ನವರಾತ್ರಿ ಹಬ್ಬ(Navaratri)ಆರಂಭವಾಗಿದೆ. ಪ್ರತಿ ಮನೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ.ಇಂದು ನವರಾತ್ರಿಯ ಎರಡನೇ ದಿನ. ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸಿದರೆ, ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಗೆ ಮೀಸಲಾಗಿದೆ.
ಸಾತ್ವಿಕ ಮತ್ತು ಸುಂದರ ರೂಪ ಹೊಂದಿರುವ ತಾಯಿ, ಬ್ರಹ್ಮಚಾರಿಣಿ(Brahmacharini Devi) ಪೂರ್ಣ ಜ್ಯೋತಿರ್ಮಯ ಸ್ವರೂಪಿಯಾಗಿದ್ದು, ಬಲಗೈಯಲ್ಲಿ ಜಪಮಾಲೆ ಹಿಡಿದಿರುತ್ತಾಳೆ. ಬ್ರಹ್ಮಚಾರಿಣಿ ಎಂಬ ಪದದ ಅರ್ಥ ಅವಿವಾಹಿತೆ. ಹಾಗೆಯೇ ಈ ದೇವಿ, ಭಕ್ತರ ಬದುಕಿನಲ್ಲಿ ಶಾಂತಿಯನ್ನು ಸ್ಥಾಪನೆ ಮಾಡುತ್ತಾಳೆ ಎಂಬ ನಂಬಿಕೆ ಇದೆ.
ಹಾಗೆಯೇ ಒಂಬತ್ತು ದಿನಗಳಲ್ಲಿ ಒಂದೊಂದು ದಿನ ಪೂಜೆ ಮಾಡುವ ವಿಧಾನ ವಿಭಿನ್ನವಾಗಿರುತ್ತದೆ. ತಾಯಿಗೆ ನೈವೇದ್ಯ ಸಮರ್ಪಣೆ ಮಾಡುವುದರಿಂದ ಹಿಡಿದು ಎಲ್ಲವೂ ವಿಶೆಷ. ಹಾಗಾದ್ರೆ ಬ್ರಹ್ಮಚಾರಿಣಿ ದೇವಿಯ ಪೂಜೆಯ ಮಹತ್ವ ಹಾಗೂ ಮಾಡುವ ವಿಧಾನ ಏನು ಎಂಬುದು ಇಲ್ಲಿದೆ.