ವಿದೇಶ

ಕೆಲವು ವಾರಗಳು ಇಲ್ಲವೇ ತಿಂಗಳುಗಳವರೆಗೆ ಜಾಗತಿಕ ರೋಗನಿರೋಧಕ ಶಕ್ತಿ ಇರುತ್ತದೆ! ಎಂದ WHO

ಯುರೋಪ್‌ನಲ್ಲಿ (Europe) ಪ್ರಸ್ತುತ ಓಮೈಕ್ರಾನ್ ಅಲೆ ಅಂತ್ಯವಾದ ನಂತರ, ವರ್ಷದ ಕೊನೆಗೆ ವೈರಸ್ ಮತ್ತೆ ಮರುಕಳಿಸಿದರೂ ಈ ಪ್ರದೇಶದಲ್ಲಿ ಸಾಂಕ್ರಾಮಿಕ ಪರಿಸ್ಥಿತಿಯು ಕೊನೆಗೊಳ್ಳಬಹುದೆಂಬ ಆಶಾಭಾವನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ (World Health Organization) (WHOs) ಯುರೋಪ್ ನಿರ್ದೇಶಕರಾದ ಹ್ಯಾನ್ಸ್ ಕ್ಲೂಗ್ ವ್ಯಕ್ತಪಡಿಸಿದ್ದಾರೆ. ಸುದ್ದಿ ಸಂಸ್ಥೆ ಏಜೆನ್ಸ್ ಫ್ರಾನ್ಸ್-ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ತಿಳಿಸಿದ ಹ್ಯಾನ್ಸ್, ಮಾರ್ಚ್ ವೇಳೆಗೆ 60% ನಷ್ಟು ಯುರೋಪಿಯನ್ನರು ಕೊರೋನಾ ವೈರಸ್‌ನ (Corona Virus) ಓಮೈಕ್ರಾನ್ ರೂಪಾಂತರಕ್ಕೆ (Omicron mutation) ಒಳಗಾಗಬಹುದು ಎಂದು ತಿಳಿಸಿದ್ದಾರೆ. ಸಾಂಕ್ರಾಮಿಕ (Epidemic) ಅಂತ್ಯವನ್ನು ಸಮೀಪಿಸುತ್ತಿದೆ ಎಂಬ ಸೂಚನೆಯನ್ನು ಈ ಪ್ರದೇಶವನ್ನು ತೋರಿಸುತ್ತಿದೆ ಎಂದು AFPಗೆ ಕ್ಲೂಗ್ ತಿಳಿಸಿದ್ದಾರೆ.

ಆಶಾಭಾವನೆ
ಪ್ರಸ್ತುತ ಓಮೈಕ್ರಾನ್ ತೀವ್ರತೆ ಕೊನೆಯಾದೊಡನೆ, ಕೆಲವು ವಾರಗಳು ಇಲ್ಲವೇ ತಿಂಗಳುಗಳವರೆಗೆ ಜಾಗತಿಕ ರೋಗನಿರೋಧಕ ಶಕ್ತಿ ಇರುತ್ತದೆ. ಇದು ಒಂದಾ ಲಸಿಕೆಯ ಕಾರಣದಿಂದ ಇಲ್ಲದಿದ್ದರೆ ಸೋಂಕಿನಿಂದ ಜನರು ಪಡೆದುಕೊಂಡ ರೋಗ ನಿರೋಧಕ ಸಾಮರ್ಥ್ಯದಿಂದ ಇಲ್ಲವೇ ಋತುಗಳ ನಡುವೆ ತಾಪಮಾನದಲ್ಲಿ ಉಂಟಾಗುವ ವ್ಯತ್ಯಾಸದಿಂದ ಎಂದು ತಿಳಿಸಿದ್ದಾರೆ. ವರ್ಷದ ಅಂತ್ಯದ ವೇಳೆಗೆ ಕೋವಿಡ್-19 ಮರುಕಳಿಸಿದರೂ ಸಾಂಕ್ರಾಮಿಕದ ಅವಧಿ ಕೊನೆಗೊಳ್ಳಲಿದೆ ಎಂಬ ಆಶಾಭಾವನೆ ಇದೆ ಎಂದು ಕ್ಲೂಗ್ ತಿಳಿಸಿದ್ದಾರೆ.

ಇತರ ಆರೋಗ್ಯ ತಜ್ಞರುಗಳ ಅಭಿಪ್ರಾಯವೇನು?

ಯುಎಸ್ ಸರ್ಕಾರದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆ್ಯಂಥೋನಿ ಫೌಸಿ ಕೂಡ ಇದೇ ರೀತಿಯ ಆಶಾವಾದ ವ್ಯಕ್ತಪಡಿಸಿದ್ದು ಯುಎಸ್‌ನ ಕೆಲವು ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಇಳಿಮುಖವಾಗುತ್ತಿದ್ದು ಸಂಪೂರ್ಣ ದೇಶದಲ್ಲಿ ಇದೊಂದು ರೀತಿಯ ತಿರುವನ್ನುಂಟು ಮಾಡಲಿದೆ ಎಂದು ಘೌಸಿ ABC ನ್ಯೂಸ್ ಟಾಕ್‌ನಲ್ಲಿ ತಿಳಿಸಿದ್ದಾರೆ. ಓಮೈಕ್ರಾನ್ ರೂಪಾಂತರದ ಮೂಲಕ ನಾಲ್ಕನೇ ಅಲೆಯು ಈ ಪ್ರದೇಶದಲ್ಲಿ ಪ್ರಭಾವ ಬೀರಿದ ನಂತರ ಈ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಮರಣ ಪ್ರಮಾಣ ಕೂಡ ಇಳಿಮುಖವಾಗುತ್ತಿದೆ ಎಂದು ಆಫ್ರಿಕಾದ WHO ಪ್ರಾದೇಶಿಕ ಕಚೇರಿ ತಿಳಿಸಿದೆ.

ಕೋವಿಡ್-19 ಅನ್ನು ಎಂಡೆಮಿಕ್ (ಸ್ಥಳೀಯ ಕಾಯಿಲೆ) ಎಂಬುದಾಗಿ ಶೀಘ್ರವೇ ನಿರ್ಧರಿಸುವುದು ಬೇಡ:

ಲಸಿಕೆ ಪಡೆದವರಲ್ಲಿ ಓಮೈಕ್ರಾನ್ ಕಡಿಮೆ ತೀವ್ರವಾದ ಸೋಂಕನ್ನುಂಟು ಮಾಡುವ ಕಾರಣದಿಂದ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ಗಮನಿಸಲು ವಿಜ್ಞಾನಿಗಳನ್ನು ಉತ್ತೇಜಿಸಿದ್ದರೂ ಕೋವಿಡ್-19 ಅನ್ನು ಸ್ಥಳೀಯ ರೋಗವೆಂದು ಶೀಘ್ರದಲ್ಲೇ ಪರಿಗಣಿಸುವುದು ಬೇಡವೆಂದು ಕ್ಲೂಗ್ ಎಚ್ಚರಿಕೆಯನ್ನು ನೀಡಿದ್ದಾರೆ.

ಸ್ಥಳೀಯ ಎಂಬುದನ್ನು ಕುರಿತು ಹಲವಾರು ಚರ್ಚೆಗಳಿವೆ. ಆದರೆ ಸ್ಥಳೀಯ ಎಂಬುದನ್ನು ನಾವು ನಿರ್ಧರಿಸುವ ಮುನ್ನ ಕೆಲವೊಂದು ಅಂಶಗಳತ್ತ ನಾವು ಗಮನ ಹರಿಸಬೇಕಾಗುತ್ತದೆ. ಏನಾಗಬಹುದು ಎಂಬುದನ್ನು ಊಹಿಸಲು ನಮಗೆ ಈ ಸಮಯದಲ್ಲಿ ಸಾಧ್ಯವಾಗುತ್ತದೆ. ಏಕೆಂದರೆ ವೈರಸ್ ಒಂದಕ್ಕಿಂತ ಹೆಚ್ಚು ಬಾರಿ ನಮ್ಮನ್ನು ಸೋಜಿಗಗೊಳಿಸಿರುವುದರಿಂದ ನಾವು ಹೆಚ್ಚು ಜಾಗರೂಕರಾಗಿರಬೇಕು ಎಂದು AFP ಸುದ್ದಿಪತ್ರಿಕೆಯು ಕ್ಲೂಗ್ ಅವರ ಮಾತುಗಳನ್ನು ಉಲ್ಲೇಖಿಸಿದೆ. ಓಮಿಕ್ರಾನ್ ವ್ಯಾಪಕವಾಗಿ ಹರಡಿರುವುದರಿಂದ ಕೋವಿಡ್‌ನ ಇತರ ರೂಪಾಂತರಗಳು ಇನ್ನೂ ಹೊರಹೊಮ್ಮಬಹುದು ಎಂದು ಅವರು ತಿಳಿಸಿದ್ದಾರೆ.

ಯುರೋಪ್‌ನ ಪರಿಸ್ಥಿತಿ
ಯುರೋಪಿಯನ್ ಯೂನಿಯನ್ ಹೆಲ್ತ್ ಏಜೆನ್ಸಿ ECDC ಪ್ರಕಾರ, Omicron ಈಗ EU ಮತ್ತು ಯುರೋಪಿಯನ್ ಆರ್ಥಿಕ ಪ್ರದೇಶದಲ್ಲಿ (EEA, ಅಥವಾ ನಾರ್ವೆ, ಐಸ್ಲ್ಯಾಂಡ್ ಮತ್ತು ಲಿಚ್ಟೆನ್‌ಸ್ಟೈನ್) ಪ್ರಬಲ ರೂಪಾಂತರವಾಗಿ ಹೊರಹೊಮ್ಮಿದೆ. ಜನವರಿ 18ರ ಹೊತ್ತಿಗೆ, 53 ದೇಶಗಳನ್ನು ಒಳಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ಪ್ರದೇಶದಲ್ಲಿ 15% ಪ್ರಕರಣಗಳಲ್ಲಿ ಓಮೈಕ್ರಾನ್ ರೂಪಾಂತರವು ಕಂಡುಬಂದಿದೆ. 6.3% ಪ್ರಕರಣಗಳಲ್ಲಿ ಓಮೈಕ್ರಾನ್ ರೂಪಾಂತರವು ಒಂದು ವಾರದ ಹಿಂದೆ ಕಂಡುಬಂದಿದೆ.

ಇದೀಗ ನಮ್ಮ ಮುಂದಿರುವ ಸವಾಲು ಯುರೋಪ್‌ನಲ್ಲಿ ಪರಿಸ್ಥಿತಿಯನ್ನು ಸ್ಥಿರಗೊಳಿಸುವುದಾಗಿದೆ ಎಂದು ಕ್ಲೂಗ್ ತಿಳಿಸಿದ್ದು, ದೇಶಾದ್ಯಂತ ಲಸಿಕೆ ಮಟ್ಟಗಳು ಒಟ್ಟು ಜನಸಂಖ್ಯೆಯ 25% ದಿಂದ 95%ದವರೆಗೆ ಇದ್ದು ಇದರಿಂದ ಆಸ್ಪತ್ರೆಗಳು ಹಾಗೂ ಆರೋಗ್ಯ-ಆರೈಕೆ ವ್ಯವಸ್ಥೆಗಳ ಮೇಲೆ ಒತ್ತಡವನ್ನುಂಟು ಮಾಡಬಹುದು ಎಂದು ತಿಳಿಸಿದ್ದಾರೆ. ಕ್ಲೂಗ್ ತಿಳಿಸಿರುವಂತೆ ಪರಿಸ್ಥಿತಿಯನ್ನು ಸ್ಥಿರಗೊಳಿಸುವುದು ಎಂದರೆ ಕೋವಿಡ್-19 ಕಾರಣದಿಂದ ಆರೋಗ್ಯ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿಲ್ಲ ಹಾಗೂ ಅಗತ್ಯ ಆರೋಗ್ಯ ಸೇವೆಗಳನ್ನು ಮುಂದುವರಿಸಬಹುದಾಗಿದೆ. ಇಲ್ಲದಿದ್ದರೆ ಇನ್ನಿತರ ಗಂಭೀರ ಕಾಯಿಲೆಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button