ನವರಾತ್ರಿಯ (Navaratri)ಎಂಟನೇ ದಿನದಂದು ಮಹಾಗೌರಿಗೆ(Maha Gowri) ವಿಶೇಷ ಪೂಜೆ ಮಾಡಲಾಗುತ್ತದೆ. ತಾಯಿ ಎತ್ತಿನ ಮೇಲೆ ಕುಳಿತಿರುತ್ತಾಳೆ. ಆಕೆಗೆ ನಾಲ್ಕು ಕೈಗಳು. ಒಂದು ಕೈಯಲ್ಲಿ ಢಮರು ಹಾಗೂ ಇನ್ನೊಂದು ಕೈಯಲ್ಲಿ ತ್ರಿಶೂಲ ಇರುತ್ತದೆ. ಶ್ವೇತ ವಸ್ತ್ರಧಾರಿಣಿಯಾಗಿರುವ ಗೌರಿ ದೇವಿಯ ಮುಖವು ಶಾಂತ ಸ್ವಭಾವವಾಗಿರುತ್ತದೆ.
ಪುರಾಣಕಥೆ:
ಪಾರ್ವತಿ ದೇವಿಯು ಮನುಷ್ಯರ ಅವತಾರ ಎತ್ತಿ ಭೂಮಿಯಲ್ಲಿ ಜನಿಸಿದಳು ಎಂಬ ನಂಬಿಕೆ ಇದೆ. ಶಿವನ್ನು ಪಡೆಯುವುದು ಆ ಜನ್ಮದಲ್ಲಿ ಅವಳ ಗುರಿಯಾಗಿರುತ್ತದೆ. ನಾರದ ಮಹರ್ಷಿಗಳ ಸಲಹೆಯ ಮೇರೆಗೆ ಸುದೀರ್ಘ ತಪಸ್ಸನ್ನು ಮಾಡಿದ ತಾಯಿ, ಅನ್ನಾಹಾರ, ನೀರು ತ್ಯಜಿಸಿದಳು. ಪಾರ್ವತಿಯ ಭಕ್ತಿಗೆ ಮೆಚ್ಚು ಪ್ರತ್ಯಕ್ಷನಾದ ಶಿವನು, ತಾಯಿಯನ್ನು ವರಿಸಿದನು ಎಂದು ಪುರಾಣದ ಕತೆ ಹೇಳುತ್ತದೆ.
ತಾಯಿಗೌರಿಆರಾಧಿಸುವಮಂತ್ರಗಳು:
ಓಂ ದೇವಿ ಮಹಾಗೌರಿಯೇ ನಮಃ
ಓ ದೇವಿ ಮಹಾಗೌರಿಯೇ ನಮಃ
ಶ್ವೇತ ವೃಷೆಸಮೃದ್ಧ ಶ್ವೇವೇತಾಂಬರ್ಧಾರ ಶುಚೇಹ ಮಹಾಗೌರಿ
ಶುಭಂ ದಾದ್ಯನ್ಮಹದೇವ ಪ್ರಮೋದಃ
ಶ್ವೇತ ವೃಷೆಸಮೃದ್ಧ ರ್ಶವೇತಾಂಬರ್ಧಾರ ಶುಚೇಹ ಮಹಾಗೌರಿ
ಶುಭಂ ದಾದ್ಯನ್ಮಹದೇವ ಪ್ರಮೋದಃ