ಐತಿಹಾಸಿಕ ವಿಶ್ವಪ್ರಸಿದ್ದ ವೈರಮುಡಿ ಉತ್ಸವ!
ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಇಂದು ಐತಿಹಾಸಿಕ ವಿಶ್ವಪ್ರಸಿದ್ದ ವೈರಮುಡಿ ಉತ್ಸವ ನಡೆಯುತ್ತಿದೆ. ಐತಿಹಾಸಿಕ ಉತ್ಸವಕ್ಕೆ ಮೇಲುಕೋಟೆಯನ್ನು ನವ ವಧುವಿನಂತೆ ಸಿಂಗರಿಸಲಾಗಿದ್ದು, ವಿಶೇಷ ದೀಪಾಂಲಕಾರ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣದಿಂದ ಸರಳವಾಗಿ ನಡೆದಿದ್ದ ಈ ವೈರಮುಡಿ ಉತ್ಸವವನ್ನು ಇದೀಗ ಕೊರೊನಾ ಪ್ರಕರಣಗಳು ಇಳಿಮುಖವಾಗಿರುವ ಹಿನ್ನಲೆಯಲ್ಲಿ ಮತ್ತೆ ಅದ್ದೂರಿಯಾಗಿ ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು, ಸಕಲ ಸಿದ್ದತೆ ಮಾಡಿಕೊಂಡಿದೆ. ಅಷ್ಟೇ ಅಲ್ಲದೆ ಉತ್ಸವಕ್ಕೆ ಮೇಲುಕೋಟೆಯನ್ನು ನವ ವಧುವಿನಂತೆ ಸಿಂಗಾರ ಮಾಡಲಾಗಿದೆ. ಮೇಲುಕೋಟೆಯ ಈ ವೈರಮುಡಿ ಉತ್ಸವಕ್ಕೆಈ ಬಾರಿ ವಿಶೇಷ ಬಣ್ಣದ ದೀಪಾಂಲಕಾರದ ವ್ಯವಸ್ಥೆ ಮಾಡಿದ್ದು ಬಣ್ಣದ ದೀಪಗಳಿಂದ ಮೇಲುಕೋಟೆ ಕಂಗೊಳಿಸುತ್ತಿದೆ.
ಇನ್ನು ವೈರಮುಡಿ ಉತ್ಸವದ ಅಂಗವಾಗಿ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ದೇಗುಲ, ರಾಜಬೀದಿ, ಕಲ್ಯಾಣಿ ಹಾಗೂ ಯೋಗಾ ನರಸಿಂಹಸ್ವಾಮಿ ಬೆಟ್ಟ ಹಾಗೂ ಬೆಟ್ಟದ ಮೇಲಿನ ದೇಗುಲಕ್ಕೆ ವಿಶೇಷವಾಗಿ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ದ್ರೋಣ್ ಕ್ಯಾಮರಾದಲ್ಲಿನ ಈ ಬಣ್ಣದ ಅಲಂಕಾರ ದೃಶ್ಯ ಮೈ ಮನ ಸೂರೆಗೊಳ್ಳುವಂತಿದೆ. ಅಲ್ಲದೆ ಬೆಟ್ಟದ ಕೆಳಗೆ ಮತ್ತು ಗೋಪುರಕ್ಕೆ ಈ ಬಾರೀ ಲೇಸರ್ ಲೈಟ್ ನಿಂದ ಚಿತ್ತಾರ ಬಿಡಿಸಿದ್ದು ದೂರದಿಂದ ಕೂಡ ಇದು ಗೋಚರಿಸುತ್ತಿದೆ.
ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು, ಈ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಿದ್ದು ಬೆಟ್ಟದ ಕೆಳಗಿನ ದಳವಾಯಿ ಕೆರೆಯಲ್ಲಿ ಗಂಗಾರತಿ ಮಾಡಲಿದ್ದಾರೆ. ಅದಕ್ಕಾಗಿ ಕೆರೆ ಮದ್ಯೆ ವಿಶೇಷ ವೇದಿಕೆ ನಿರ್ಮಿಸಿದ್ದು
ಅಲ್ಲಿ ಕೂಡ ಬಣ್ಣದ ಚಿತ್ತಾರ ಬಿಡಿಸಲಾಗಿದೆ.