ಇತ್ತೀಚಿನ ಸುದ್ದಿರಾಜಕೀಯಸುದ್ದಿ

ಕರವೇ ನಾರಾಯಣಗೌಡಗೆ ತಪ್ಪಿಲ್ಲ ಸಂಕಷ್ಟ: ಅರೆಸ್ಟ್ ಆಗಿದ್ದು 1 ಕೇಸ್ ನಲ್ಲಿ, ಬಾಕಿ ಇವೆ 8 ಪ್ರಕರಣಗಳು

 ಕರ್ನಾಟಕ ರಕ್ಷಣಾ ವೇದಿಕೆ ಕಳೆದ ವರ್ಷ ಡಿಸೆಂಬರ್​ 27 ರಂದು ರಾಜಧಾನಿ ಬೆಂಗಳೂರಿನಲ್ಲಿ ನಾಮಫಲಕ ಮಹಾ ಅಭಿಯಾನ ಕೈಗೊಂಡಿತ್ತು. ಅಂಗಡಿ-ಮುಗ್ಗಟ್ಟು, ಮಾಲ್​ಗಳು ಸೇರಿದಂತೆ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ 60 ರಷ್ಟು ಕನ್ನಡ ಇಲ್ಲದಿದ್ದಕ್ಕೆ ಹೋರಾಟ ನಡೆಸಿದ್ದರು. ಅಂದು ಕನ್ನಡ ನಾಮಫಲಕವಿಲ್ಲದ ಕೆಲವು ಮಾಲ್​ ಮತ್ತು ಅಂಗಡಿಗಳ ಮೇಲೆ ಕರವೇ ಕಾರ್ಯಕರ್ತರು ಕಲ್ಲು ತೂರಿದ್ದಾರೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಜನರನ್ನು ಬಂಧಿಸಲಾಗಿತ್ತು.

ಈ ಪ್ರಕರಣದಲ್ಲಿ ಕರವೇ ನಾರಾಯಣಗೌಡ ಅವರಿಗೆ ಜಾಮೀನು ಸಿಕ್ಕಿದ್ದು, ಬಿಡುಗಡೆಯಾಗಿದ್ದರು. ಆದರೆ 2017ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರವೇ ನಾರಾಯಣಗೌಡ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದರು. ಈ ಪ್ರಕರಣದಲ್ಲೂ ಕರವೇ ನಾರಾಯಣಗೌಡ ಅವರಿಗೆ ಜಾಮೀನು ಸಿಕ್ಕಿದೆ. ಆದರೆ ನಾರಾಯಣಗೌಡ ಅವರ ವಿರುದ್ಧದ ಇನ್ನೂ ಅನೇಕ ಪ್ರಕರಣಗಳು ಬಾಕಿ ಇವೆ. ಇದರಿಂದ ಕರವೇ ನಾರಾಯಣಗೌಡ ಅವರು ಜೈಲಿಂದ ಬಿಡುಗಡೆಯಾದ್ರೂ ಸಂಕಷ್ಟ ತಪ್ಪಿಲ್ಲ.

ಕರವೇ ನಾರಯಾಣಗೌಡ ಅವರು ಬಂಧನವಾಗಿದ್ದು ಒಂದು ಪ್ರಕರಣದಲ್ಲಿ, ಆದರೆ ಇನ್ನೂ ಎಂಟು ಕೇಸ್​ಗಳು ಬಾಕಿ ಇವೆ. ಚಿಕ್ಕಜಾಲ ಪೊಲೀಸ್​ ಠಾಣೆಯಲ್ಲಿ 6 ಪ್ರಕರಣ, ಯಲಹಂಕ ಪೊಲೀಸ್​ ಠಾಣೆಯಲ್ಲಿ 2 ಪ್ರಕರಣ ಬಾಕಿ ಇವೆ. ಈ ಎಲ್ಲಾ ಪ್ರಕರಣಗಳಲ್ಲೂ ಪೊಲೀಸರು 41(A) ಅಡಿ ನೋಟಿಸ್ ನೀಡಲಿದ್ದಾರೆ. ಕರವೇ ನಾರಾಯಣಗೌಡ ಅವರು ಇಷ್ಟು ದಿನ ಜೈಲಲ್ಲಿದ್ದ ಕಾರಣ ಪೊಲೀಸರು ನೋಟೀಸ್ ನೀಡಿಲ್ಲ. ಇದೀಗ ಬಿಡುಗಡೆಯಾದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ವಿಚಾರಣೆ ನಡೆಸಲಿದ್ದಾರೆ.

ನಾರಾಯಣಗೌಡ ವಿರುದ್ಧ ಕೇಸ್​ಗಳು

ಚಿಕ್ಕಜಾಲದಲ್ಲಿ ಒಟ್ಟು 6 ಕೇಸ್​ಗಳು ಬಾಕಿ

1. ಬಿಎಂಟಿಸಿ ಬಸ್​​ಗೆ ಕಲ್ಲು ತೂರಾಟ

2. ಪೊಲೀಸ್ ಕಾನ್ಸ್​ಟೇಬಲ್​ಗೆ ಉಗಿದ ಪ್ರಕರಣ

3. ವಿವಿಧ ಕಡೆ ಹೆದ್ದಾರಿ ತಡೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಪ್ರಕರಣ ಸಂಬಂಧಿಸಿದಂತೆ 143, 145, 149, 283, 8B, 427 ಸೆಕ್ಷನ್​​ಗಳ ಅಡಿ ಎಫ್​ಐಆರ್

ಯಲಹಂಕದಲ್ಲಿ 2 ಕೇಸ್​ಗಳು

1. ಬಿಎಂಟಿಸಿ ಬಸ್​ಗೆ ಡ್ಯಾಮೇಜ್ ಕೇಸ್

2. ಇಕೋ ಪೊಲೀಸ್ ಬೋರ್ಡ್ ಡ್ಯಾಮೇಜ್ ಕೇಸ್

Related Articles

Leave a Reply

Your email address will not be published. Required fields are marked *

Back to top button