ಕ್ರೀಡೆ

ಐಪಿಎಲ್ ಡ್ರೀಮ್ 11 ಫ್ಯಾಂಟಸಿ ಆಟದಲ್ಲಿ 1 ಕೋಟಿ ರೂ. ಗೆದ್ದ ಬಿಹಾರದ ಮಧುಬನಿ ಜಿಲ್ಲೆಯ ಕ್ಷೌರಿಕ!

ಮಧುಬನಿ : ಬಿಹಾರದ ಮಧುಬನಿ (Bihar Madhubani) ಜಿಲ್ಲೆಯ ಕ್ಷೌರಿಕನೊಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಡ್ರೀಮ್ 11ನ (Dream 11) ‘ಡ್ರೀಮ್ ಟೀಮ್” (Dream Team) ಸ್ಪರ್ಧೆಯಲ್ಲಿ 1 ಕೋಟಿ ರೂ. ಗೆದ್ದು ಇತಿಹಾಸ ಬರೆದಿದ್ದಾರೆ. ಮಧುಬನಿಯ ಅಂಧರಥಂಡಿ ಬ್ಲಾಕ್‌ನ ನಾನೌರ್ ಚೌಕ್‌ನಲ್ಲಿ ಕ್ಷೌರಿಕ ಅಂಗಡಿ ನಡೆಸುತ್ತಿರುವ ಅಶೋಕ್ ಕುಮಾರ್ (Ashok Kumar), ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕೆ ತಮ್ಮ ಡ್ರೀಮ್ ಟೀಮ್ ಆಟಗಾರರನ್ನು ಆಯ್ಕೆ ಮಾಡಿದ್ದರು. ಕುಮಾರ್ ಅವರ ಆಟಗಾರರ ಆಯ್ಕೆ ಗಮನ ಸೆಳೆದಿದ್ದು, ಭಾನುವಾರ ಸ್ಪರ್ಧೆಯು ಕೊನೆಗೊಂಡಿದ್ದು, ಅಶೋಕ್ ಕುಮಾರ್ ಉನ್ನತ ಬಹುಮಾನ ವಿಜೇತ ಎಂದು ಘೋಷಿಸಲಾಯಿತು.

ಡ್ರೀಮ್ 11 ಒಂದು ವಾಸ್ತವ ಫ್ಯಾಂಟಸಿ ಆಟವಾಗಿದ್ದು, ಆಟ ಆರಂಭವಾಗುವ ಮುನ್ನ ತಮ್ಮ ತಂಡದ ಆಯ್ಕೆಗಾಗಿ ಎರಡು ತಂಡಗಳ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಇರುತ್ತದೆ. ತಂಡದ ಆಯ್ಕೆಯ ನಂತರ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಅಂಕಗಳನ್ನು ಲೆಕ್ಕ ಹಾಕಲಾಗುತ್ತದೆ. ಈ ಅಂಕಗಳ ಮೂಲಕವೇ ಕ್ಷೌರಿಕ ಅಶೋಕ್ ಕುಮಾರ್​ 1 ಕೋಟಿ ರೂ ಗೆದ್ದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿರುವ ಅಶೋಕ್ ಕುಮಾರ್, “ಪಂದ್ಯದ ನಂತರ, ನಾನು ಮೊದಲ ಸ್ಥಾನಕ್ಕೆ ಬಂದು ಒಂದು ಕೋಟಿ ಗೆದ್ದಿದ್ದೇನೆ. ಶೀಘ್ರದಲ್ಲೇ ಅಧಿಕೃತ ಕರೆ ಕೂಡ ಬಂದಿತು. ಮುಂದಿನ ಎರಡು ದಿನಗಳಲ್ಲಿ 70 ಲಕ್ಷ ಮೊತ್ತವನ್ನು ನನ್ನ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಲಾಗಿತ್ತು. ಹಣ ತೆರಿಗೆ ಕಡಿತದ ನಂತರ ಪಾವತಿಸಲಾಗಿದೆ. ಆ ದಿನ ರಾತ್ರಿ ನಿಜಕ್ಕೂ ನನಗೆ ನಿದ್ರೆ ಬರಲಿಲ್ಲ “ಎಂದು ಅವರು ತಿಳಿಸಿದ್ದಾರೆ.

“ನಾನು ಚೆನ್ನೈ ಸೂಪರ್ ಕಿಂಗ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಕೇವಲ 50 ರೂ. ಪ್ರವೇಶ ಶುಲ್ಕವನ್ನು ಪಾವತಿಸಿ ನನ್ನ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ್ದೆ. ಆದರೆ, ಈ ಪ್ರಮಾಣದ ಹಣ ಗಳಿಸುತ್ತೇನೆ ಎಂದು ಭಾವಿಸಿರಲಿಲ್ಲ. ನಾನು ಕ್ಷೌರಿಕನಾಗಿ ನನ್ನ ಕೆಲಸವನ್ನು ಪ್ರೀತಿಸುತ್ತೇನೆ ಮತ್ತು ಭವಿಷ್ಯದಲ್ಲಿ ಈ ಕೆಲಸವನ್ನೇ ಮುಂದುವರಿಸುತ್ತೇನೆ” ಎಂದು ಅಶೋಕ್ ಕುಮಾರ್​ ತಿಳಿಸಿದ್ದಾರೆ. ಅಶೋಕ್ ಕುಮಾರ್ ಈ ಹಿಂದೆ ಹಲವು ಬಾರಿ ‘ಡ್ರೀಮ್ ಟೀಮ್’ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಆದಾಗ್ಯೂ, ಅವರು ಮೊದಲ ಬಾರಿಗೆ ಜಾಕ್‌ಪಾಟ್ ಹೊಡೆದಿದ್ದಾರೆ. ಅವರು ಈ ಹಣವನ್ನು ತನ್ನ ಸಾಲವನ್ನು ತೀರಿಸಲು ಮತ್ತು ಕುಟುಂಬಕ್ಕಾಗಿ ಒಂದು ಮನೆಯನ್ನು ಕಟ್ಟಲು ಬಳಸುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button