ಬಾಂಗ್ಲಾದೇಶ ತಂಡ ಟಿ20 (T20 Cricket) ಮಾದರಿ ಕ್ರಿಕೆಟ್ನಲ್ಲಿ ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿತ್ತು, ಬಲಿಷ್ಠ ತವರಿನಲ್ಲಿ ನಡೆದ ಸರಣಿಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ (Australia) ಮತ್ತು ನ್ಯೂಜಿಲೆಂಡ್ (NewZealand) ತಂಡಗಳ ವಿರುದ್ಧ ಗೆಲುವು ದಾಖಲಿಸಿತ್ತು. ಹೀಗಾಗಿ ಐಸಿಸಿ ರ್ಯಾಂಕಿಂಗ್ (ICC Ranking) ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಏರುವ ಮೂಲಕ ವಿಶ್ವಕಪ್ ಟಿ20 (World Cup T20) ಟೂರ್ನಿಯ ಗ್ರೂಪ್ ಬಿ ಹಂತಕ್ಕೆ ಪ್ರವೇಶ ಪಡೆದಿತ್ತು.
ಆದರೆ, ಬಲಿಷ್ಠ ಬಾಂಗ್ಲಾದೇಶ (Bangladesh) ಭಾನುವಾರ ಸ್ಕಾಟ್ಲೆಂಡ್ (Scotland) ವಿರುದ್ಧ ಅನಿರೀಕ್ಷಿತ ಮತ್ತು ಹೀನಾಯ ಸೋಲನುಭವಿಸುವ ಮೂಲಕ ಇಂದಿನ ಓಮನ್ (Oman) ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಒಳಗಾಗಿದೆ. ಒಂದು ವೇಳೆ ಇಂದು ಅಲ್ ಮೆರತ್ನಲ್ಲಿ ಓಮನ್ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಂಗ್ಲಾದೇಶ ಸೋಲನುಭವಿಸಿದರೆ, ಟೂರ್ನಿಯಿಂದಲೇ ಹೊರ ನಡೆಯಬೇಕಾದ ಅನಿವಾರ್ಯತೆ ಎದುರಾಗಲಿದೆ.
ಒತ್ತಡದಲ್ಲಿ ಬಾಂಗ್ಲಾದೇಶ:
ಸ್ಕಾಟ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಗೆಲ್ಲುವ ಫೇವರಿಟ್ ತಂಡವಾಗಿತ್ತು. ಈ ಪಂದ್ಯದಲ್ಲಿ ಬಾಂಗ್ಲಾ ಸುಲಭ ಗೆಲುವು ದಾಖಲಿಸಲಿದೆ ಎಂದು ಅಂದಾಜಿಸಲಾಗಿತ್ತು. ಇದಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ್ದ ಬಾಂಗ್ಲಾ ಬೌಲರ್ಗಳು ಸ್ಕಾಟ್ಲೆಂಡ್ ತಂಡವನ್ನು ಕೇವಲ 53 ಕ್ಕೆ 6 ಕ್ಕೆ ನಿಯಂತ್ರಿಸಿದ್ದರು. ಆದರೆ, ಕೊನೆಯ ಓವರ್ಗಳಲ್ಲಿ ಕ್ರಿಸ್ ಗ್ರೇವ್ಸ್ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸ್ಕಾಟ್ಲೆಂಡ್ 140 ರನ್ಗಳ ಸವಾಲಿನ ಮೊತ್ತು ಪೇರಿಸಿತ್ತು.