ಸಿನಿಮಾ

ಕಾಲಿವುಡ್​ ನಟನೊಂದಿಗೆ ರಿಲೇಶನ್​ಶಿಪ್; ಸಿಹಿ ಸುದ್ದಿ:ನಿಧಿ ಅಗರ್ವಾಲ್?

ಚೆನ್ನೈ: ಟಾಲಿವುಡ್​ ನಟಿ ನಿಧಿ ಅಗರ್ವಾಲ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಜೀವನದ ಹೊಸ ಅಡಿ ಇಡಲು ತುದಿಗಾಲ ಮೇಲೆ ನಿಂತಿರುವ ನಿಧಿ ಅಗರ್ವಾಲ್, ಕಾಲಿವುಡ್​ ಸೂಪರ್​ ಸ್ಟಾರ್​ ಸಿಂಬು ಅವರ ಜೊತೆ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ಸವ್ಯಸಾಚಿ’ ಚಿತ್ರದ ಮೂಲಕ ಎಂಟ್ರಿಕೊಟ್ಟ ನಿಧಿ ಇದೀಗ ಸೌಥ್​ ಸಿನಿಮಾ ಕ್ಷೇತ್ರಕ್ಕೆ ಬೇಡಿಕೆಯ ನಟಿ. ಮುಗ್ಧ ಅಭಿನಯದಿಂದಲೇ ಗಮನ ಸೆಳೆದಿರುವ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವೃತ್ತಿ ಜೀನವದಲ್ಲಿ ಜೊತೆಯಾದ ತಮಿಳು ನಟ ಸಿಂಬು ಅವರನ್ನು ಶೀಘ್ರದಲ್ಲೇ ಮದುವೆ ಆಗಲಿದ್ದಾರಂತೆ.

ಟಾಲಿವುಡ್​ನ ‘ಇಸ್ಮಾರ್ಟ್ ಶಂಕರ್’ ಚಿತ್ರದ ಯಶಸ್ಸಿನ ನಂತರ ಕಾಲಿವುಡ್​ನಲ್ಲಿಯೂ ಕಾಲೂರಿರುವ ನಿಧಿ ಅಲ್ಲಿಯೂ ಸಹ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇತ್ತೀಚೆಗೆ ತೆರೆಕಂಡ ಶಿಂಬು ನಟನೆಯ ತಮಿಳು ‘ಈಶ್ವರನ್’ ಚಿತ್ರದಲ್ಲಿ ನಿಧಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಫ್ಯಾಮಿಲಿ, ಆ್ಯಕ್ಷನ್ ಮತ್ತು ಎಂಟರ್‌ಟೈನರ್​​ ಆಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಹಣ ಗಳಿಸುವಲ್ಲಿ ಯಶಸ್ಸು ಕಂಡಿತ್ತು. ಚಿತ್ರದಲ್ಲಿ ಸಿಂಬು ಮತ್ತು ನಿಧಿ ಜೋಡಿ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದ್ದರು.

ಆ ದಿನ ಆರಂಭವಾದ ಇವರಿಬ್ಬರ ನಡುವಿನ ಸ್ನೇಹ ಇಂದು ಪ್ರೀತಿಗೆ ತಿರುಗಿದೆ ಎಂದು ಹೇಳಲಾಗುತ್ತಿದೆ. ಆಗಾಗ್ಗೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಜೋಡಿ ಸದ್ಯದಲ್ಲೇ ಸಿಹಿ ಸುದ್ದಿ ನೀಡಲಿದ್ದಾರೆ ಎಂಬ ಸುದ್ದಿ ಕಾಲಿವುಡ್​​​ನಲ್ಲಿ ಹರಿದಾಡುತ್ತಿದೆ.

ಸದ್ಯ ಇವರಿಬ್ಬರು ಸಹಬಾಳ್ವೆ (Live in relationship​) ನಡೆಸುತ್ತಿದ್ದಾರೆಂದೂ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ನಿಧಿ ಮತ್ತು ಶಿಂಬು ತಮ್ಮ ಸಂಬಂಧದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ, ಹರಿದಾಡುತ್ತಿರುವ ಈ ವದಂತಿಗೆ ಶೀಘ್ರದಲ್ಲೇ ಫುಲ್​​ಸ್ಟಾಪ್ ಹಾಕಲು ಬಯಸಿದ್ದಾರೆ ಎಂಬ ಮಾತು ಇದೆ.

ನಟ ಶಿಂಬು ಈ ಹಿಂದೆ ಹಲವಾರು ಸ್ಟಾರ್ ಹೀರೋಯಿನ್‌ಗಳೊಂದಿಗೆ ಡೇಟಿಂಗ್​ ಹೊಂದಿದ್ದರು. ಕೆಲವರ ಜೊತೆ ಹೊಂದಿದ್ದ ಸಂಬಂಧಕ್ಕೂ ಬ್ರೇಕಪ್​ ಮಾಡಿಕೊಂಡಿದ್ದಾರೆ. ನಟಿ ನಿಧಿ ಅಗರ್ವಾಲ್ ಕೂಡ ಒಬ್ಬ ಸ್ಟಾರ್​ ಕ್ರಿಕೆಟಿಗನನ್ನು ಪ್ರೀತಿಸುತ್ತಿದ್ದರು. ಅವರನ್ನೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button