ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆ – 3 ರ ಮೌಲ್ಯ ಮಾಪನ ಕೇಂದ್ರಕ್ಕೆ ಜಿ.ಪಂ. ಸಿಇಓ ಅನಿರೀಕ್ಷಿತ ಭೇಟಿ

ಮಂಡ್ಯ: ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಇಂದು ನಾಗಮಂಗಲ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಗೆ ಭೇಟಿ ನೀಡಿ ಎಸ್.ಎಸ್.ಎಲ್.ಸಿ. ಪೂರ್ವ ಸಿದ್ದತಾ ಪರೀಕ್ಷೆ – 3 ರ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಕುರಿತು ಶಿಕ್ಷಕರಿಂದ ಮಾಹಿತಿ ಪಡೆದರು.
ಜಿಲ್ಲೆಯದ್ಯಾಂತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪೂರ್ವ ಸಿದ್ದತಾ ಪರೀಕ್ಷೆ – 3 ಅನ್ನು ಏರ್ಪಡಿಸಲಾಗಿದ್ದು, ಸದರಿ ಪರೀಕ್ಷಾ ಮೇಲ್ವಿಚಾರಣೆಗೆ ಜಾಗೃತ ದಳ ರಚಿಸಲಾಗಿದೆ ಹಾಗೂ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ನಡೆಸಲು ಅಂತರ್ ತಾಲ್ಲೂಕು ತಂಡ ರಚಿಸಲಾಗಿದ್ದು, ಸದರಿ ತಂಡಕ್ಕೆ ಮೌಲ್ಯ ಮಾಪನ ಕೇಂದ್ರವನ್ನು ನಿಗದಿಪಡಿಸಲಾಗಿರುತ್ತದೆ.
ದಿನಾಂಕ 23.02.2026 ರಿಂದ 28.02.2026 ರವರೆಗೆ SSLC ಪೂರ್ವ ಸಿದ್ಧತಾ ಪರೀಕ್ಷೆ - 3 ನ್ನು ಮಾರ್ಗಸೂಚಿ/SOP ಗಳನ್ನು ಪಾಲಿಸಿ ಪರೀಕ್ಷಾ ಪಾವಿತ್ರತೆ ಮತ್ತು ಗೌಪ್ಯತೆಯನ್ನು ಉಳಿಸಿಕೊಂಡು ಶಾಲಾ ಹಂತದಲ್ಲಿ ನಡೆಸುವಂತೆ ಸೂಚಿಸಲಾಗಿತ್ತು ಎಂದು ತಿಳಿಸಿದರು.

• ಪೂರ್ವ ಸಿದ್ಧತಾ ಪರೀಕ್ಷೆ – 3 ಕ್ಕೆ ಆರ್.ಡಿ.ಪಿ.ಆರ್., ಸಮಾಜ ಕಲ್ಯಾಣ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ರೇಷ್ಮೆ ಮತ್ತು ಪಶು ಸಂಗೋಪನಾ ಇಲಾಖೆಗಳ ಅಧಿಕಾರಿಗಳನ್ನು ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.
• ಉತ್ತರಪತ್ರಿಕೆಗಳನ್ನು ಯಾವ ತಾಲ್ಲೂಕಿನ ಮೌಲ್ಯಮಾಪನ ಕೇಂದ್ರಕ್ಕೆ ಕಳುಹಿಸಬೇಕು ಎಂಬ ಮಾಹಿತಿಯನ್ನು ಆ ದಿನ ಬೆಳಗ್ಗೆ ನೀಡಲಾಗುತ್ತಿದೆ. ಉತ್ತರ ಪತ್ರಿಕೆಗಳನ್ನು ಮರುದಿನವೇ ಮೌಲ್ಯಮಾಪನ ಮಾಡಿ ಆ ದಿನವೇ ಸಂಬಂಧಪಟ್ಟ ತಾಲ್ಲೂಕಿಗೆ ಹಿಂದಿರುಗಿಸಲು ಸೂಚಿಸಲಾಗಿದೆ.
• ಸಿಸಿ ಕ್ಯಾಮೆರಾ ವ್ಯವಸ್ಥೆ ಇರುವ ಶಾಲೆಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ನಡೆಸಲು ಸೂಚಿಸಲಾಗಿದ್ದು, ಪ್ರತಿ ಕೊಠಡಿಗೆ 24 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿದೆ. ಪ್ರಶ್ನೆಪತ್ರಿಕೆಯನ್ನು ಸೀಲ್ ಮಾಡಿರುವ ಕವರ್ ನಲ್ಲಿಟ್ಟು ಕೊಠಡಿಗಳಿಗೆ ನೀಡಲಾಗುತ್ತಿದೆ.
• ಮೌಲ್ಯಮಾಪನ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಕನಿಷ್ಠ 8 ರಿಂದ 10 ಶಾಲೆಗಳಿಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಿ, ಮೇಲ್ವಿಚಾರಣೆ ಮಾಡಲಾಗುತ್ತಿದೆ. ಮೌಲ್ಯಮಾಪನ ಕಾರ್ಯವನ್ನು ಕಡ್ಡಾಯವಾಗಿ ಬೆಳಿಗ್ಗೆ 8.30 ಗಂಟೆಯಿಂದ ಸಾಯಂಕಾಲ 5.30 ಗಂಟೆಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
• ಪ್ರತಿ ದಿನ ಪರೀಕ್ಷೆ ಮುಗಿದ ನಂತರ ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ವಿಷಯವಾರು 40 ರಂತೆ ಪ್ರತ್ಯೇಕ ಪ್ಯಾಕೆಟ್ ಮಾಡಿ, ಪ್ರತಿ ಪ್ಯಾಕೆಟ್ ಅನ್ನು ಸೀಲ್ ಮಾಡಿದ ನಂತರ ತಾಲ್ಲೂಕು ಹಂತದ ನೋಡಲ್ ಅಧಿಕಾರಿಗಳು ಉತ್ತರ ಪತ್ರಿಕೆಗಳ ಪ್ಯಾಕೆಟ್ ಗಳನ್ನು ಸಂಗ್ರಹಿಸಿ, ಆ ದಿನವೇ ನಿಗದಿಪಡಿಸಿದ ತಾಲ್ಲೂಕಿಗೆ ತಲುಪಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
• ಪ್ರತಿ ಪರೀಕ್ಷಾ ವಿಷಯದ Key-Answer ಗಳನ್ನು ಜಿಲ್ಲಾ ಹಂತದಿಂದ ತಾಲುಕುಗಳಿಗೆ ನೀಡಲಾಗುತ್ತಿದ್ದು, ಮೌಲ್ಯಮಾಪನಗೊಂಡ ಉತ್ತರಪತ್ರಿಕೆಗಳನ್ನು ಆಯಾ ಶಾಲೆಗಳಿಗೆ ವಿತರಿಸಿ, ಮಂಡಳಿಯ ವೆಬ್ ಸೈಟ್ ನಲ್ಲಿ ಅಂಕಗಳನ್ನು ನಿಗದಿತ ದಿನಾಂಕದೊಳಗೆ ಇಂದೀಕರಿಸಲು ಸೂಚಿಸಲಾಗಿದೆ ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ತಿಳಿಸಿದರು.
• 2025-26 ನೇ ಸಾಲಿನಲ್ಲಿ ಜಿಲ್ಲೆಯ 476 ಶಾಲೆಗಳಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಒಟ್ಟು 19479 ವಿದ್ಯಾರ್ಥಿಗಳು ನೋಂದಣಿಯಾಗಿರುತ್ತಾರೆ.

ವರದಿ ರಮೇಶ್ ಮಂಡ್ಯ

