ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಕ್ಕಸರ ಅಟ್ಟಹಾಸ ಮಿತಿಮೀರಿದೆ. ದಿನದಿಂದ ದಿನಕ್ಕೆ ತಾಲಿಬಾನಿಗಳ ಕ್ರೌರ್ಯ ಹೆಚ್ಚಾಗುತ್ತಿದೆ. ಜೀವ ಕೈಯಲ್ಲಿ ಹಿಡಿದು ಅಲ್ಲಿನ ಜನ ಬದುಕುವ ಪರಸ್ಥತಿ ಎದುರಾಗಿದೆ. ಪ್ರಶ್ನೆ ಮಾಡಲು ಧೈರ್ಯವಿಲ್ಲದೇ, ಅವರು ಹೇಳಿದಂತೆ ಕೇಳಿಕೊಂಡು ಇಲ್ಲಿನ ಜನ ಜೀವನ ನಡೆಸುತ್ತಿದ್ದಾರೆ. ಹದಗಟ್ಟ ಭದ್ರತಾ ಪರಿಸ್ಥಿತಿ ಮುಂದುವರೆದಿದೆ. ಹೇಳುವವರು, ಕೇಳುವವರು ಇಲ್ಲದೇ ತಾವು ಮಾಡಿದ್ದೇ ರೂಲ್ಸ್ ಎಂಬಂತೆ ತಾಲಿಬಾನಿಗಳು ಮೆರೆಯುತ್ತಿದ್ದಾರೆ.
ಮೊನೆಯಷ್ಟೇ ತಾಲಿಬಾನ್ ಹಂಗಾಮಿ ಸಚಿವ ಹಕ್ಕಾನಿ ಸೂಸೈಡ್ ಬಾಂಬರ್ಗಳನ್ನು ರಿಯಲ್ ಹೀರೋಗಳು ಎಂದು ಕರೆದಿದ್ದು, ಎಲ್ಲೆಡೆ ಸಖತ್ ವೈರಲ್ ಆಗಿತ್ತು. ಪ್ರತಿದಿನ ಒಂದಲ್ಲ ಒಂದೂ ತಾಲಿಬಾನಿಗಳ ಕೃತ್ಯ ಬೆಳಕಿಗೆ ಬರುತ್ತಲ್ಲೇ ಇದೆ. ಇದೀಗ ಆಫ್ಘನ್ ಸಿಖ್ಖರಿಗೆ ತಾಲಿಬಾನ್ ವಾರ್ನಿಂಗ್ ನೀಡಿದೆ. ಅಫ್ಘಾನಿಸ್ತಾನ ತಾಲಿಬಾನ್ ಕೈ ವಶ ವಾಗುವ ಮುಂಚೆಯಿಂದಲೂ ಇಲ್ಲಿ ಸಿಖ್ ಸಮುದಾಯ ಶೋಚನೀಯ ಪರಿಸ್ಥಿತಿಯಲ್ಲಿತ್ತು. ಇದೀಗ ತಾಲಿಬಾನಿಗಳ ಕಣ್ಣು ಸಿಖ್ ಸಮುದಾಯದ ಮೇಲೆ ಬಿದ್ದಿದೆ.
`ಇಸ್ಲಾಂಗೆ ಮತಾಂತರವಾಗಿ, ಇಲ್ಲ ದೇಶ ಬಿಟ್ಟು ಹೋಗಿ’
ಸಿಖ್ ಸಮುದಾಯ, ಸುನ್ನಿ ಇಸ್ಲಾಂಗೆ ಮತಾಂತರವಾಗಬೇಕು, ಇಲ್ಲವಾದರೆ ದೇಶ ಬಿಟ್ಟು ಹೋಗಬೇಕು ಎಂದು ತಾಲಿಬಾನಿಗಳು ತಾಕೀತು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸಿಖ್ ಸಮುದಾಯದ ಜನರು ಆಶ್ರಯ ಪಡೆದುಕೊಂಡಿದ್ದರು. ಆದರೆ ಇಲ್ಲಿನ ವ್ಯವಸ್ಥಿತ ತಾರತ್ಯಮ ಮತ್ತು ಅತಿರೇಕದ ಧಾರ್ಮಿಕ ಹಿಂಸಾಚಾರಗಳ ಉಲ್ಬಣದಿಂದ ಹಾಳಾಗಿದೆ ಎಂದು ಹಕ್ಕುಗಳ ಮತ್ತು ಭದ್ರತೆಯ ಅಂತಾರಾಷ್ಟ್ರೀಯ ಒಕ್ಕೂಟ ಹೇಳಿದೆ.