
ಕರ್ನಾಟಕ ಸಿಎಂ ಸ್ಥಾನ ಬದಲಾವಣೆಗೆ ಕೊನೆಗೂ ಹೈಕಮಾಂಡ್ ಬ್ರೇಕ್ ಹಾಕಿದೆ. ” ನಾನೇ ಮುಂದಿನ 5 ವರ್ಷ ಸಿಎಂ ” ಎಂದು ಸಿದ್ದರಾಮಯ್ಯ ಅವರು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಇತ್ತ ” ನನ್ನ ಮುಂದೆ ಬೇರೆ ಆಯ್ಕೆ ಇಲ್ಲ ” ಎಂದು ಡಿಕೆ ಶಿವಕುಮಾರ್ ಹೇಳುವು ಮೂಲಕ ಸಿಎಂ ಸ್ಥಾನದಿಂದ ಸದ್ಯಕ್ಕೆ ಹಿಂದಕ್ಕೆ ಸರಿದಿದ್ದಾರೆ.
ಸಿಎಂ ಸ್ಥಾನ ಬದಲಾವಣೆ ಸಂಘರ್ಷಕ್ಕೆ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ಮಧ್ಯಸ್ಥಿಕೆ ವಹಿಸಿದ್ದರು. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸುರ್ಜೇವಾಲಾ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಯಾಕೆ ಸಿದ್ದರಾಮಯ್ಯ ಅವರನ್ನೇ ಇನ್ನಷ್ಟು ವರ್ಷ ಮುಂದುವರೆಸಲು ನಿರ್ಧರಿಸಿತು ಎಂಬ ಬಗ್ಗೆ ರಾಜಕೀಯ ವಲಯಯಲ್ಲಿ ಚರ್ಚೆಗಳು ಆರಂಭವಾಗಿವೆ. ಆ ಪೈಕಿ ಸಿದ್ದರಾಮಯ್ಯ ಅವರ ವಯಕ್ತಿಕ ಸಾಧನೆಯ ಹಠ, ಡಿಕೆ ಶಿವಕುಮಾರ್ ಎದುರಿಸುತ್ತಿರುವ ಕಾನೂನು ತೊಡಕುಗಳು, ಬಿಹಾರ ಚುನಾವಣೆ ಸೇರಿದಂತೆ ಹಲವು ಕಾರಣಗಳಿವೆ.