ಒಂಟಿಯಾಗಿದ್ದ ತಾಯಿಗೆ ಮದುವೆ ಮಾಡಿಸಿ ಮಾದರಿಯಾದ ಮಗಳು..
ಕೇಳಲು ಸಿನಿಮಾ ಕಥೆಯಂತೆ ಘಟನೆ ಇದ್ದರು ಸಹ ಇದು ಸಿನಿಮಾ ಕಥೆಯಲ್ಲ.. ನಿಜ ಜೀವನದಲ್ಲಿ ಯುವತಿಯೊಬ್ಬಳು ತನ್ನ ತಾಯಿಗೆ ಹುಡುಗನನ್ನು ಹುಡುಕಿ ಮದುವೆ ಮಾಡಿಸಿದ್ದಾರೆ.. ಅದೇ ಈ ಘಟನೆ ನಡೆದಿರುವುದು ಭಾರತದಲ್ಲಿಯೇ.. @alphaw1fe ಕ
ಹೆಸರಿನಲ್ಲಿ ಟ್ವಿಟರ್ ಖಾತೆ ಹೊಂದಿರುವ ಹುಡುಗಿಯೊಬ್ಬಳು ತನ್ನ ತಾಯಿಗೆ ಮದುವೆ ಮಾಡಿಸಿರುವುದಾಗಿ ಮದುವೆಗೆ ಮೊದಲಿನ ನಿಶ್ಚಿತಾರ್ಥದ ಫೋಟೋಗಳು ಹಾಗೂ ತಾಯಿ ಮದುವೆಗೆ ಸಿದ್ಧಗೊಳ್ಳುತ್ತಿರುವ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ
ಅಲ್ಲದೆ ಮತ್ತೊಂದು ವಿಡಿಯೋದಲ್ಲಿ ನನ್ನ ತಾಯಿ ಮದುವೆಯಾಗುತ್ತಿದ್ದಾರೆ ಎಂದರೆ ನಂಬಲೇ ಆಗುತ್ತಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ. ನನ್ನ ತಾಯಿ ತನ್ನ ಹೊಸ ಜೀವನ ಪ್ರಾರಂಭಿಸಲು ಎಷ್ಟು ಸಂತೋಷವಾಗಿದ್ದಾರೆ ನೋಡಿ ಎಂದು ಆಕೆ ಮತ್ತೊಂದು ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಫೋಸ್ಟ್ ಮಾಡಿದ್ದಾಳೆ.
ವಿವಾಹ ಎಂಬುದು ಒಂದು ಸುಂದರವಾದ ಅನುಬಂಧ ಆದರೆ ಗಂಡು ಹೆಣ್ಣಿನ ಮಧ್ಯೆ ಸಾಮರಸ್ಯವಿಲ್ಲದಿದ್ದರೆ ಅದೊಂದು ನರಕವೇ ಸರಿ. ಎಲ್ಲರ ದಾಂಪತ್ಯ ಜೀವನ ಸುಂದರವಾಗಿರುತ್ತದೆ ಎಂದು ಹೇಳಲಾಗದು. ಬಹುತೇಕ ಮಹಿಳೆಯರು ತಮಗೆ ದಾಂಪತ್ಯದಲ್ಲಿ ನೆಮ್ಮದಿ ಇಲ್ಲದಿದ್ದರೂ ಮಕ್ಕಳು ಕುಟುಂಬದ ಮುಖ ನೋಡಿ ತಮ್ಮ ನೆಮ್ಮದಿಯನ್ನು ಪಕ್ಕಕಿಟ್ಟು ನೀರಿಗಿಳಿದಾದ ಮೇಲೆ ಈಜಲೇಬೇಕು ಎಂದು ಭಾವಿಸಿ ಅದೇ ಸಂಬಂಧದಲ್ಲಿ ನೆಲೆ ನಿಲ್ಲುತ್ತಾರೆ. ಬದುಕಲೇ ಆಗದು ಎಂಬಂತಹ ಸನ್ನಿವೇಶಗಳಿದ್ದಲ್ಲಿ ಎಲ್ಲ ಅಪವಾದಗಳನ್ನು ಮೆಟ್ಟಿ ನಿಂತು ದೂರ ಸಾಗಿ ಬಂದು ಹೊಸ ಬದುಕು ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಇದಕ್ಕೆ ಹೆತ್ತ ಮಕ್ಕಳು ಬೆಂಬಲ ನೀಡಿದರೆ ಇದಕ್ಕಿಂತ ಉತ್ತಮವಾಗಿರುವುದು ಮತ್ತೊಂದು ಇಲ್ಲ..
ಸದ್ಯ ಈ ಯುವತಿಯ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದ್ದಂತೆ, ಈಕೆಯ ದೈರ್ಯಕ್ಕೆ ನೆಟ್ಟಿದರೂ ಮನಸೋತು ಹಾಡಿ ಹೊಗಳುತ್ತಿದ್ದಾರೆ.. ಮತ್ತು ಕೆಲವರು ಹೊಸ ಮದುವೆಯಾದ ತಾಯಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.. ಟ್ವಿಟ್ಟರ್ ನಲ್ಲಿ ಈ ಸುದ್ದಿ ಸಾಕಷ್ಟು ವೈರಲ್ ಆಗುತ್ತಿದ್ದಂತೆ, ಪ್ರತಿಕ್ರಿಯೆ ನೀಡಿರುವ ಯುವತಿ ತನ್ನ ತಾಯಿಯನ್ನು ಯಾಕೆ ಮರುಮದುವೆ ಮಾಡಿಸಿರುವುದಾಗಿ ತಿಳಿಸಿದ್ದಾಳೆ.
‘ತನ್ನ ತಾಯಿ ಸುಮಾರು 15 ವರ್ಷಗಳ ಹಿಂದೆ ಒಂದು ಬಯಸದ ವಿವಾಹ ಸಂಬಂಧದಿಂದ ಹೊರ ನಡೆದಿದ್ದಳು. ಆದರೆ ನಾನು ಮತ್ತು ನನ್ನ 16 ವರ್ಷದ ಸಹೋದರ ನಮ್ಮ ಕುಟುಂಬಕ್ಕೆ ಒಬ್ಬ ಹೊಸ ವ್ಯಕ್ತಿಯನ್ನು ಕರೆ ತರಲು ಬಯಸಿದ್ದೇವೆ. ನಮ್ಮ ಜೀವನದಲ್ಲಿ ತಂದೆಯ ವ್ಯಕ್ತಿತ್ವವನ್ನು ಸ್ವಾಗತಿಸಲು ನಾವು ತುಂಬಾ ಸಂತೋಷಪಡುತ್ತೇವೆ ಎಂದು ಹುಡುಗಿ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾಳೆ.