ಕೆಲಸದ ಒತ್ತಡದಿಂದ ಹೈರಾಣಾಗಿ ಹೋಗಿದ್ದೀರಾ? ಹೀಗೆ ಮಾಡಿ, ಬೇಗ ರಿಲ್ಯಾಕ್ಸ್ ಆಗಬಹುದು..!
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೆಲಸದ(Work) ಒತ್ತಡದಿಂದ ಬಳಲುತ್ತಿದ್ದಾರೆ.. ಏರಿಕೆಯಾಗುತ್ತಿರುವ ಪ್ರತಿಯೊಂದು ವಸ್ತುಗಳ ಬೆಲೆ(Price).. ಕುಟುಂಬ(Family) ನಿರ್ವಹಣೆ.. ಮುಂದಿನ ಜೀವನದ ಉಳಿತಾಯಕ್ಕಾಗಿ ಹಗಲು-ರಾತ್ರಿಯೆನ್ನದೇ(Day and Night) ಬಹುತೇಕರು ಕೆಲಸ ಮಾಡುತ್ತಿದ್ದಾರೆ.. ಈ ರೀತಿ ಕೆಲಸ ಮಾಡುತ್ತಾ ಎಷ್ಟು ಜನರು ಮಾನಸಿಕ ಒತ್ತಡಕ್ಕೆ(Stress) ಒಳಗಾಗಿ ಪರದಾಟ ನಡೆಸುತ್ತಿದ್ದಾರೆ.. ಇನ್ನೂ ಕೆಲವರು ತಮ್ಮ ಕುಟುಂಬದವರ(Family) ಜೊತೆ ಸರಿಯಾಗಿ ಕಾಲಕಳೆಯಲು ಸಮಯ ಸಿಗುತ್ತಿಲ್ಲ ಅಂತಾ ಚಿಂತೆಗೀಡಾಗಿದ್ದಾರೆ.. ಅದ್ರಲ್ಲೂ ಕೊರೋನಾ ಮಹಾಮಾರಿ ಬಂದ ಬಳಿಕ ಮನೆಯಲ್ಲಿಯೇ ಇದ್ದರು ಸಹ ಕುಟುಂಬದವರಿಗೆ ಸಮಯ ಕೊಡಲಾಗದ ಸ್ಥಿತಿ ಬಹುತೇಕರಲ್ಲಿ ಇದೆ.. ಹೀಗಾಗಿ ಮನೆಯಲ್ಲಿಯೇ ಇದ್ದುಕೊಂಡು, ಕೆಲಸ ಮಾಡುವವರಾಗಲಿ, ಕಚೇರಿಗೆ ಹೋಗಿ ದುಡಿಯುವವರ ಆಗಲಿ ಹೀಗೆ ಮಾಡಿದ್ರೆ ನಿಮಗೆ ಸಮಯ ಉಳಿತಾಯವಾಗಲಿದೆ.. ಅಲ್ಲದೇ ಈ ಟ್ರಿಕ್ಸ್ ಫಾಲೋ ಮಾಡಿದರೆ ನಿಮ್ಮ ಮನಸ್ಸಿನ ಮೇಲೆ ಒತ್ತಡ ಕೂಡ ಕಡಿಮೆಯೇ ಬೀಳಲಿದೆ.
ಕೆಲಸ ಹಾಗೂ ಜೀವನವನ್ನು ಒಟ್ಟಿಗೆ ನಿರ್ವಹಣೆ ಮಾಡುವುದು ಹೇಗೆ..?
ಜೀವನದ ಒಂದು ಭಾಗ ಕೆಲಸ.. ಬಹುತೇಕರು ಕೆಲಸವನ್ನು ಜೀವನ ಎಂದು ಭಾವಿಸಿರುತ್ತಾರೆ.. ಹೀಗಾಗಿ ಕೆಲಸದ ಒತ್ತಡವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ಅವರಿಗೆ ತಿಳಿದಿರುವುದಿಲ್ಲ.. ಸರಿಯಾದ ಯೋಜನೆಯ ಅನುಷ್ಠಾನ, ಕೆಲಸಕ್ಕೆ ನಿರ್ದಿಷ್ಟ ಸಮಯ ಮೀಸಲಿಡುವುದು, ಪ್ಲಾನಿಂಗ್, ಶೆಡ್ಯೂಲಿಂಗ್ , ಮ್ಯಾನೇಜ್ಮೆಂಟ್ ಮೂಲಕ ಕೆಲಸ ಹಾಗೂ ಜೀವನವನ್ನು ಒಟ್ಟಿಗೆ ನಿರ್ವಹಣೆ ಮಾಡಬಹುದು..
1) ಕೆಲಸ ನನ್ನಿಂದ ಆಗುತ್ತದಾ ಎಂದು ಗಮನಿಸಿ: ಸಾಮಾನ್ಯವಾಗಿ ಬಹುತೇಕರು ಇಲ್ಲ ಕೆಲಸ ನನ್ನಿಂದ ಸಾಧ್ಯ ಎಂದುಕೊಂಡು ಇಲ್ಲಸಲ್ಲದ ಹೊರೆಯನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಾರೆ.. ಇದರಿಂದಾಗಿ ಅವರು ವಹಿಸಿಕೊಂಡ ಕೆಲಸ ಅವರಿಗೆ ಸರಿಯಾಗಿ ಬರದೇ ಇದ್ದರೂ ಆ ಕೆಲಸ ಮಾಡಲು ಸಾಕಷ್ಟು ಪರದಾಟ ನಡೆಸುತ್ತಾರೆ.. ಹೀಗಾಗಿ ನೀವು ವಹಿಸಿ ಕೊಳ್ಳುತ್ತಿರುವ ಕೆಲಸ ನಿಮಗೆ ಸಾಧ್ಯವಾ ಎಂದು ಒಮ್ಮೆ ನೋಡುವುದು ಮುಖ್ಯ
2) ಫೋನ್ ನಿಂದ ಅಂತರ ಕಾಯ್ದುಕೊಳ್ಳಿ: ನಿಮ್ಮ ಕೆಲಸದ ಒತ್ತಡದಲ್ಲಿ ನಿಮಗೆ ತೊಂದರೆ ನೀಡುವ ವಸ್ತು ಅಂದ್ರೆ ಅದು ನಿಮ್ಮ ಫೋನ್.. ನಿರಂತರವಾಗಿ ಫೋನ್ ಹಾಗೂ ಇಮೇಲ್ಗಳು ಬರುತ್ತಿದ್ದಾರೆ ನಿಮಗೆ ಕೆಲಸದಲ್ಲಿ ಹೆಚ್ಚು ಒತ್ತಡ ಬೀಳಲಿದೆ.. ಹೀಗಾಗಿ ಸಾಧ್ಯವಾದಷ್ಟು ನಿಮ್ಮ ಫೋನ್ ನಿಂದ ನೀವು ದೂರ ಇರುವುದು ಒಳಿತು.
ಯಾವಾಗ ನಿಮಗೆ ಹೆಚ್ಚು ಒತ್ತಡ ಬೀಳುತ್ತದೆ ಆಗ ಕೆಲಕಾಲ ನಿಮ್ಮ ಫೋನ್ ಸ್ವಿಚ್ ಆಫ್ ಮಾಡಿ ಇರುವುದು ಇನ್ನೂ ಉತ್ತಮ..
3) ಧ್ಯಾನ ಅಥವಾ ವ್ಯಾಯಾಮ ಮಾಡುವುದನ್ನುರೂಢಿಸಿಕೊಳ್ಳಿ: ಕೆಲಸದಲ್ಲಿ ಮುಳುಗಿಹೋಗಿರುವ ಬಹುತೇಕರು ಇತರ ವಿಷಯಗಳ ಕಡೆಗೆ ಗಮನ ಕೊಡುವುದಿಲ್ಲ. ಹೀಗಾಗಿ ಅಂತವರು ಧ್ಯಾನ ಅಥವಾ ವ್ಯಾಯಾಮಗಳನ್ನು ರೂಡಿಸಿಕೊಂಡ್ರೆ,ಸ್ವಲ್ಪ ವ್ಯಾಯಾಮ ಅಥವಾ ಧ್ಯಾನ ದೇಹದ ಜೊತೆ ಮನಸ್ಸನ್ನು ಸಂತೋಷಗೊಳಿಸುತ್ತದೆ..ಸಮಯದ ಅಭಾವ ಇದ್ದಲ್ಲಿ ಕೆಲಸಕ್ಕೆ ಹೋಗುವ ದಾರಿಯಲ್ಲಿ ಧ್ಯಾನವನ್ನು ಅಭ್ಯಾಸ ಮಾಡಿ ಅಥವಾ ಧೀರ್ಘ ಉಸಿರನ್ನು ತೆಗೆದುಕೊಳ್ಳಿ. ಪ್ರತಿದಿನ ಜಿಮ್ ಅಥವಾ ವರ್ಕೌಟ್ ಮಾಡಲು ಸಾಧ್ಯವಾಗದಿದ್ದರೆ, ವಾರಕ್ಕೆ ಎರಡು ಬಾರಿಯಾದರೂ ಮಾಡಿ.
4) ಗುರಿ ಇಟ್ಟುಕೊಳ್ಳಿ: ನೀವು ಒಂದು ಕೆಲಸವನ್ನು ಮಾಡುತ್ತಿದ್ದಾರೆ ಅದನ್ನು ಮಾಡುವ ಮೊದಲು ನಿರ್ದಿಷ್ಟ ಸಮಯದೊಳಗೆ ಕೆಲಸವನ್ನು ಮಾಡಿ ಮುಗಿಸಬೇಕು ಎಂಬ ಗುರಿಯನ್ನು ಇಟ್ಟುಕೊಳ್ಳಿ.. ಇಲ್ಲದಿದ್ದರೆ ಮುಂದೆ ಆ ಕೆಲಸ ಮಾಡಿದರೆ ಆಯಿತು ಎಂಬ ಮನೋಭಾವ ಬರಬಹುದು.. ಹೀಗಾಗಿ ಯಾವುದೇ ಕೆಲಸ ಮಾಡುವ ಮುನ್ನ ಅದಕ್ಕೆ ನಿರ್ದಿಷ್ಟವಾದ ಸಮಯ ಹಾಗೂ ಗುರಿಯನ್ನು ಇಟ್ಟುಕೊಂಡು ಮುಗಿಸುವ ಪ್ರಯತ್ನ ಮಾಡಿ..
5) ಕೆಲಸದ ಸ್ಥಳದಲ್ಲಿ ಅಗತ್ಯ ವಸ್ತು ಮಾತ್ರ ಇರಲಿ: ನೀವು ಕೆಲಸ ಮಾಡುತ್ತಿರುವ ಸ್ಥಳವನ್ನು ಅವಲೋಕಿಸಿರಿ. ಅಲ್ಲಿರುವ ಭಾರೀ ಸಾಮಾಗ್ರಿಗಳನ್ನು ನೋಡುತ್ತಿದ್ದಂತೆಯೇ ಭಾರೀ ಕೆಲಸದ ಹೊರೆ ಇರುವಂತೆ ಭಾಸವಾಗುತ್ತದೆ. ಆದುದರಿಂದ ಕಣ್ಣಿಗೆ ಕಾಣುವಂತೆ ಕೇವಲ ಅಗತ್ಯವಿರುವಷ್ಟು ಸಾಮಾಗ್ರಿಗಳನ್ನು ಮಾತ್ರ ಇರಿಸಿಕೊಂಡು ಉಳಿದವುಗಳನ್ನು ಮೇಜಿನ ಕೆಳಗೋ ಅಥವಾ ಅನಗತ್ಯ ಎನಿಸಿದ್ದನ್ನು ತ್ಯಜಿಸಿ ಮೇಜಿನ ಖಾಲಿ ಸ್ಥಳವನ್ನು ಹೆಚ್ಚಿಸಿ. ಕಡಿಮೆ ಸಾಮಾಗ್ರಿಗಳಿರುವುದು ಕಡಿಮೆ ಕೆಲಸ ಇರುವಂತೆ ಭಾಸವಾಗುವುದರಿಂದ ಅನಗತ್ಯವಾಗಿ ಒತ್ತಡ ಹೇರುವುದು ತಪ್ಪುತ್ತದೆ
6) ಪುಟ್ಟ ವಿರಾಮಗಳನ್ನು ತೆಗೆದುಕೊಳ್ಳಿ: ಪ್ರತಿನಿತ್ಯ 10 ಗಂಟೆ ಕೆಲಸ ಮಾಡುತ್ತೀರಾ ಅಂದರೆ ಆ 10 ಗಂಟೆಯು ಕೆಲಸ ಮಾಡಲೇಬೇಕು ಎಂದು ಇಲ್ಲ..ನಿಮ್ಮ ಕೆಲಸದ ಒತ್ತಡ ನಿಮಗೆ ಅನುಭವವಾಗುತ್ತಿದ್ದಂತೆ ನೀವು ಸಣ್ಣ ವಿರಾಮವನ್ನು ತೆಗೆದುಕೊಂಡು, ಮನಸನ್ನ ಡೈವರ್ಟ್ ಮಾಡುವ ಕೆಲಸ ಮಾಡಿಕೊಳ್ಳುವುದು ಉತ್ತಮ.. ಕಾಫಿ ಕುಡಿಯುವುದು, ಸಣ್ಣ ವೀಡಿಯೋ ನೋಡುವುದು ಹೀಗೆ ಹಲವು ಕೆಲಸಗಳನ್ನು ಮಾಡುವುದರಿಂದ ನೀವು ನಿಮ್ಮ ಕೆಲಸದ ಒತ್ತಡದಿಂದ ಕೊಂಚ ಇಳಿಮುಖವಾಗುತ್ತಿರಾ.