ರಾಜಕೀಯ

ಉಮೇಶ್ ಕತ್ತಿ ನೇತೃತ್ವದಲ್ಲಿ ಗೌಪ್ಯಸಭೆ?

ಬೆಳಗಾವಿಯ ಶಿವಬಸವ ನಗರದ ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ನಡೆದ ಸಭೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ,  ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಸಂಸದ ಅಣ್ಣಾಸಾಹೇಬ್ ಜೋಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಮಹಾಂತೇಶ್ ದೊಡ್ಡಗೌಡರ, ಪಿ.ರಾಜೀವ್, ಮಾಜಿ ಎಂಎಲ್ಸಿ ಮಹಾಂತೇಶ್ ಕವಟಗಿಮಠ ಭಾಗವಹಿಸಿದ್ದರು.

ಜಾರಕಿಹೊಳಿ ಬ್ರದರ್ಸ್ ಸೈಡ್ ಲೈನ್ ಮಾಡಲು ಪ್ಲಾನ್ ನಡೆದಿದೆಯಾ?

ಉಮೇಶ್ ಕತ್ತಿ ನೇತೃತ್ವದಲ್ಲಿ ಬಿಜೆಪಿ ಶಾಸಕರು ಸುಮಾರು ಮೂರು ಗಂಟೆಗೆ ಕಾಲ ಸುಧೀರ್ಘ ಚರ್ಚೆ ನಡೆಸಿದ್ದಾರೆ. ಇನ್ನೂ ಜಾರಕಿಹೊಳಿ‌ ಬ್ರದರ್ಸ್ ಅವರನ್ನ ಸಭೆಯಿಂದ ಹೊರಗಿಟ್ಟು ಚರ್ಚೆ ನಡೆಸಿದ್ದಾರೆ. ಜಾರಕಿಹೊಳಿ‌ ಬ್ರದರ್ಸ್ ಸೈಡಲೈನ್ ಮಾಡಲು ರಣತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.
ಸಭೆಯಲ್ಲಿ ಏನೆಲ್ಲ ಚರ್ಚೆ?

ರಾಜ್ಯದಲ್ಲಿ ಸಂಪುಟ ರಚನೆ ಬಗ್ಗೆ ಚರ್ಚೆಯಲ್ಲಿ ಬೆಳಗಾವಿ ದಕ್ಷಿಣದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಪಿ.ರಾಜೀವ್ ಗೆ ಮಂತ್ರಿಗಿರಿ ಕೊಡಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಾಲಾಗುತ್ತಿದೆ.  ಇತ್ತ ಶಾಸಕ ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ ಗೆ ನಿಗಮ ಕೊಡಿಸುವ ಬಗ್ಗೆ ಚರ್ಚೆಯು ಆಗಿದೆ ಎಂದು ಹೇಳಲಾಗಿದೆ.

ಇದರೊಂದಿಗೆ ಬೆಳಗಾವಿ ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ ಜವಾಬ್ದಾರಿ ಅಭಯ್ ಪಾಟೀಲ್ ಹೆಗಲಿಗೆ ವಹಿಸಲಾಗಿದೆ. ಉಮೇಶ್ ಕತ್ತಿ ಮನೆಯಲ್ಲಿ ಯಾವುದೇ ಗೌಪ್ಯಸಭೆ ಆಗಿಲ್ಲ. ಯಾವುದೇ ಸಚಿವ ಸ್ಥಾನದ ಬಗ್ಗೆಯೂ ಚರ್ಚೆ ಆಗಿಲ್ಲ.. ಸಭೆಯಲ್ಲಿ ಬಜೆಟ್ ಬಗ್ಗೆ ಜಿಲ್ಲೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆದಿದೆ..ಸಭೆಯಲ್ಲಿ ಜಿಲ್ಲೆ ಎಲ್ಲಾ ನಾಯಕರು ಇದ್ದರೂ ಅಂತಾ ಹೇಳುವ ಮೂಲಕ ಶಾಸಕ ಅಭಯ್ ಪಾಟೀಲ್ ಸಭೆ ರಹಸ್ಯವನ್ನ ಬಿಚ್ಚಿಡಲಿಲ್ಲ.

ಬಿಜೆಪಿ ಶಾಸಕರಾದ ಅಭಯ್ ಪಾಟೀಲ್ ಮತ್ತು ಅನಿಲ್ ಬೆನಕೆ ಸಭೆಯ ಗುಟ್ಟು ರಟ್ಟು ಮಾಡದಿದ್ದರು ಅವರ ಪ್ರತಿಕ್ರಿಯೆ ಮಾತ್ರ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಎಲ್ಲವೂ ಸರಿಯಲ್ಲ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇತ್ತ ಅಭಯ ಪಾಟೀಲ್ ಬಹಿರಂಗವಾಗಿಯೇ ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಆಭಯ್ ಪಾಟೀಲ್ ಬಹಿರಂಗ ಅಸಮಾಧಾನ!

2006ರಿಂದ ಹೀಗೆ ನಡೆದುಕೊಂಡು ಬಂದಿದೆ. ನಾನು ಅಂತೂ ಸಚಿವ ಸ್ಥಾನ ಕೇಳಿಲ್ಲ. ಮಂತ್ರಿ ಮಂಡಲ ವಿಸ್ತರಣೆ ಆಗಬೇಕಂದ್ರೆ ಈಗ ಆಗಬೇಕು ಅವರು ಯಾರನ್ನೇ ಮಾಡಲಿ. ಆದ್ರ ಇನ್ನ ಮೂರು ತಿಂಗಳು ನಾಲ್ಕು ತಿಂಗಳು ಅಂತಾ ಅಂದ್ರೆ ಅದರ ಅವಶ್ಯಕತೆ ಇಲ್ಲ. ಏಕಂದ್ರೆ ಯಾರ ಮಂತ್ರಿ ಆದರೂ ಪರ್ಫಾರ್ಮನ್ಸ್ ತೋರಿಸಲು ಮಂತ್ರಿ ಆಗಬೇಕು.

ಮಾಜಿ ಮಂತ್ರಿ ಅಂತಾ ಬೋರ್ಡ್ ಹಾಕಿಕೊಳ್ಳೋ ಅವಶ್ಯಕತೆ ಏನಿಲ್ಲ. ನನಗಂತೂ ಆ ಅವಶ್ಯಕತೆ ಇಲ್ಲ. ಸಚಿವರಾಗಿ ಪರ್ಫಾರ್ಮೆನ್ಸ್ ತೋರಿಸೋ ಕೆಲಸ ಆಗಬೇಕು. ಪರ್ಫಾರ್ಮೆನ್ಸ್ ತೋರಿಸಲು ಸಮಯ ಬೇಕಾಗುತ್ತದೆ. ಈಗ ಇರುವ ಸಮಯವೂ ಸಾಲಲ್ಲ, ಒಬ್ಬ ಮಂತ್ರಿಗೆ ಸಾಮರ್ಥ್ಯ ತೋರಿಸಲು ಎರಡು ವರ್ಷ ಬೇಕಾಗುತ್ತೆ. ಆದರೆ ಮಂತ್ರಿ ಮಂಡಲ ವಿಸ್ತರಣೆ ಮಾಡೋದಾದ್ರೆ ಬೇಗ ಮಾಡಲಿ ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ?

ಸಚಿವ ಉಮೇಶ್ ಕತ್ತಿ ಮನೆಯಲ್ಲಿ ನಡೆದ ಗೌಪ್ಯಸಭೆ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಜಾರಕಿಹೊಳಿ‌ ಬ್ರದರ್ಸ್ ಸೈಡಲೈನ್ ಮಾಡಿ ಮತ್ತೆ ಬೆಳಗಾವಿ ಜಿಲ್ಲಾ ರಾಜಕಾರಣವನ್ನ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಉಮೇಶ್ ಕತ್ತಿ ನೇತೃತ್ವದಲ್ಲಿ ಟೀಮ್ ರಣತಂತ್ರ ರೂಪಿಸುತ್ತದೆ.. ಇದು ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಬಹಿರಂಗವಾಗಿ ಸ್ಫೋಟವಾದ್ರು ಅಚ್ಚರಿ ಪಡಬೇಕಿಲ್ಲ.

Related Articles

Leave a Reply

Your email address will not be published. Required fields are marked *

Back to top button