ಆ್ಯಂಡಿ ಮುರ್ರೆ ಸೋಲಿಸಿ ಚೊಚ್ಚಲ ವಿಶ್ವ ಚಾಂಪಿಯನ್ ಗೆದ್ದ ರುಬ್ಲೆವ್..
ಪುರುಷರ ಟೆನ್ನಿಸ್ ಲೋಕದ ದಿಗ್ಗಜ ಆ್ಯಂಡಿ ಮುರ್ರೆ ವಿರುದ್ಧ ದಿಗ್ವಿಜಯ ಸಾಸುವ ಮೂಲಕ ರಷ್ಯಾದ ಆ್ಯಂಡ್ರಿ ರುಬ್ಲೆ ಅವರು ಚೊಚ್ಚಲ ವಿಶ್ವ ಟೆನ್ನಿಸ್ ಚಾಂಪಿಯನ್ಶಿಪ್ ಗೆದ್ದು ಸಂಭ್ರಮಿಸಿದ್ದಾರೆ.
ವಿಶ್ವದ ನಂಬರ್ 1 ಆಟಗಾರ ಆ್ಯಂಡ್ರಿ ಮುರ್ರೆ ಅವರ ಸವಾಲನ್ನು ಅಬುದಾಬಿ ಎಕ್ಸಿಬಿಷನ್ ಇವೆಂಟ್ ಫೈನಲ್ನಲ್ಲಿ ಎದುರಿಸಿದರೂ ಕೂಡ ಯಾವುದೇ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕದ ವಿಶ್ವದ 5ನೆ ಶ್ರೇಯಾಂಕಿತ ರಷ್ಯಾದ ಆ್ಯಂಡ್ರಿ ರುಬ್ಲೆ ಅವರು 6-4, 7-6 ನೇರ ಸೆಟ್ಗಳ ಮೂಲಕ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜಯಾದ್ ಟೆನ್ನಿಸ್ ಅಂಗಳದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆ್ಯಂಡ್ರಿ ರುಬ್ಲೆ ಅವರು ಮುರ್ರೆ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ರಷ್ಯಾ ಬೆಂಬಲಿಗರು ಸಂಭ್ರಮಿಸಿದರು.
ಮೊದಲ ಸೆಟ್ನಲ್ಲಿ ವಿಶ್ವ ಶ್ರೇಯಾಂಕಿತ ನಂಬರ್ 1 ಆಟಗಾರ ಆ್ಯಂಡಿ ಮುರ್ರೆ ಮೊದಲ ಸುತ್ತಿನಲ್ಲಿ 6-4 ರಿಂದ ಹೀನಾಯ ಸೋಲು ಕಂಡರೂ ಕೂಡ 2ನೆ ಸುತ್ತಿನಲ್ಲಿ ತಮ್ಮ ಟೆನ್ನಿಸ್ ಲೋಕದ ಎಲ್ಲಾ ಅನುಭವಗಳನ್ನು ಬಳಸಿಕೊಂಡು ಉತ್ತಮ ಹೋರಾಟ ಪ್ರದರ್ಶಿಸಿದರಾದರೂ ಒಂದು ಹಂತದಲ್ಲಿ 5-5 ಅಂತರ ಕಾಯ್ದುಕೊಂಡ ಇಬ್ಬರು ಆಟಗಾರರು ಕೂಡ ಎರಡನೇ ಸೆಟ್ ಗೆಲ್ಲಲು ಭಾರೀ ಪೈಪೋಟಿ ನಡೆಸಿದರೂ ಕೂಡ ಅಂತಿಮವಾಗಿ ರಷ್ಯಾದ ಟೆನ್ನಿಸ್ ಆಟಗಾರ ಆ್ಯಂಡ್ರಿ ರುಬ್ಲೆ ಅವರು ಅಬುದಾಬಿ ಎಕ್ಸಿಬಿಷನ್ ಇವೆಂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.