ಸುದ್ದಿ
ಒಡಿಶಾ, ಆಂಧ್ರದಲ್ಲಿ ಭಾರಿ ಅವಾಂತರ ಸೃಷ್ಟಿಸಿದ ಗುಲಾಬ್ ಚಂಡಮಾರುತ : ಇಬ್ಬರು ಸಾವು, ಹಲವೆಡೆ ಭೂಕಂಪನ ಸಾಧ್ಯತೆ
ಒಡಿಶಾ: ಗುಲಾಬ್ ಚಂಡಮಾರುತ ಒಡಿಶಾ, ಆಂಧ್ರಪ್ರದೇಶಗಳಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ. ಹಲವು ಮರಗಳು ಧರೆಗುರುಳಿದಿದ್ದು, ಹಲವಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಇಬ್ಬರು ಸಾವನ್ನಪ್ಪಿದ್ದಾರೆ.
ಹವಾಮಾನ ಇಲಾಖೆಯು ನವರಂಗ್‌ಪುರ, ಕೋರಾಪುಟ್ ಮತ್ತು ಮಲ್ಕಂಗಿರಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಅದೇ ರೀತಿ, ನುವಾಪದ, ಬೋಲಾಂಗಿರ್, ರಾಯಗಡ ಮತ್ತು ಕಲಹಂಡಿಯಂತಹ ಕೆಲವು ಪ್ರದೇಶಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಹಾರಾಷ್ಟ್ರದ 36 ಜಿಲ್ಲೆಗಳಿಗೂ ಸೋಮವಾರ ಮತ್ತು ಮಂಗಳವಾರ ಭಾರಿ ಮಳೆಯ ಎಚ್ಚರಿಕೆ ನೀಡಲಾಗಿದೆ. ಒಡಿಶಾ ಆಂಧ್ರಕರಾವಳಿಯಲ್ಲಿ ಭೂಕಂಪನ ಸಂಭವಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪರಿಸ್ಥಿತಿ ಎದುರಿಸಲು NDRF ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, 34 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.