ಕಳ್ಳತನ ಆರೋಪಿಗೆ ಏಳು ವರ್ಷಶಿಕ್ಷೆ
ಚಾಮರಾಜನಗರ:ಕಳ್ಳತನ ಮಾಡಿದ್ದ ವ್ಯಕ್ತಿಗೆ ಚಾಮರಾಜನಗರ ಹಿರಿಯ ಸಿವಿಲ್ ಹಾಗೂ ಸಿಜೆಎಮ್ ನ್ಯಾಯಾಧೀಶ ಬಿ.ಎಸ್.
ಹೊನ್ನಸ್ವಾಮಿ ಏಳು ವರ್ಷ ಜೈಲು ಶಿಕ್ಷೆ ಹಾಗೂ 10ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಗುಂಡ್ಲುಪೇಟೆ ಟೌನ್ ನಿವಾಸಿಯಾದ ಗಂಗಾ ಅಲಿಯಾಸ್ ಗಂಗಾಧರ (30) ಆಟೋ ಚಾಲಕ ಶಿಕ್ಷೆಗೊಳಗಾದ ಅಪರಾಧಿ 2015ರಂದು ಚಾಮರಾಜನಗರ ಟೌನ್ ನಿವಾಸಿಯಾದ ಜಯಮ್ಮ ಸಂಜೆ ತರಕಾರಿ ತರಲು ಹೋಗುತ್ತಿರುವಾಗ ಬೈಕ್ ಬಂದ ಗಂಗಾ ಹಾಗೂ ಸಂತೋಷ 20 ಗ್ರಾಂ ಚಿನ್ನದ
ಮಾಂಗಲ್ಯಸರವನ್ನು ಕಿತ್ತುಕೊಂಡು ಪರಾರಿಯಾಗಿ
ರುತ್ತಾರೆ
ಈ ಸಂಬಂಧ ಚಾಮರಾಜ
ನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎರಡನೇ ಆರೋಪಿಯಾದ ಸಂತೋಷನ ವಿರುದ್ಧ ಮಾನ್ಯ ನ್ಯಾಯಾಲ
ಯಲ್ಲಿ 28-08-2024 ರಂದು ತೀರ್ಪು ನೀಡಿರುತ್ತದೆ ಈ ಪ್ರಕರಣದ ವಿಚಾರಣೆಯ ಕಾಲಕ್ಕೆ 1ನೇ ಆರೋಪಿಯಾದ ಗಂಗಾಧರ ಜಾಮೀನು ಪಡೆದುತಲೆಮರೆಸಿ
ಕೊಂಡಿದ್ದು ಆತನ ವಿರುದ್ಧ ಈ ಪ್ರಕರಣವಾದ 365/2024 ರಂತೆ ಪ್ರತ್ಯೇಕ ಪ್ರಕರಣ ದಾಖಲಿಸಿ ಆತನ ವಿರುದ್ಧ ವಿಚಾರಣೆ ನಡೆಸಿ ತೀರ್ಪು ನೀಡಿರುತ್ತದೆ