ದೇಶ

ಓಮಿಕ್ರಾನ್ ಕೊವಿಡ್ ರೂಪಾಂತರದ ಹುಟ್ಟಿಗೆ ಕಾರಣ ತಿಳಿಸಿದ ವಿಶ್ವ ಆರೋಗ್ಯ ಸಂಸ್ಥೆ..

ನವದೆಹಲಿ, ಡಿಸೆಂಬರ್ 2: ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ದೇಶದಿಂದ ದೇಶಕ್ಕೆ ವ್ಯಾಪಿಸುತ್ತಿದೆ. ಸೋಂಕು ನಿಯಂತ್ರಿಸಲು ಹಲವು ರಾಷ್ಟ್ರಗಳು ಗಡಿಯನ್ನು ಬಂದ್ ಮಾಡಿವೆ. ಬಹುತೇಕ ರಾಷ್ಟ್ರಗಳು ದಕ್ಷಿಣ ಆಫ್ರಿಕಾದ ಪ್ರಯಾಣಿಕರಿಗೆ ನಿರ್ಬಂಧವನ್ನು ವಿಧಿಸಿವೆ. ಇದರ ಮಧ್ಯೆ ಓಮಿಕ್ರಾನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ.

ಕೊವಿಡ್-19 ಲಸಿಕೆಯ ಪಡೆಯದವರಲ್ಲಿನ ಕಡಿಮೆ ರೋಗ ನಿರೋಧಕ ಶಕ್ತಿ ಹಾಗೂ ಸೋಂಕು ಪರೀಕ್ಷೆಯಲ್ಲಿನ ಇಳಿಮುಖದ ವಿಷಕಾರಿ ಮಿಶ್ರಣದಿಂದ ಹೊಸ ರೂಪಾಂತರ ತಳಿಯು ಹುಟ್ಟುಕೊಳ್ಳಲು ಸಾಧ್ಯವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಜಾಗತಿಕ ಮಟ್ಟದಲ್ಲಿ ನಾವು ಕೊವಿಡ್-19 ಲಸಿಕೆ ವಿತರಣೆಯಲ್ಲಿ ಹಿಂದೆ ಉಳಿದಿದ್ದೇವೆ,

ಮತ್ತಷ್ಟು ದಿನಗಳ ನಂತರ ಓಮಿಕ್ರಾನ್ ಬಗ್ಗೆ ಸ್ಪಷ್ಟ ಮಾಹಿತಿ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ತಿಳಿದುಕೊಳ್ಳಲು ಕೆಲವು ವಾರಗಳು ಬೇಕಾಗುತ್ತದೆ. ಓಮಿಕ್ರಾನ್ ಸೋಂಕು ತೀವ್ರವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಈ ತಳಿಯು ಹಿಂದಿನ ಸೋಂಕಿಗಿಂತ ಅಪಾಯವಾಗಿಯಾಗಿದೆಯೇ, ತೀವ್ರ ಪರಿಣಾಮವನ್ನು ಬೀರುತ್ತದೆಯೇ, ಚಾಲ್ತಿಯಲ್ಲಿ ಇರುವ ಕೊವಿಡ್-19 ಲಸಿಕೆಗಳು ಈ ರೂಪಾಂತರದ ಮೇಲೆ ಪ್ರಭಾವ ಬೀರಬಲ್ಲವೇ ಎಂಬುದನ್ನು ಭವಿಷ್ಯದಲ್ಲಿ ಕಂಡುಕೊಳ್ಳಲಾಗುವುದು ಎಂದು ಟೆಡ್ರೊಸ್ ಹೇಳಿದ್ದಾರೆ. ಅದಾಗ್ಯೂ, ಓಮಿಕ್ರಾನ್ ರೂಪಾಂತರದ ಹರಡುವಿಕೆಯು ಕೊರೊನಾವೈರಸ್ ವಿರುದ್ಧದ ಎರಡೂವರೆ ವರ್ಷಗಳ ಹೋರಾಟ ಇನ್ನೂ ಮುಗಿದಿಲ್ಲ ಎಂಬುದನ್ನು ಸಾರಿ ಹೇಳುತ್ತಿದೆ. ಈ ಮೊದಲೇ ಓಮಿಕ್ರಾನ್ ರೂಪಾಂತರದ ಹರಡುವಿಕೆಯನ್ನು ತಡೆಯಲು ಕೆಲವು ದೇಶಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಯುಎನ್ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಟೀಕಿಸಿದ್ದರು.

ಇದರ ಜೊತೆ ಸೋಂಕಿನ ಪರೀಕ್ಷೆಯೂ ಕಡಿಮೆಯಾಗಿದೆ. ಇದೆರೆಡರ ಫಲವಾಗಿ ಹೊಸ ರೂಪಾಂತರ ತಳಿಗಳನ್ನು ಹುಟ್ಟಿಕೊಳ್ಳುವುದಕ್ಕೆ ದಾರಿ ಮಾಡಿಕೊಟ್ಟಂತೆ ಆಗಿದೆ,” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಗೆಬ್ರೆಯೆಸಸ್ ಹೇಳಿದ್ದಾರೆ. ಕೊರೊನಾವೈರಸ್ ಸೋಂಕಿನ ಡೆಲ್ಟಾ ರೂಪಾಂತರವು “ಬಹುತೇಕ ಎಲ್ಲಾ ಪ್ರಕರಣಗಳಿಗೆ ಕಾರಣವಾಗಿದೆ” ಎಂದು ಜಗತ್ತಿಗೆ ನೆನಪಿಸಿದೆ.

ಖಂಡದಲ್ಲಿ ವ್ಯಾಪಕವಾಗಿ ಹರಡಿದ ಓಮಿಕ್ರಾನ್

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ವರದಿಯಾದ ಬಗ್ಗೆ ಒಂದು ವಾರದ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ಸಿಕ್ಕಿತ್ತು. ಇದಾಗಿ ಒಂದೇ ವಾರದಲ್ಲಿ ಸೋಂಕು ಇತರೆ ರಾಷ್ಟ್ರಗಳಿಗೆ ವೇಗವಾಗಿ ಹರಡಿಕೊಳ್ಳುತ್ತಿದೆ. ಚಳಿಗಾಲದಲ್ಲಿ ಸೋಂಕು ಮತ್ತಷ್ಟು ಹರಡುವ ಭೀತಿ ಹೆಚ್ಚಾಗಿದ್ದು, ಆರ್ಥಿಕತೆಗೆ ಪೆಟ್ಟು ನೀಡುವ ಸಾಧ್ಯತೆಗಳಿವೆ. ಜಗತ್ತು ಈಗಾಗಲೇ ಡೆಲ್ಟಾ ರೂಪಾಂತರದ ವಿರುದ್ಧ ಹೋರಾಡುತ್ತಿದೆ. ಇದರ ಮಧ್ಯೆ ಓಮಿಕ್ರಾನ್ ರೂಪಾಂತರವು ಇಡೀ ಜಗತ್ತನ್ನೇ ತನ್ನ ಕಡೆಗೆ ತಿರುಗಿ ನೋಡುವಂತೆ ಮಾಡಿದೆ.

ಡೆಲ್ಟಾಗೆ ಬಳಸಿದ ಸಾಧನಗಳನ್ನೇ ಓಮಿಕ್ರಾನ್ ರೂಪಾಂತರಕ್ಕೆ ಬಳಸಿ

“ಕೊರೊನಾವೈರಸ್ ಡೆಲ್ಟಾ ರೂಪಾಂತರದಿಂದ ರಕ್ಷಿಸಿಕೊಳ್ಳುವುದಕ್ಕೆ ಈಗಾಗಲೇ ನಾವು ಹಲವು ಸಾಧನಗಳನ್ನು ಬಳಸುತ್ತಿದ್ದೇವೆ. ಆ ಮೂಲಕ ಸೋಂಕಿನ ಹರಡುವಿಕೆ ಹಾಗೂ ಸಾವಿನ ಪ್ರಮಾಣವನ್ನು ತಗ್ಗಿಸುತ್ತಿದ್ದೇವೆ. ಓಮಿಕ್ರಾನ್ ರೂಪಾಂತರದ ವಿರುದ್ಧ ಹೋರಾಡಲು ಹಾಗೂ ಸಾವಿನ ಪ್ರಕರಣಗಳನ್ನು ಹಾಗೂ ಹರಡುವಿಕೆಗೆ ಕಡಿವಾಣ ಹಾಕುವುದಕ್ಕೆ ಅದೇ ಸಾಧನಗಳನ್ನು ಬಳಸಿಕೊಳ್ಳಬೇಕಿದೆ,” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಗೆಬ್ರೆಯೆಸಸ್ ಹೇಳಿದ್ದಾರೆ.

ಓಮಿಕ್ರಾನ್ ಸೋಂಕಿತರು ಪತ್ತೆಯಾದ ರಾಷ್ಟ್ರಗಳು ಯಾವವುವು?

ಆಸ್ಟ್ರೇಲಿಯಾ, ಬ್ರೆಜಿಲ್, ಬ್ರಿಟನ್, ಕೆನಡಾ, ಇಸ್ರೇಲ್, ಇಟಲಿ, ನೈಜೀರಿಯಾ ಮತ್ತು ಪೋರ್ಚುಗಲ್ ಸೇರಿದಂತೆ 24 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಕೊರೊನಾವೈರಸ್ ಓಮಿಕ್ರಾನ್ ರೂಪಾಂತರ ಪ್ರಕರಣಗಳು ಪತ್ತೆ ಆಗಿವೆ. ಅಮೆರಿಕಾದಲ್ಲೂ ಇದೀಗ ಹೊಸ ರೂಪಾಂತರ ಓಮಿಕ್ರಾನ್ ಸೋಂಕು ಒಬ್ಬರಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ. ಈ ಓಮಿಕ್ರಾನ್ ಸೋಂಕಿತರ ಸಂಖ್ಯೆಯು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಟೆಡ್ರೊಸ್ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button