ಕೂಲಿ ಕಾರ್ಮಿಕರಿಗೆ ಸಂತಸದ ಸುದ್ದಿ..!
ನವದೆಹಲಿ: ಕೇಂದ್ರ ಸರ್ಕಾರವು ಇದೀಗ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ’(PM Shram Yogi Mandhan Yojana)ಅಡಿಯಲ್ಲಿ ಕಾರ್ಮಿಕರಿಗೆ ಪಿಂಚಣಿ ನೀಡಲಿದೆ. ಇದು ಅಸಂಘಟಿತ ವಲಯದ ಕಾರ್ಮಿಕರಿಗೆ ಉತ್ತಮ ಯೋಜನೆಯಾಗಿದ್ದು, ಇದರಡಿ ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಜನರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ಸಹಾಯ ಪಡೆಯುತ್ತಾರೆ. ಈ ಯೋಜನೆಯಡಿ ಕಾರ್ಮಿಕರಿಗೆ ಪಿಂಚಣಿಯನ್ನು ಸರ್ಕಾರ ಖಾತರಿಪಡಿಸುತ್ತದೆ. ಈ ಯೋಜನೆಯಲ್ಲಿ ದಿನಕ್ಕೆ ಕೇವಲ 2 ರೂ.ಗಳನ್ನು ಉಳಿಸುವ ಮೂಲಕ ನೀವು ವಾರ್ಷಿಕವಾಗಿ 36,000 ರೂ.ಗಳ ಪಿಂಚಣಿ ಪಡೆಯಬಹುದು.
ಈ ಯೋಜನೆ(PM-SYM Benefits)ಪ್ರಾರಂಭಿಸಿದರೆ ನೀವು ಪ್ರತಿ ತಿಂಗಳು 55 ರೂ.ಗಳನ್ನು ಠೇವಣಿ ಮಾಡಬೇಕಾಗುತ್ತದೆ. ಅಂದರೆ 18ನೇ ವಯಸ್ಸಿನಲ್ಲಿ ದಿನಕ್ಕೆ ಸುಮಾರು 2 ರೂ.ಗಳನ್ನು ಉಳಿಸುವ ಮೂಲಕ ನೀವು ವಾರ್ಷಿಕವಾಗಿ 36,000 ರೂ.ಗಳ ಪಿಂಚಣಿ ಪಡೆಯಬಹುದು. ಒಬ್ಬ ವ್ಯಕ್ತಿಯು 40 ವರ್ಷ ವಯಸ್ಸಿನಿಂದ ಈ ಯೋಜನೆಯನ್ನು ಪ್ರಾರಂಭಿಸಿದರೆ ಪ್ರತಿ ತಿಂಗಳು 200 ರೂ. ಜಮಾ ಮಾಡಬೇಕಾಗುತ್ತದೆ. ಆಗ ನೀವು 60 ವರ್ಷ ವಯಸ್ಸಿನ ನಂತರ ಪಿಂಚಣಿ ಪಡೆಯಲು ಪ್ರಾರಂಭಿಸುತ್ತೀರಿ. 60 ವರ್ಷಗಳ ನಂತರ ನೀವು ತಿಂಗಳಿಗೆ 3,000 ರೂ. ಅಂದರೆ ವರ್ಷಕ್ಕೆ 36,000 ರೂ. ಪಿಂಚಣಿ ಪಡೆಯುತ್ತೀರಿ.