ಕುತೂಹಲ ಮೂಡಿಸಿದ್ದ ಸಿದ್ದು-ಸೋನಿಯಾ ಗಾಂಧಿ ಭೇಟಿ..!
ಬೆಂಗಳೂರು (ಅಕ್ಟೋಬರ್ 06); ರಾಷ್ಟ್ರ ರಾಜಕಾರಣದಲ್ಲಿ (National Politics) ಹಲವಾರು ಆಗುಹೋಗುಗಳು ನಡೆಯುತ್ತಿದೆ. ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನಿಂದ ಉತ್ತರಪ್ರದೇಶದ ಲಖೀಂಪುರ್ ಗಲಭೆಯ (Lakhimpur Violence)ವರೆಗೆ ಅನೇಕ ಪ್ರಮುಖ ವಿಚಾರಗಳು ರಾಜಕೀಯ ತಿರುವು ಪಡೆದುಕೊಳ್ಳುತ್ತಿವೆ. ಅಲ್ಲದೆ, ಕಾಂಗ್ರೆಸ್ ಪಕ್ಷದ ಒಳಗೆ ಸೋನಿಯಾ ಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) ವಿರುದ್ಧ ಜಿ-23 ಹೆಸರಿನಲ್ಲಿ ಹಿರಿಯ ನಾಯಕರ ಪ್ರತ್ಯೇಕ ಗುಂಪೊಂದು ಹುಟ್ಟಿಕೊಂಡಿದೆ.
ಈ ಗುಂಪು ರಾಜ್ಯದ ಮಾಜಿ ಸಿಎಂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನೂ ತಮ್ಮ ಬಣಕ್ಕೆ ಸೆಳೆದುಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಸಿದ್ದರಾಮಯ್ಯ (Siddaramaiah) ಮತ್ತು ಸೋನಿಯಾ ಗಾಂಧಿ ಅವರ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಅಲ್ಲದೆ, ಈ ಭೇಟಿಯಲ್ಲಿ ಇಬ್ಬರು ನಾಯಕರು ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು.
ಇದೀಗ ಪ್ರಮುಖ ನಾಯಕರು ಚರ್ಚೆ ಮಾಡಿದ ವಿಚಾರಗಳ ಸಂಪೂರ್ಣ ಮಾಹಿತಿ ಲಭ್ಯವಾಗಿದೆ. ಸ್ವತಃ ಸಿದ್ದರಾಮಯ್ಯನವರು ಚಿದಾನಂದ ಪಟೇಲ್ ಅವರಿಗೆ ನೀಡಿದ ಸಂದರ್ಶನದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸಿದ್ದರಾಮಯ್ಯ ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ!