ರಾಜ್ಯಸುದ್ದಿ

ಭಾರತದ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ: 5,000 ಕಿ.ಮೀ ಗುರಿ ಭೇದಿಸುವ ಡೆಡ್ಲಿ ಮಿಸೈಲ್​..!

Successfully Test-fires Agni 5 : 5000 ಕಿಮೀ ವ್ಯಾಪ್ತಿಯ ಮಾರಕ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷಿಪಣಿ(Agni 5 Missile)ಯನ್ನು ಯಶಸ್ವಿ ಉಡಾವಣೆ (Successfully Test)ಮಾಡಲಾಗಿದೆ. ಮೇಲ್ಮೈಯಿಂದ ಮೇಲ್ಮೈಗೆ ಮಾರಕ (Surface to a Surface) ಕ್ಷಮತೆ ಹೊಂದಿರುವ ಈ ಬ್ಯಾಲಿಸ್ಟಿಕ್ ಕ್ಷಿಪಣಿಯ (Ballistic Missile)ನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ (APJ Abdul Kalam Island off Odisha Coast) ಉಡಾವಣೆ ಮಾಡಲಾಗಿದೆ. ಮೂರು ಹಂತದ ಘನ ಇಂಧನ ಎಂಜಿನ್(Engine) ಹೊಂದಿರುವ ಈ ಕ್ಷಿಪಣಿಯು ಗುರಿಯನ್ನು ಅತ್ಯಂತ ನಿಖರವಾಗಿ ತಲುಪಿ ಧ್ವಂಸಗೊಳಿಸಬಲ್ಲದು. ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂಬ ಈ ಹಿಂದಿನ ನಿರ್ಧಾರಕ್ಕೆ ಇಂದಿಗೂ ಭಾರತ(India) ಬದ್ಧವಾಗಿದೆ.

ಹೀಗಾಗಿಯೇ ನಿಖರವಾಗಿ ಗುರಿ ಮುಟ್ಟಬಲ್ಲ ಖಂಡಾಂತರ ಕ್ಷಿಪಣಿಗಳಿಗೆ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಹೆಚ್ಚಿನ ಮಹತ್ವವಿದೆ. ಅತ್ಯಂತ ನಿಖರತೆಯಿಂದ ತನ್ನ ಗುರಿಯನ್ನು ತಲುಪಬಲ್ಲ ಈ ಕ್ಷಿಪಣಿ ಇಡೀ ಚೀನಾ(China) ಮತ್ತು ಪಾಕಿಸ್ತಾನ(Pakistan)ವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಅಗ್ನಿ- 5 ಕ್ಷಿಪ ಣಿ ಪರೀಕ್ಷೆಯಿಂದ ಚೀನಾ ಹಾಗೂ ಪಾಕಿಸ್ತಾನಕ್ಕೆ ಭಾರತ ಪರೋಕ್ಷವಾಗಿ ಎಚ್ಚರಿಕೆ(Warning) ನೀಡಿದೆ ಎಂದು ಹೇಳಲಾಗುತ್ತಿದೆ.

ಹಲವು ಗುರಿ, ಏಕಕಾಲಕ್ಕೆ ಧ್ವಂಸ!

ಇನ್ನೂ ಅಗ್ನಿ-5 ಖಂಡಾಂತರ ಕ್ಷಿಪಣಿಯು 50,000 ಕೆಜಿ ತೂಕವಿದೆ. 24 ಎಂಎಸಿಎಚ್ ವೇಗದಲ್ಲಿ ಸಂಚಾರ ನಡೆಸಲಿದೆ. 17.5 ಮೀಟರ್ ಉದ್ದವಿದೆ. 1,500 ಕೆಜಿ ಅಣ್ವಸ್ತವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಈ ಅಗ್ನಿ-5 ಕ್ಷಿಪಣಿ ಹೊಂದಿದೆ. ಎಂಐಆರ್​ವಿ (Multiple Independently Targetable Re-entry Vehicles ) ತಂತ್ರಜ್ಞಾನದ ಈ ಎಂಜಿನ್​ ಬಳಸಿ ಉಡಾಯಿಸಿದ ಕ್ಷಿಪಣಿಯು ಹಲವು ಗುರಿಗಳನ್ನು ಏಕಕಾಲಕ್ಕೆ ಧ್ವಂಸ ಮಾಡುತ್ತೆ.

Related Articles

Leave a Reply

Your email address will not be published. Required fields are marked *

Back to top button