Chukdu Scooter: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಗೋಮಾದ ಜನರು ಇಂಜಿನ್ ಇಲ್ಲದೆ ವೇಗವಾಗಿ ಚಲಿಸುವ ವಿಶೇಷ ರೀತಿಯ ಸ್ಕೂಟರ್ ಅನ್ನು ತಯಾರಿಸಿದ್ದಾರೆ. ಈ ಸ್ಕೂಟರ್ನ ಹೆಸರು ಚುಕ್ಡು ಸ್ಕೂಟರ್.
ಇಂಜಿನ್, ಇಂಧನ ಮತ್ತು ಪೆಡಲ್ ಸಹಾಯವಿಲ್ಲದೆ ಚಲಿಸುವ ಸ್ಕೂಟರ್ ನೀವು ನೋಡಿದ್ದೀರಾ? ಅದರಲ್ಲೂ ಗಂಟೆಗೆ 30 ಕಿಮೀ ವೇಗದಲ್ಲಿ ಚಲಿಸುತ್ತದೆ ಎಂದಾದರೆ ನೀವು ನಂಬುತ್ತೀರಾ? ಇಂತಹ ಪ್ರಶ್ನೆಯೊಂದನ್ನು ಕೇಳದರೆ ಹೆಚ್ಚಿನ ಜನರು ಅಂತಹ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ಬಂದಿದೆಯಾ? ಎಂದು ಒಮ್ಮೆ ಆಲೋಚಿಸುವುದುದುಂಟು. ಆದರೆ ಇದಕ್ಕೆ ಉತ್ತರವೆಂಬಂತೆ ದೇಶವೊಂದರ ಜನಪ್ರಿಯ ಸ್ಕೂಟರ್ ವೊಂದು. ಇಂಜಿನ್, ಪೆಡಲ್ ಮತ್ತು ಇಂಧನ ಬಳಸದೆ ಕ್ರಮಿಸುತ್ತದೆ.. ಹಾಗಿದ್ರೆ ಆ ಸ್ಕೂಟರ್ ಯಾವುದು ಈ ಸ್ಟೋರಿ ಓದಿ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಗೋಮಾದ ಜನರು ಇಂಜಿನ್ ಇಲ್ಲದೆ ವೇಗವಾಗಿ ಚಲಿಸುವ ವಿಶೇಷ ರೀತಿಯ ಸ್ಕೂಟರ್ ಅನ್ನು ತಯಾರಿಸಿದ್ದಾರೆ. ಈ ಸ್ಕೂಟರ್ನ ಹೆಸರು ಚುಕ್ಡು ಸ್ಕೂಟರ್. ಬಹಳ ಜನಪ್ರಿಯೆ ಪಡೆದಿರುವ ಸ್ಕೂಟರ್ ನೋಡಿದರೆ ಸಾಕು ಇಂತಹದೊಂದು ಸ್ಕೂಟರ್ ಇದೆಯಾ ಎಂದು ನೀವು ಅಂದುಕೊಳ್ಳುವುದುಂಟು. ಅದರಲ್ಲೂ ಅಷ್ಟೋಂದು ವೇಗವಾಗಿ ಹೇಗೆ ಕ್ರಮಿಸುತ್ತದೆ ಎಂದು ಯೋಚಿಸುವುದುಂಟು