Click to Pray App: ಹಸಿವಾದಾಗ ಆನ್ಲೈನ್ ಮೂಲಕ ನಿಮಗೆ ಬೇಕೆನಿಸಿದ ಆಹಾರ ಆರ್ಡರ್ ಮಾಡುತ್ತೀರಿ. ಹೊಸ ಬಟ್ಟೆ ಖರೀದಿಸಬೇಕೆನಿಸದಾಗಲೂ ಆನ್ಲೈನ್ ಸ್ಟೋರ್ಗೆ ತೆರಳಿ ಒಂದೇ ಕ್ಲಿಕ್ನಲ್ಲಿ ಖರೀದಿಸುತ್ತೀರಿ. ಅಷ್ಟೇ ಏಕೆ ಸಿನಿಮಾ ಟಿಕ್ ಕೂಡ ಆನ್ಲೈನ್ನಲ್ಲಿ ಖರೀದಿಸಿ ಥಿಯೇಟರ್ಗೆ ಹೋಗಿ ಸಿನಿಮಾ ನೋಡುತ್ತೀರಿ. ಅದರಂತೆ ಇದೀಗ ಪ್ರಾರ್ಥನೆ ಸಲ್ಲಿಸಬೇಕಾದರೂ ಆ್ಯಪ್ ಬಳಸಿ ಕ್ಲಿಕ್ ಮಾಡುವ ಆಯ್ಕೆಯನ್ನು ಪೋಪ್ ಫ್ರಾನ್ಸಿಸ್ (Pope Francis) ನೀಡಿದ್ದಾರೆ.
ಅದಕ್ಕಾಗಿಯೇ ‘‘ಕ್ಲಿಕ್ ಟು ಪ್ರೇ’’ ಆ್ಯಪ್ (Click to Pray) ಮರುಪ್ರಾರಂಭಿಸಲಾಗಿದ್ದು, ಕ್ಯಾಥೋಲಿಕ್ ನಿಷ್ಠಾವಂತರ ತಮ್ಮ ಪ್ರಾರ್ಥನೆಯನ್ನು ಪ್ರಪಂಚದೆಲ್ಲೆಡೆ ಹಬ್ಬಿಸಲು ಈ ವಿಧಾನವನ್ನು ಅನುಸರಿಸಿದೆ ಎಂದು ವ್ಯಾಟಿಕನ್ ಮಂಗಳವಾರದಂದು ಹೇಳಿದೆ.
2016ರಲ್ಲಿ ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಯಿತು. ಸದ್ಯ 2.5 ದಶಲಕ್ಷಕ್ಕೂ ಹೆಚ್ಚು ಜನರು ಡೌನ್ಲೋಡ್ ಮಾಡಿ ಬಳಸುತ್ತಿದ್ದಾರೆ. ಪೋಪ್ನಿಂದ ದೈನಂದಿನ ಪ್ರಾರ್ಥನೆ ಮತ್ತು ಸಂದೇಶವನ್ನು ಈ ಆ್ಯಪ್ ಮೂಲಕ ಕೇಳಬಹುದಾಗಿದೆ. ಮಾತ್ರವಲ್ಲದೆ, ಬಳಕೆದಾರರು ಇನ್ನಿತರರಿಗೆ ಪ್ರಾರ್ಥನೆ ಕಳುಹಿಸಲು ಆ್ಯಪ್ ಮೂಲಕ ಅವಕಾಶ ನೀಡಿದೆ.