್​ನಲ್ಲಿ ಮುಚ್ಚಿಟ್ಟಿದ್ದ ಎನ್ನಲಾಗಿದೆ. ತನ್ನ ಮಗು ಟ್ಯೂಷನ್‌ನಿಂದ ಮನೆಗೆ ಹಿಂತಿರುಗಿಲ್ಲ ಎಂದು ಮಹಿಳೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ ನಂತರ ತನಿಖೆ ಆರಂಭಿಸಲಾಯಿತು.ತನಿಖೆಯ ಸಮಯದಲ್ಲಿ, ಪತಿಯಿಂದ ಬೇರ್ಪಟ್ಟ ಮಹಿಳೆ ಜಿತುಮೋನಿ ಹಲೋಯ್ ಎಂಬ ಇನ್ನೊಬ್ಬ ಪುರುಷನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಪೊಲೀಸರಿಗೆ ತಿಳಿದುಬಂದಿದೆ. ಪೊಲೀಸರು ಆತನನ್ನು ವಿಚಾರಿಸಿ ಸೂಟ್‌ಕೇಸ್ ಇರುವ ಸ್ಥಳಕ್ಕೆ ಕರೆದೊಯ್ದಾಗ ಆತ ಅಪರಾಧ ಒಪ್ಪಿಕೊಂಡಿದ್ದಾನೆ.ನಂತರ ನಗರದ ಹೊರವಲಯದಲ್ಲಿರುವ ಪೊದೆಯೊಂದರಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಆ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಹಿಳೆಯನ್ನು ಸಹ ವಶಕ್ಕೆ ಪಡೆಯಲಾಗಿದ್ದು, ಕೊಲೆಯಲ್ಲಿ ಆಕೆಯ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಮಹಿಳೆಯಿಂದ ಬೇರ್ಪಟ್ಟಿರುವ ಮಗುವಿನ ತಂದೆ ಕೂಡ ಪೊಲೀಸರಲ್ಲಿ ಹೇಳಿಕೆ ದಾಖಲಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button