ಇತ್ತೀಚಿನ ಸುದ್ದಿರಾಜ್ಯ
ಕೆಪಿಎಸ್ ನ ಬಾಲಕಿಯರು ರಾಜ್ಯ ಮಟ್ಟಕ್ಕೆ ಆಯ್ಕೆ
ಆನಂದಪುರ :
ಇಂದು ಶಿವಮೊಗ್ಗದಲ್ಲಿ ನಡೆದ 17 ವರ್ಷದ ವಯೋಮಿತಿ ಒಳಗಿನ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದಂತಹ ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ..
4×100 ರಿಲೇ ಯಲ್ಲಿ ಬೃಂದಾ, ಐಶ್ವರ್ಯ, ದೀಪಿಕಾ, ಹಾಗೂ ಜೈಯ ಲಕ್ಷ್ಮಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಹಾಗೆ 200 ಮೀಟರ್ ಓಟದಲ್ಲಿ ಹಾಗೂ 100 ಮೀಟರ್ ಓಟದಲ್ಲಿ ದೀಪಿಕಾ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನ ಪಡೆದಿದ್ದು ಮತ್ತು ಜಯಲಕ್ಷ್ಮಿ 1500 ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಉತ್ತಮ ಹೆಸರನ್ನು ಸಹ ಕರ್ನಾಟಕ ಪಬ್ಲಿಕ್ ಸ್ಕೂಲ್ ಆನಂದಪುರ ಗಳಿಸಿದೆ.
ಮುಂದಿನ ತಿಂಗಳು ಕೋಲಾರದಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
*