ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ಗಳು ಅನುಮತಿಯಿಲ್ಲದೆ ಬಳಕೆದಾರರನ್ನು ಟ್ರ್ಯಾಕ್ ಮಾಡುತ್ತಿದೆ..!
ಆ್ಯಂಡ್ರಾಯ್ಡ್ ಸ್ಮಾರ್ಟ್ಫೋನ್ (Android SMartphone) ಬಳಕೆದಾರರ ಅನುಮತಿ ಪಡೆಯದೆ ಡೇಟಾ ಟ್ರಾಕ್ ಮಾಡುತ್ತಿದೆಯಂತೆ. ಕೆಲವು ಆ್ಯಂಡ್ರಾಯ್ಡ್ ಡಿವೈಸ್ ಅಥವಾ ಬ್ಲೋಟ್ ವೇರ್ನೊಂದಿಗೆ ಮೊದಲೇ ಇನ್ಸ್ಟಾಲ್ ಆಗಿರುವ ಸಿಸ್ಟಂ ಆ್ಯಪ್ಗಳನ್ನು ಹೊಂದಿರುವ ಸ್ಮಾರ್ಟ್ಫೋನ್ಗಳು ಈ ಕೆಲಸವನ್ನು ಗೊತ್ತಿಲ್ಲದೆ ಮಾಡುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಅಂದಹಾಗೆಯೇ ಬಳಕೆದಾರರ ಡೇಟಾವನ್ನು ಓಎಸ್ ನ ಡೆವಲಪರ್ (OS Devoloper) ಗಳು ಮತ್ತು ವಿವಿಧ ಥರ್ಡ್ ಪಾರ್ಟಿಗಳಿಗೆ (Third Party) ಕಳುಹಿಸುತ್ತದೆ. ಈ ಸಿಸ್ಟಂ ಆ್ಯಪ್ಗಳು ಕ್ಯಾಮೆರಾ (Camera) ಅಥವಾ ಮೆಸೇಜ್ (Messege) ಆ್ಯಪ್ನಂತಹ ಕೆಲವು ಕಾರ್ಯಗಳನ್ನು ಪೂರೈಸಬಲ್ಲವು ಆದರೆ ಬಳಕೆದಾರರು ಅವುಗಳನ್ನು ತೆರೆಯದಿದ್ದರೂ ಸಹ ತಮ್ಮ OS ಗೆ ಡೇಟಾವನ್ನು ಕಳುಹಿಸುತ್ತದೆ ಎಂದು ಸಂಶೋಧನೆಯ ಮೂಲಕ ಪತ್ತೆಹಚ್ಚಲಾಗಿದೆ
ಡಬ್ಲಿನ್ನ ಟ್ರಿನಿಟಿ ಕಾಲೇಜಿನ ಸಂಶೋಧಕರ ಪ್ರಕಾರ, ಈ ಸಿಸ್ಟಂ ಆ್ಯಪ್ಗಳು ಡೇಟಾ ಟ್ರ್ಯಾಕಿಂಗ್ನಿಂದ ಹೊರಗುಳಿಯಲು ಯಾವುದೇ ಮಾರ್ಗವಿಲ್ಲ, ಬಳಕೆದಾರರು ತಮ್ಮ ಸಾಧನಗಳನ್ನು ರೂಟ್ ಮಾಡಲು ನಿರ್ಧರಿಸದ ಹೊರತು ಈ ಆ್ಯಪ್ಗಳನ್ನು ಸಾಮಾನ್ಯವಾಗಿ ROMಗೆ ಕಳುಹಿಸಿಕೊಡುತ್ತದೆ ಎಂದಿದ್ದಾರೆ.