shikshanaಇತ್ತೀಚಿನ ಸುದ್ದಿರಾಜ್ಯಸುದ್ದಿ

ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ

ಸರ್ಕಾರಿ ಶಾಲೆಗಳಲ್ಲಿ ಕೋವಿಡ್ ಸಮಯದಲ್ಲಿ ದಾಖಲಾತಿ ಏರಿಕೆಯಾಗಿದೆ ಎಂಬುದು ಕೇಂದ್ರ ಶಿಕ್ಷಣ ಇಲಾಖೆಯ ಮೂಲಕ ತಿಳಿದು ಬಂದಿದೆ. 2020-21ನೇ ಸಾಲಿನಲ್ಲಿ ಕೋವಿಡ್ ಏರಿಕೆಯಾಗಿತ್ತು. ಈ ಸಮಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಿರುವುದು ಯು-ಡೈಸ್ ಮೂಲಕ ತಿಳಿದು ಬಂದಿದೆ.

ಯುನಿಫ್ರೈಡ್ ಡಿಸ್ಟ್ರಿಕ್ ಇನ್ಫಾರ್ಮೇಷನ್ ಸಿಸ್ಟಮ್ ಫಾರ್ ಎಜುಕೇಷನ್ ಪ್ಲಸ್ (Udise plus)ನಲ್ಲಿ ಇಡೀ ದೇಶದ ಶಾಲೆಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗತ್ತದೆ. ಈ ವೇಳೆಯಲ್ಲಿ ಕರ್ನಾಟಕದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳ ಮಕ್ಕಳ ದಾಖಲಾತಿ, ಶಾಲೆಯ ಸ್ಥಿತಿಗತಿ, ಸೌಲಭ್ಯಗಳ ಮಾಹಿತಿಯನ್ನು ಸಹ ಕಲೆ ಹಾಕಿದೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಗಣನೀಯವಾಗಿ ದಾಖಲೆ ಏರಿಕೆಯಾಗಿದ್ದರೆ. ಅನುದಾನಿತ ಶಾಲೆ( Aided) ಶಾಲೆಗಳಲ್ಲಿ ಅಲ್ಪ ಪ್ರಮಾಣದ ದಾಖಲೆ ಕುಸಿತವಾಗಿದೆ. ಅನುದಾನ ರಹಿತ (Unaided)ಶಾಲೆಗಳಲ್ಲಿ ಹೆಚ್ಚು ಮಕ್ಕಳ ದಾಖಲೆ ಕುಸಿತವಾಗಿರುವುದು ಕಂಡು ಬಂದಿದೆ. ಕೋವಿಡ್ ಸಮಯದಲ್ಲಿ ಮಕ್ಕಳು ಖಾಸಗಿ ಶಾಲೆಗಳಲ್ಲಿ ಫೀಸ್ ಕಟ್ಟಲಾಗದೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಹೆಚ್ಚು ಹೆಚ್ಚು ದಾಖಲೆಯನ್ನು ಮಾಡಿರುವುದು ಯು-ಡೈಸ್ ಪ್ಲಸ್ ಮುಖಾಂತರವಾಗಿ ತಿಳಿದುಬಂದಿದೆ.

ಯುಡೈಸ್ ಪ್ಲಸ್ ಮಾಹಿತಿ

ಶೈಕ್ಷಣಿಕ ವರ್ಷ 2020-21ನೇ ಸಾಲಿನಲ್ಲಿ ಕರ್ನಾಟಕದಲ್ಲಿರುವ 72000ಕ್ಕೂ ಹೆಚ್ಚು ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಈ ಮಾಹಿತಿಯಂತೆ 2019-20ನೇ ಸಾಲಿಗೆ ಹೋಲಿಕೆಯನ್ನು ಮಾಡಿದರೇ ಮಕ್ಕಳ ದಾಖಲಾತಿ ಪ್ರಮಾಣ ಶೇ 2.32ರಷ್ಠು ಕಡಿಮೆಯಾಗಿದೆ. ಆದರೆ ಸರ್ಕಾರಿ ಶಾಲೆಯ ದಾಖಲಾತಿಯಲ್ಲಿ ಶೇ1.25ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಒಂದರಿಂದ ಹನ್ನೆರಡನೇ ತರಗತಿಯವರೆಗೂ 1,18,56,736 ದಾಖಲಾತಿಯನ್ನು ಪಡೆದಿದ್ದಾರೆ. ಆದರೆ ಹಿಂದಿನ ಶೈಕ್ಷಣಿಕ ಸಾಲಿಗೆ ಹೋಲಿಕೆಯನ್ನು ಮಾಡಿದರೆ 2.82ಲಕ್ಷ ವಿದ್ಯಾರ್ಥಿಘಳು ಕಡಿಮೆ ದಾಖಲಾಗಿದ್ದಾರೆ. ಇದಕ್ಕೆ ಕೋವಿಡ್ ಕಾರಣಲಿದೆ ಎಂಜು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಯುಡೈಸ್ ನೀಡಿರುವ ಅಂಕಿ ಅಂಶ

ಸರ್ಕಾರಿ ಶಾಲೆ 2019-20ಯಲ್ಲಿ 49,06,231 ಮಕ್ಕಳು ದಾಖಲಾಗಿದ್ದರು 2020-21ನೇ ಸಾಲಿನಲ್ಲಿ 50,30,606 ಮಕ್ಕಳು ದಾಖಲಾಗಿದ್ದರು ಇವರು ಶೇಕಡವಾರು ಹೋಲಿಕೆಯನ್ನು ಗಮನಿಸಿದರೇ 1.25% ಮಕ್ಕಳು ಹೆಚ್ಚು ದಾಖಲಾಗಿದ್ದಾರೆ. ಅನುದಾನಿತ ಶಾಲೆ 2019-20ಯಲ್ಲಿ 15,46,326 ಮಕ್ಕಳು ದಾಖಲಾಗಿದ್ದರು 2020-21ನೇ ಸಾಲಿನಲ್ಲಿ 15,06,780 ಮಕ್ಕಳು ದಾಖಲಾಗಿದ್ದರು ಇವರು ಶೇಖಡವಾರು ಹೋಲಿಕೆಯನ್ನು ಗಮನಿಸಿದರೇ 2.05% ಕಡಿಮೆ ಮಕ್ಕಳು ದಾಖಲಾಗಿದ್ದಾರೆ. ಅನುದಾನಿತ ಶಾಲೆ 2019-20ಯಲ್ಲಿ 56,85,879 ಮಕ್ಕಳು ದಾಖಲಾಗಿದ್ದರು 2020-21ನೇ ಸಾಲಿನಲ್ಲಿ 53,17,640 ಮಕ್ಕಳು ದಾಖಲಾಗಿದ್ದರು ಇವರು ಶೇಕಡವಾರುು ಹೋಲಿಕೆಯನ್ನು ಗಮನಿಸಿದರೇ 6.47% ಕಡಿಮೆ ಮಕ್ಕಳು ದಾಖಲಾಗಿದ್ದಾರೆ. ಒಟ್ಟಾರೆ ಕೋವಿಡ್ ಸಮಯದಲ್ಲಿ ಮಕ್ಕಳ ದಾಖಲಾತಿ ಕುಸಿತವಾಗಿದ್ದು 2.32% ಮಕ್ಕಳು ಕಡಿಮೆ ದಾಖಲಾಗಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ 3031 ಶಾಲೆಗಳಲ್ಲಿ ಸೌಲಭ್ಯ

ರಾಜ್ಯದಲ್ಲಿ ಯುಡೈಸ್ ನೀಡಿರುವ ವರದಿ ಪ್ರಕಾರ 49 ಸಾವಿರಕ್ಕೂ ಹೆಚ್ಚು ಶಾಲೆಗಳು ಇವೆ. ಈ ಪೈಕಿ 16000ಶಾಲೆಗಳಲ್ಲಿ ಮಾತ್ರವೇ ಕಂಪ್ಯೂಟರ್ ಸೌಲಭ್ಯವನ್ನು ಹೊಂದಿವೆ. ಉಳಿದ 33000 ಶಾಲೆಗಳಲ್ಲಿ ಕಂಪ್ಯೂಟರ್ ಸೌಲಭ್ಯವನ್ನು ಹೊಂದಿಲ್ಲ. ಇನ್ನು ಹದಿನಾರು ಸಾವಿರ ಶಾಲೆಗಳಲ್ಲಿ ಕಂಪ್ಯೂಟರ್‌ಗಳಿದ್ದರೂ ಈ ಪೈಕಿ ಕೆಲವು ಖಾಸಗಿ ಶಾಲೆಗಳು ಇಂಟರ್ ನೆಟ್ ಸೌಲಭ್ಯವನ್ನು ಹೊಂದಿವೆ. ಸರ್ಕಾರಿ ಶಾಲೆಗಳಲ್ಲಿ 3031 ಶಾಲೆಗಳಲ್ಲಿ ಇಂಟರ್ ನೆಟ್ ಸೌಲಭ್ಯವನ್ನು ಹೊಂದಿದ್ದು ಉಳಿದ ಶಾಲೆಗಳಲ್ಲಿ ಇಂಟರ್ ನೆಟ್ ಸೌಲಭ್ಯ ಹೊಂದಿರುವುದಿಲ್ಲ.

ಶಾಲೆಯ ಸ್ಥಿತಿಗತಿ ಮಕ್ಕಳ ಸಂಪೂರ್ಣ ಮಾಹಿತಿ

ದೇಶದಾದ್ಯಂತ ಯುಡೈಸ್ ಪ್ಲಸ್‌ನಲ್ಲಿ ಶಾಲೆಗಳು ತಮ್ಮ ಮಾಹಿತಿಯನ್ನು ಹಾಕಬೇಕು. ಕ್ಲಸ್ಟರ್ ನಲ್ಲಿ ಸಿಆರ್ ಪಿಗಳು ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಈ ಯುಡೈಸ್ ಪ್ಲಸ್ ನಲ್ಲಿ ಶಾಲೆ ಯಾವಾಗ ಪ್ರಾರಂಭವಾಯಿತು ಶಾಲೆಯಲ್ಲಿರುವ ಕೊಠಡಿ ಸಂಖ್ಯೆ, ಶೌಚಾಲಯ , ನೀರಿನ ಸಂಪರ್ಕದ ಮಾಹಿತಿ ಸೇರಿದಂತೆ ಪ್ರತಿಯೊಂದು ಪ್ರಶ್ನೆಗಳಿಗೂ ಶಾಲೆಗಳು ಉತ್ತರಿಸಿರುತ್ತವೆ. ಈ ಮಹಿತಿಯನ್ನು ಕೇಂದ್ರ ಶಿಕ್ಷಣ ಇಲಾಖೆ ಪಡೆದುಕೊಂಡಿರುತ್ತದೆ.

Related Articles

Leave a Reply

Your email address will not be published. Required fields are marked *

Back to top button