ಇತ್ತೀಚಿನ ಸುದ್ದಿರಾಜ್ಯ

ಕನ್ನಡ ಯುವಕರ ಸಂಘದಿಂದ ರಾಜ್ಯೋತ್ಸವ ಆಚರಣೆ

ಚಾಮರಾಜನಗರ, ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗ ಕನ್ನಡ ಯುವಕರ ಸಂಘದಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಇದೆ ವೇಳೆ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಧ್ವಜಾರೋಹಣವನ್ನು ಉದ್ಯಮಿ ಎ.ಜಯಸಿಂಹ ನೆರವೇರಿಸಿ ಬಳಿಕ ಮಾತನಾಡಿದ ಅವರು ಕನ್ನಡಕ್ಕೆ ಡಾ.ರಾಜಕುಮಾರ್, ವಾಟಾಳ್ ನಾಗರಾಜು ಹಾಗೂ ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರು ಅಪಾರ ಕೊಡುಗೆ ನೀಡಿದ್ದಾರೆ. ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದೆ ತಮಿಳು ಮತ್ತು ತೆಲುಗಿನ ಜನರು ಸಹೋದರರಂತಿದ್ದಾರೆ. ಆದರೆ ಬಿಹಾರ, ಜಾರ್ಖಂಡ್, ಅಸ್ಸಾಂ ರಾಜ್ಯದಿಂದ ಬಂದಿರುವ ಜನರಲ್ಲಿ ಕೆಲವರು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಈ ಬಗ್ಗೆ ಕನ್ನಡಿಗರು ಎಚ್ಚೆತ್ತು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಯುವಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಧಕೃಷ್ಣ, ನಗರಸಭೆ ಮಾಜಿ ಅಧ್ಯಕ್ಷ ಸುರೇಶ ನಾಯ್ಕ, ವಿಶ್ವಕರ್ಮ ಮುಖಂಡರಾದ ಡಿ.ಎಲ್.ಕುಮಾರ್ ವಿಶ್ವಕರ್ಮ, ಚಂದ್ರಶೇಖರ್, ಸಿ.ಬಿ.ನಾಗರಾಜು, ವೆಂಕಟರಮಣ ನಾಯಕ, ಶಿಕ್ಷಕ ನಾಗರಾಜು, ಮಲ್ಲೇಶ್, ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button