Uncategorized
ಕಾಂಚಾಣ ಇದ್ದವರಿಗೆ ಕಾಂಗ್ರೆಸ್ ಟಿಕೆಟ್, ಜೆಡಿಎಸ್ ಅಭ್ಯರ್ಥಿ ಕೇಳೋರೆ ಇಲ್ಲ:
ಕೆಲಸ ಮಾಡಿದ್ದ ಧರ್ಮಸೇನಾ ಬಿಟ್ಟು ಕಾಂಚಾಣ ಇರುವ ವ್ಯಕ್ತಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ ಎಂದು ಸಚಿವ ಸೋಮಶೇಖರ್ ಟೀಕಿಸಿದರು. ಕಾಂಚಾಣ ಇರುವ ತಿಮ್ಮಯ್ಯಗೆ ರಾಜಕಾರಣದ ಬಗ್ಗೆ ಏನು ತಿಳಿದಿಲ್ಲ. ಸಿದ್ದರಾಮಯ್ಯ ಬಂದರಷ್ಟೇ ಅವರ ಪ್ರಚಾರ ಟೇಕಾಫ್ ಆಗಲಿದೆ, ಇಲ್ಲಾಂದ್ರೆ ಠುಸ್ಸ್ ಆಗುತ್ತದೆ. ಜೆಡಿಎಸ್ ಅಭ್ಯರ್ಥಿ ಕೇಳೋರಿಲ್ಲ, ಕುಮಾರಸ್ವಾಮಿ ಬಂದರೇ ಟೇಕಾಫ್ ಆಮೇಲೆ ಜಿಟಿಡಿ, ಮಹಾದೇವ್ ಕಾಲೆಳೆದು ಬೀಳಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅಧಿಕಾರದಲ್ಲಿರಲಿ ಇಲ್ಲದಿರಲಿ ಯಡಿಯೂರಪ್ಪ ಅವರು ಎಂದಿಗೂ ಕರ್ನಾಟಕದ ರಾಜಾಹುಲಿ. ಯಡಿಯೂರಪ್ಪ ಸೂಚನೆ ಮೇರೆಗೆ ಕೌಟಿಲ್ಯಗೆ ಟಿಕೆಟ್ ಕೊಡಲಾಗಿದೆ. ಈಗಾಗಲೇ, ನಮ್ಮ ಅಭ್ಯರ್ಥಿ ಎಲ್ಲಾ ಗ್ರಾಪಂಗಳಿಗೆ ಭೇಟಿ ಕೊಟ್ಟು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವ ಸಂತಸದಲ್ಲಿದ್ದಾರೆ ಎಂದರು.