ಬೆಂಗಳೂರು: ನಮ್ಮ ರಾಜ್ಯ ಪ್ರವಾಸೋದ್ಯಮಕ್ಕೆ(karnataka tourism) ಹೇಳಿ ಮಾಡಿಸಿದ ತಾಣ. ಹಸುರಿನ ದಟ್ಟವಾದ ಪಶ್ಚಿಮ ಘಟ್ಟದ ಸಾಲು, ಮನಮೋಹಕ ಜಲಪಾತಗಳು, ನದಿ, ಝರಿ, ತೊರೆ, ಜೀವ ವೈವಿಧ್ಯ, ಅಪಾರ ಸಸ್ಯ ಸಂಪತ್ತು, ಅಪರೂಪದ ಪ್ರಾಣಿ ಜಗತ್ತು, ಸುಂದರವಾದ ಸಮುದ್ರ ತೀರಗಳು ಹಾಗೂ ಶ್ರೀಮಂತ ಕಲಾನೈಪುಣ್ಯ ಇರುವ ಐತಿಹಾಸಿಕ ಸ್ಥಳಗಳು (historical places in karnataka), ಜಗತ್ಪ್ರಸಿದ್ಧ ದೇವಸ್ಥಾನಗಳು.. ಹೀಗೆ ಪಟ್ಟಿ ಮಾಡುತ್ತ ಹೋಗಬಹುದು.
ಅಸಂಖ್ಯ ಅದ್ಭುತ ಪ್ರವಾಸಿ ತಾಣಗಳಿರುವ ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ (central government) ಒಂದೇ ಒಂದು ನಯಾಪೈಸೆ ಅನುದಾನ ಕೊಟ್ಟಿಲ್ಲ. ಹೌದು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಪ್ರವಾಸೋದ್ಯಮ ಇಲಾಖೆಯಲ್ಲೂ (tourism department of india) ಮುಂದುವರಿದಿದೆ. 2014ರಿಂದ ಈವರೆಗೆ 1’185.15 ಕೋಟಿ ರೂಪಾಯಿ ಅನುದಾನ ನೀಡಿದ್ದರೂ ರಾಜ್ಯದ ಪಾಲು ದೊಡ್ಡ ಸೊನ್ನೆ ಮಾತ್ರ. ಇಂದು ನಡೆದ ದಕ್ಷಿಣ ಭಾರತದ ರಾಜ್ಯಗಳ ಪ್ರವಾಸೋದ್ಯಮ ಇಲಾಖೆ ಸಚಿವರ ಸಮ್ಮೇಳನದಲ್ಲಿ ಈ ಸಂಗತಿ ಬಯಲಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿ ಅನುದಾನದಲ್ಲಿ ಕರ್ನಾಟಕ ಕಡೆಗಣನೆ ಮಾಡಲಾಗಿದೆ. ಹಾಗಾದ್ರೆ ಯಾವ್ಯಾವ ರಾಜ್ಯಗಳಿಗೆ ಎಷ್ಟು ನೀಡಲಾಗಿದೆ ಎಂದು ನೋಡುವುದಾದರೆ..