ಸಿಂದಗಿ, ಅ. 19 : ಸಿಂದಗಿಯಲ್ಲಿ (Sindagi By Election 2021) ಪಾಕ್ ಧ್ವಜ ಹಾರಿಸಿದ ಆರೋಪಿಗಳಿಗೆ ಜಾಮೀನು ನೀಡಲು ಸಹಕರಿಸಿದ ಹಾಗೂ ನೂತನ ಕ್ರೀಡಾಂಗಣದಲ್ಲಿರುವ ಮಸೀದಿಯನ್ನು ಇಂದಿನ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ರಮೇಶ ಭೂಸನೂರರವರು ತೆರವುಗೊಳಿಸುವಾಗ ಇಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ ಮನಗೂಳಿಯವರು (Sindagi By Election Congress Candidate Ashok Managuli) ಯಾವುದೇ ರೀತಿಯ ಪ್ರತಿಭಟನೆ ಮಾಡದೇ ಮೌನ ಸಮ್ಮತಿ ಸೂಚಿಸಿರುವುದು ಮನುವಾದಿ ಮನಸ್ಥಿತಿ ತೋರಿಸುತ್ತದೆ.
ಪ್ರಸ್ತುತ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ ಮನಗೂಳಿ ಅವರಿಗೆ ಮುಸ್ಲಿಂ ಮತ ಕೇಳಲು ನಾಚಿಕೆಯಾಗುವುದಿಲ್ಲವೆ? ಎಂದು ಕಳೆದ ಲೋಕಸಭಾ ಬಿಎಸ್ಪಿ ಅಭ್ಯರ್ಥಿ ಆಗಿದ್ದ ನ್ಯಾಯವಾದಿ ಶ್ರೀನಾಥ್ ಪೂಜಾರಿ ಪ್ರಶ್ನಿಸಿದ್ದಾರೆ.
ಪಟ್ಟಣದ ವೈಷ್ಣವಿ ಹೋಟೆಲ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ಗರಡಿಯಲ್ಲಿ ಬೆಳೆದಿರುವ ಅಶೋಕ ಮನಗೂಳಿ ಅವರು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತಾರೆ ಎಂಬ ಭರವಸೆಯೇ ಸಿಂದಗಿ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರಿಗೆ ಇಲ್ಲದಂತಾಗಿದೆ. ಅದೇ ತೆರನಾಗಿ ಬಿಜೆಪಿ ಅಭ್ಯರ್ಥಿ ಸಹ ಗೋಮುಖ ವ್ಯಾಘ್ರವೇ ಸರಿ. ಅವರು ಸಹ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ.