ಡಿಜಿಟಲ್ ಇಂಡಿಯಾ(Digital India) ಕಲ್ಪನೆ ಸಾಕಾರಗೊಳ್ಳುವಂತೆ ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಆನ್‌ಲೈನ್ ವಹಿವಾಟು ಹೆಚ್ಚಾಗುತ್ತಲೇ ಇದೆ. ಶಾಪಿಂಗ್(Shopping), ಫುಡ್ ಡೆಲಿವರಿ, ತಿಂಡಿ, ಊಟ ತಿನ್ನಲು, ದುಡ್ಡನ್ನು ಒಬ್ಬರಿಂದ ಇನ್ನೊಬ್ಬರ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡುವುದು – ಹೀಗೆ ಅನೇಕ ಕಾರಣಗಳಿಗೆ ಡೆಬಿಟ್ ಕಾರ್ಡ್(Debit Card) ಹಾಗೂ ಕ್ರೆಡಿಟ್ ಕಾರ್ಡ್ (Credit Card)ಬಳಕೆ, ಯುಪಿಐ ಸೇರಿ ಆನ್‌ಲೈನ್ ಬಳಕೆ ಹೆಚ್ಚಾಗುತ್ತಲೇ ಇದೆ.
ಆನ್‌ಲೈನ್ ಬಳಕೆ ಹೆಚ್ಚಾದಂತೆ ಸೈಬರ್ ವಂಚನೆಯ(Cyber Crime) ಪ್ರಕರಣಗಳೂ ಹೆಚ್ಚಾಗುತ್ತಲೇ ಇದೆ. ಅನೇಕ ನೆಪಗಳನ್ನೊಡ್ಡಿ ನಿಮಗೆ ಫೋನ್ ಮಾಡಿ ನಿಮ್ಮ ಅಕೌಂಟ್ ನಂಬರ್, ಪಾಸ್‌ವರ್ಡ್, ಒಟಿಪಿ(OTP), ಮುಂತಾದ ಖಾಸಗಿ ಮಾಹಿತಿಗಳನ್ನು ಪಡೆದು ನಿಮ್ಮ ಅಕೌಂಟ್‌ನಿಂದ ಹಣ ಎಗರಿಸುವುದು, ಎಟಿಎಂನಲ್ಲಿ ವಂಚನೆ ಮುಂತಾದ ಪ್ರಕರನಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ.
ಪೊಲೀಸರು ಸಹ ಇಂತಹ ವಂಚನೆಗೊಳಗಾಗಬೇಡಿ, ನಿಮ್ಮ ಖಾಸಗಿ ಮಾಹಿತಿಗಳನ್ನು ಯಾರಿಗೂ ನೀಡಬೇಡಿ, ಆನ್‌ಲೈನ್ ಶಾಪಿಂಗ್ ವೇಳೆ ಎಚ್ಚರಿಕೆ ಇರಲಿ ಎಂದು ಸಲಹೆ ನೀಡುತ್ತಿರುತ್ತಾರೆ. ಅದರೂ, ಜನ ಇಂತಹ ವಂಚನೆಗೊಳಗಾಗುತ್ತಾರೆ. ಅದೇ ರೀತಿ, ಇತ್ತೀಚೆಗೆ ಪೊಲೀಸ್ ಮಾಜಿ ಮಹಾನಿರ್ದೇಶಕರಾಗಿದ್ದವರೇ ಸೈಬರ್ ವಂಚನೆಗೊಳಗಾಗಿದ್ದಾರೆ.