ಕ್ರೈಂ
₹80 ಲಕ್ಷ ಮೌಲ್ಯದ ಮಾದಕ ವಸ್ತು ವಶ.!
ಬೆಂಗಳೂರು: ಹೊಸ ವರ್ಷದ ಪಾರ್ಟಿಗಳಿಗೆ ಸಪ್ಲೈ ಮಾಡಲು ಡ್ರಗ್ಸ್ ಶೇಖರಿಸಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಬಸಿಲ್, ಚಾರ್ಲ್ಸ್, ಸಿಲ್ವಿಸ್ಟರ್ ಬಂಧಿತ ಆರೋಪಿಗಳು.ಬ್ಯೂಸಿನೆಸ್ ವೀಸಾದಡಿಯಲ್ಲಿ ಭಾರತಕ್ಕೆ ಬಂದ ಆರೋಪಿಗಳು ಮುಂಬೈನಲ್ಲಿ ಡ್ರಗ್ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಡ್ರಗ್ಸ್ ಸಂಗ್ರಹಿಸಿಟ್ಟ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿಯ ನಾರ್ಕೋಟಿಕ್ ವಿಂಗ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 80 ಲಕ್ಷ ಮೌಲ್ಯದ 400 ಗ್ರಾಂ ಎಂಡಿಎಂಎ , 40 ಗ್ರಾಂ ಕೋಕೇನ್ , 400 ಗ್ರಾಂ ಹ್ಯಾಷಿಷ್ ಆಯಿಲ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.