ರಾಜ್ಯಸುದ್ದಿ

ಕಾರ್ಬ್ ತಿನ್ನದೇ ಬರೀ ಹರ್ಬಲ್ ಟೀ ಕುಡಿದರೆ ಸಣ್ಣಗಾಗ್ತಾರಾ? ತಜ್ಞರು ಹೀಗೆನ್ನುತ್ತಾರೆ..!

ಯಾರಿಗೂ ಬೊಜ್ಜುಳ್ಳ(Fat) ದೇಹ(Body) ಇಷ್ಟವಿರುವುದಿಲ್ಲ. ಪ್ರತಿಯೊಬ್ಬರಿಗೂ ತೂಕ ಇಳಿಸಿಕೊಳ್ಳುವ ಆಸೆ, ಇನ್ನೂ ಕೆಲವರಿಗೆ ಅವಸರ. ಹಾಗಾಗಿ ಯಾವುದೇ ಕಷ್ಟ ಪಡದೆ ಸುಲಭ ಉಪಾಯಗಳ ಮೂಲಕ ತೂಕ ಇಳಿಸ ಬಯಸುವವರು ಕೆಲವರಾದರೆ, ಇನ್ನು ಕೆಲವರು ಕಠಿಣ ವ್ಯಾಯಾಮ(Strict Work out) ಮತ್ತು ಆಹಾರ ಕ್ರಮದ ಮೂಲಕ ತೂಕ ಇಳಿಸಿಕೊಳ್ಳಲು ಇಚ್ಚಿಸುತ್ತಾರೆ. ಎಷ್ಟೋ ಮಂದಿ ಅದಕ್ಕಾಗಿ, ತಪ್ಪು ವಿಧಾನಗಳನ್ನು ಅನುಸರಿಸುವುದುಂಟು. ತೂಕ ಇಳಿಸುವುದು(Lose Weight) ಸುಲಭದ ವಿಷಯವಲ್ಲ.

ಅದಕ್ಕೆ ಒಂದು ನಿರ್ದಿಷ್ಟ ಪ್ರಮಾಣದ ಶಿಸ್ತು ಮತ್ತು ದೃಢ ನಿರ್ಧಾರ, ಜೊತೆಗೆ ಜೀವನ ಶೈಲಿ(Life Style)ಯಲ್ಲಿ ಕೆಲವು ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ತೂಕ ಇಳಿಸುವ ಗುರಿ ತಲುಪಲು ಸಾಧ್ಯವಾಗುತ್ತದೆ. ಅಂತರ್ಜಾಲ(Internet)ದಲ್ಲಿ, ತೂಕ ಇಳಿಸುವ ಕುರಿತು ಅನೇಕ ಸಲಹೆ(Suggestions)ಗಳು ಮತ್ತು ಉಪಾಯಗಳಿವೆ, ಹಾಗೆಯೇ ಅನೇಕ ತಪ್ಪು ಕಲ್ಪನೆಗಳಿಗೂ ಅವು ಕಾರಣವಾಗಿವೆ. ಪೌಷ್ಟಿಕಾಂಶ ತಜ್ಞೆ ಪೂಜಾ ಬಂಗಾ, ತೂಕ ಇಳಿಸುವುದಕ್ಕೆ ಸಂಬಂಧಿಸಿದ 4 ಜನಪ್ರಿಯ ವಿಧಾನಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ. ಅವರ ಪ್ರಕಾರ, ಈ ವಿಧಾನಗಳು ಜನಪ್ರಿಯವಾಗಿದ್ದರೂ ಸರಿಯಾದ ವಿಧಾನಗಳಲ್ಲ.

“ಜನರು ತೂಕ ಇಳಿಸಲು, ಹಲವಾರು ವಿಧಾನಗಳನ್ನು, ಅವುಗಳ ಹಿಂದಿರುವ ಲಾಜಿಕನ್ನು ತಿಳಿದುಕೊಳ್ಳದೆ ಅನುಸರಿಸುತ್ತಿರುವುದನ್ನು ನಾನು ನೋಡಿದ್ದೇನೆ. ಈ ವಿಡಿಯೋದಲ್ಲಿ ನಾನು ಕೆಲವು ಸಾಮಾನ್ಯ ತಪ್ಪು ಕಲ್ಪನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ” ಎಂದು ಇನ್‍ಸ್ಟಾಗ್ರಾಂನಲ್ಲಿ ಪೂಜಾ ಬಂಗಾ ಬರೆದುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button