ರಾಜಕೀಯಸುದ್ದಿ

ಇಂದು ರಾಹುಲ್ ಗಾಂಧಿ ಗೋವಾಕ್ಕೆ ಭೇಟಿ, ಚುನಾವಣಾ ಪ್ರಚಾರಕ್ಕೆ ಚಾಲನೆ..!

ನವದೆಹಲಿ, ‌ಅ. 30: ಮುಂದಿನ‌ ವರ್ಷದ ಮಾರ್ಚ್ (March) – ಏಪ್ರಿಲ್(April) ತಿಂಗಳಲ್ಲಿ ಉತ್ತರ ಪ್ರದೇಶ (Uttar Pradesh), ಪಂಜಾಬ್ (Punjab) ಮಣಿಪುರ (Manipur) ಉತ್ತರ ಖಂಡ (Uttarakhand) ಮತ್ತು ಗೋವಾ (Goa) ವಿಧಾನಸಭಾ ಚುನಾವಣೆ ನಡೆಯಲಿದೆ. 2024ರ ಲೋಕಸಭಾ‌ ಚುನಾವಣೆಯ (2024 Lok Sabha Election) ದೃಷ್ಟಿಯಿಂದ ಈ ಐದು ರಾಜ್ಯಗಳು ಬೇರೆಲ್ಲಾ ರಾಜಕೀಯ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷದ ಪಾಲಿಗೆ ಅತ್ಯಂತ ನಿರ್ಣಾಯಕಾವಾಗಿವೆ. ಏಕೆಂದರೆ ಈ ಚುನಾವಣೆಗಳಲ್ಲಿ ಸಾಧ್ಯವಾದಷ್ಟು ಕಡೆ ಗೆಲ್ಲಬೇಕಾಗಿದೆ. ಆ ಮೂಲಕ ಪಕ್ಷದ ನೆಲೆಯನ್ನು‌ ವೃದ್ಧಿ ಮಾಡಿಕೊಳ್ಳಬೇಕಿದೆ. ಈ‌ ಹಿನ್ನೆಲೆಯಲ್ಲಿ ಇಂದು ಎಐಸಿಸಿ ಮಾಜಿ ಅಧ್ಯಕ್ಷರೂ ಹಾಗೂ ಸಂಸದರೂ ಆದ ರಾಹುಲ್ ಗಾಂಧಿ (AICC Former President Rahul Gandhi) ಗೋವಾ ಪ್ರವಾಸ ಕೈಗೊಂಡಿದ್ದಾರೆ.

ಚುನಾವಣಾ ಪ್ರಚಾರಕ್ಕೆ ರಾಹುಲ್​ ಚಾಲನೆ

ಗೋವಾ ವಿಧಾನಸಭಾ ಚುನಾವಣೆ (Goa Assembly Elections) ದೃಷ್ಟಿಯಿಂದಲೇ ಭೇಟಿ ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಪ್ರವಾಸದ ವೇಳೆ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ (Election Campaign) ನೀಡಲಿದ್ದಾರೆ. ಅಲ್ಲದೆ ಸಮಾಜದ ವಿವಿಧ ವರ್ಗದ ಜನರ ಜೊತೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಬೆಳಿಗ್ಗೆ 10.30ಕ್ಕೆ ಕಡಲ ತೀರದ ರಾಜ್ಯದಲ್ಲಿ ತೀವ್ರ ಸಮಸ್ಯೆಯಲ್ಲಿರುವ ಮೀನುಗಾರರು (Fisherman)  ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.
ಮಧ್ಯಾಹ್ನ 12:30ಕ್ಕೆ ಪಂಜಿಮ್‌ನ ಆಜಾದ್ ಮೈದಾನದ (Azad Maidan, Panjim) ಹುತಾತ್ಮರ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಲಿದ್ದಾರೆ.

ಮಧ್ಯಾಹ್ನ 2:30ಕ್ಕೆ ಬಾಂಬೋಲಿಮ್ ಬೀಚ್ ರೆಸಾರ್ಟ್ ನಲ್ಲಿ ಗಣಿ ನಿಷೇಧ ಮಾಡಿರುವುದರಿಂದ ಸಂತ್ರಸ್ತರಾಗಿರುವವರ ಜೊತೆ ಸಂವಾದ ನಡೆಸಲಿದ್ದಾರೆ. 3:15ಕ್ಕೆ ಜಾಗೊರ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ‌.ರಾಹುಲ್ ಗಾಂಧಿ ಅವರು ಗೋವಾಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಗೋವಾ ಕಾಂಗ್ರೆಸ್ ಉಸ್ತುವಾರಿಯಾದ ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಗೋವಾ ಚುನಾವಣಾ ಉಸ್ತುವಾರಿ ಪಿ. ಚಿದಂಬರಂ (P. Chidambaram) ಮತ್ತು ಗೋವಾ ಕಾಂಗ್ರೆಸ್ ನಾಯಕರು ಉಪಸ್ಥಿತರಿರಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button