ಕರ್ನಾಟಕ ರಾಜ್ಯವು ಮಂಗಳವಾರದಿಂದ ಹೊಸ ಕಾನೂನನ್ನು ಜಾರಿಗೆ ತಂದ ನಂತರ, ಫ್ಯಾಂಟಸಿ ಮೊಬೈಲ್ ಆಟಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬುಧವಾರದಂದು ಕರ್ನಾಟಕದಲ್ಲಿ ಮೊಬೈಲ್ ಪ್ರೀಮಿಯರ್ ಲೀಗ್ (ಎಂಪಿಎಲ್) ಬಳಕೆದಾರರಿಗೆ ಪ್ರವೇಶವನ್ನು ನಿರ್ಬಂಧಿಸಲು ಆರಂಭಿಸಿತು.
ಬೆಟ್ಟಿಂಗ್ ಮತ್ತು ಪಂತವನ್ನು ಒಳಗೊಂಡಿರುವ ಆನ್‌ಲೈನ್ ಆಟಗಳನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸುವ ಮೂಲಕ ಫ್ಯಾಂಟಸಿ ಗೇಮ್ಗಳನ್ನು ಕರ್ನಾಟಕ ರಾಜ್ಯ ಸರ್ಕಾಋ ಬ್ಯಾನ್ ಮಾಡಿದೆ.
ಇತ್ತೀಚಿನ ಆನ್‌ಲೈನ್ ಗೇಮಗ್ಗಳು ಮತ್ತು ಅದಕ್ಕೆ ಹಣ ವ್ಯಯ ಮಾಡುವ ಪ್ರಕ್ರಿಯೆ ಜೋರಾಗಿದೆ. ಈ ವಿಚಾರವಾಗಿ ವಿಧಾನ ಸಭೆಯಲ್ಲಿ ಚರ್ಚೆ ಕೂಡ ನಡೆದಿತ್ತು. ಇದೀಗ ಕರ್ನಾಟಕದಲ್ಲಿ ಫ್ಯಾಂಟಸಿ ಮೊಬೈಲ್ ಆಟಗಳನ್ನು ಬ್ಯಾನ್ ಮಾಡುವ ಮೂಲಕ ಉತ್ತರ ನೀಡಿದೆ.
ಭಾರತದಲ್ಲಿ ಗೇಮಿಂಗ್ಗಳ ಬಗ್ಗೆ ವ್ಯಾಪಕವಾಗಿ ಕಾರ್ಯ ನಡೆಯುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ ವಿದೇಶಿ ಹೂಡಿಕೆದಾರರು ಲಕ್ಷಾಂತರ ಡಾಲರ್‌ಗಳನ್ನುಇದಕ್ಕೆ ಪಂಪ್ ಮಾಡಿದ್ದಾರೆ.