ಇನ್ಮುಂದೆ ‘ದ್ವಿತೀಯ PUC ಅಂಕಪಟ್ಟಿ’ ಕಳೆದು ಹೋದ್ರೆ, ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಿ ಪಡೆಯಲು ಅವಕಾಶ
ಬೆಂಗಳೂರು : ಇದುವರೆಗೆ ದ್ವಿತೀಯ ಪಿಯುಸಿ ಅಂಕಪಟ್ಟಿ ( Karnataka Second PU Marks Card ) ನಕಲು ಪಡೆಯೋದಕ್ಕೆ ಭೌತಿಕವಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಇಂತಹ ಪ್ರಕ್ರಿಯೆಗೆ ಪಿಯು ಮಂಡಳಿ ( PU Board ) ತಿಲಾಂಜಲಿ ನೀಡಿದ್ದು, ಇನ್ಮುಂದೆ ಆನ್ ಲೈನ್ ಮೂಲಕವೇ ದ್ವಿತೀಯ, ತೃತೀಯ ಅಂಕಪಟ್ಟಿ ಪಡೆಯಲು ಅರ್ಜಿ ಸಲ್ಲಿಸೋದಕ್ಕೆ ಆರಂಭಿಸಿದೆ.
ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿಯನ್ನು ಕಳೆದುಕೊಂಡಲ್ಲಿ ಅಂತಹ ವಿದ್ಯಾರ್ಥಿಗಳು ದ್ವಿತೀಯ, ತೃತೀಯ ಅಂಕಪಟ್ಟಿ, ಪ್ರಮಾಣ ಪತ್ರ ಪಡೆಯಲು ಪ್ರಸ್ತುತ ಅರ್ಜಿಯನ್ನು ಭೌತಿಕವಾಗಿ ಸ್ವೀಕರಿಸಿ, ಇತ್ಯರ್ಥಪಡಿಸಲಾಗುತ್ತಿದೆ.
ಸದರಿ ಸೇವೆಯನ್ನು ದಿನಾಂಕ 22-09-2021ರಿಂದ ಆನ್ ಲೈನ್ ಮುಖಾಂತರ ನಿರ್ವಹಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಈ ಬಗ್ಗೆ ವಿವರಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಾಲತಾಣ http://www.pue.kar.nic.in ನಲ್ಲಿ ನೋಡಬಹುದಾಗಿ ಎಂದು ತಿಳಿಸಿದೆ.