ಕರ್ನಾಟಕದಲ್ಲಿ ಹೊಸದಾಗಿ 8,906 ಜನರಿಗೆ ಕೊರೊನಾ ದೃಢ; 4 ಮಂದಿ ಸಾವು
ಬೆಂಗಳೂರಿನಲ್ಲಿ ಇಂದು ಒಂದೇ ದಿನ 7,113 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,90,299 ಕ್ಕೆ ಏರಿಕೆಯಾಗಿದೆ. 12,90,299 ಸೋಂಕಿತರ ಪೈಕಿ 12,41,721 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 3 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,420 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 16,420 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.
ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ
ಬಾಗಲಕೋಟೆ 6, ಬಳ್ಳಾರಿ 43, ಬೆಳಗಾವಿ 70, ಬೆಂಗಳೂರು ಗ್ರಾಮಾಂತರ 111, ಬೆಂಗಳೂರು ನಗರ 7,113, ಬೀದರ್ 13, ಚಾಮರಾಜನಗರ 10, ಚಿಕ್ಕಬಳ್ಳಾಪುರ 36, ಚಿಕ್ಕಮಗಳೂರು 22, ಚಿತ್ರದುರ್ಗ 15, ದಕ್ಷಿಣ ಕನ್ನಡ 295, ದಾವಣಗೆರೆ 12, ಧಾರವಾಡ 56, ಗದಗ 16, ಹಾಸನ 139, ಹಾವೇರಿ 0, ಕಲಬುರಗಿ 58, ಕೊಡಗು 26, ಕೋಲಾರ 65, ಕೊಪ್ಪಳ 3, ಮಂಡ್ಯ 183, ಮೈಸೂರು 203, ರಾಯಚೂರು 4, ರಾಮನಗರ 28, ಶಿವಮೊಗ್ಗ 66, ತುಮಕೂರು 53, ಉಡುಪಿ 186, ಉತ್ತರ ಕನ್ನಡ 52, ವಿಜಯಪುರ 22, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
ಕೊರೊನಾದಿಂದ ಮೃತಪಟ್ಟವರ ವಿವರ
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 3 ಮಂದಿ ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಕೊವಿಡ್ನಿಂದ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಸಾವು ಸಂಭವಿಸಿಲ್ಲ.
ಬೆಂಗಳೂರಿನಲ್ಲಿ ಇಂದು 19 ಪೊಲೀಸ್ ಸಿಬ್ಬಂದಿಗೆ ಕೊರೊನಾ
ಬೆಂಗಳೂರಿನಲ್ಲಿ ಇಂದು 19 ಪೊಲೀಸ್ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಪಶ್ಚಿಮ ವಿಭಾಗದ 19 ಪೊಲೀಸ್ ಸಿಬ್ಬಂದಿಗೆ ಕೊರೊನಾ ದೃಢವಾಗಿದೆ. 2 ದಿನದ ಹಿಂದ ಇದೇ ವಿಭಾಗದಲ್ಲಿ 27 ಸಿಬ್ಬಂದಿಗೆ ಕೊರೊನಾ ಕಂಡುಬಂದಿತ್ತು. ಅದರಂತೆ, ಪಶ್ಚಿಮ ವಿಭಾಗದಲ್ಲಿ ಒಟ್ಟು 45 ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ.
ಬೆಳಗಾವಿ: ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ 12 ವಿದ್ಯಾರ್ಥಿನಿಯರಿಗೆ ಕೊರೊನಾ
ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿರುವ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೊನಾ ಕಂಡುಬಂದಿದೆ. 15 ರಿಂದ 18 ವರ್ಷದ 12 ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಜ್ವರ ಕಾಣಿಸಿಕೊಂಡಿತ್ತು. 102 ವಿದ್ಯಾರ್ಥಿನಿಯರಿಗೆ ರ್ಯಾಪಿಡ್ ಟೆಸ್ಟ್, RTPCR ಟೆಸ್ಟ್ ಮಾಡಿಸಲಾಗಿತ್ತು. ರ್ಯಾಪಿಡ್ ಟೆಸ್ಟ್ನಲ್ಲಿ 12 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಸ್ಯಾಂಪಲ್ಸ್ ಲ್ಯಾಬ್ಗೆ ರವಾನೆ ಮಾಡಲಾಗಿದೆ. 102 ವಿದ್ಯಾರ್ಥಿನಿಯರ ಸ್ಯಾಂಪಲ್ಸ್ ಬೆಳಗಾವಿ ಲ್ಯಾಬ್ಗೆ ರವಾನಿಸಲಾಗಿದೆ. ಒಟ್ಟು 600ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿರುವ ವಸತಿ ಶಾಲೆಯಲ್ಲಿ ಕೊರೊನಾ ಪತ್ತೆಯಾಗಿದ್ದು ಬಾಲಕಿಯರ ವಸತಿ ಶಾಲೆ ಸೀಲ್‌ಡೌನ್ ಮಾಡಲು ಸಿದ್ಧತೆ ನಡೆಸಲಾಗಿದೆ.