Fake Banking Apps: ಡಿಜಿಟಲ್ ಯುಗದಲ್ಲಿ ಜನರು ಮನೆಯಲ್ಲಿಯೇ ಕುಳಿತುಕೊಂಡು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಬಳಸಿಕೊಂಡು ಬ್ಯಾಂಕುಗಳಿಗೆ ಸಂಬಂಧಿಸಿದ ಹೆಚ್ಚಿನ ಕೆಲಸವನ್ನು ನಿರ್ವಹಿಸುತ್ತಾರೆ. ಇದು ಬ್ಯಾಂಕಿಗೆ ಹೋಗುವ ಸಮಯವನ್ನು ಉಳಿಸುತ್ತದೆ ಮತ್ತು ಎಲ್ಲಾ ಕೆಲಸಗಳು ಬೇಗನೆ ಮುಗಿಯುತ್ತವೆ.
ಆದರೆ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯಗಳು ಹೆಚ್ಚಾದಾಗಿನಿಂದ, ಸೈಬರ್ ಅಪರಾಧ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅನೇಕ ಜನರಿಗೆ ಸೈಬರ್ ಅಪರಾಧದ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ ಮತ್ತು ಸೈಬರ್ ಅಪರಾಧಿಗಳು ಜನರನ್ನು ಹೇಗೆ ಆನ್ಲೈನ್ ಬ್ಯಾಂಕ್ ವಂಚನೆಗೆ ಬಲಿಪಶುವನ್ನಾಗಿ ಮಾಡುತ್ತಾರೆ ಎಂಬ ಬಗ್ಗೆ ಗೊತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ, ನಕಲಿ ಬ್ಯಾಂಕಿಂಗ್ ಆ್ಯಪ್‌ಗಳು ಕೂಡ ವಂಚನೆಯ ವಿಧಾನವಾಗಿ ಮಾರ್ಪಟ್ಟಿವೆ. ನಕಲಿ ಆ್ಯಪ್‌ಗಳನ್ನು ಗೊತ್ತಿಲ್ಲದೆ ಬಳಸುವ ಜನರು ಕೂಡ ಅವುಗಳನ್ನು ಗುರುತಿಸಲು ಸಾಧ್ಯವಾಗದೇ ಇರುವುದು ಸಂಕಷ್ಟಕ್ಕೆ ಮತ್ತೊಂದು ದಾರಿಯಾಗಿದೆ.