ರೋಸಯ್ಯ 1933ರ ಜುಲೈ 4ರಂದು, ಆಂಧ್ರದ ಗುಂಟೂರು ಜಿಲ್ಲೆಯ ವೆಮೂರಿನಲ್ಲಿ ಹುಟ್ಟಿದ್ದಾರೆ. ಗುಂಟೂರಿನ ಹಿಂದು ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ. ಅವರು 1968, 1974 ಮತ್ತು 1980 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು. ಅವರು ಮೊಟ್ಟಮೊದಲ ಬಾರಿಗೆ ಆಂಧ್ರಪ್ರದೇಶದ ಮರಿ ಚೆನ್ನಾ ರೆಡ್ಡಿ ಸರ್ಕಾರದಲ್ಲಿ ರಸ್ತೆ ಮತ್ತು ಸಾರಿಗೆ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಅವಿಭಜಿತ ಆಂಧ್ರಪ್ರದೇಶವಿದ್ದಾಗಿನಿಂದಲೂ ಆ ಸರ್ಕಾರದ ಸಂಪುಟದಲ್ಲಿ ಅಪಾರ ಅನುಭವ ಹೊಂದಿದ್ದ ಅವರು 2009ರ ಸೆಪ್ಟೆಂಬರ್ 13ರಿಂದ, 2010ರ ನವೆಂಬರ್ 24ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯಪಾಲರಾಗಿದ್ದ ಕೊನಿಜೆಟಿ ರೋಸಯ್ಯ
ಅದಾದ ಬಳಿಕ 2011ರ ಆಗಸ್ಟ್ 31ರಿಂದ 2016ರ ಆಗಸ್ಟ್ 30ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿದ್ದರು. ಈ ಮಧ್ಯೆ 2014ರಲ್ಲಿ ಎರಡು ತಿಂಗಳು (ಜೂನ್-ಆಗಸ್ಟ್) ಕರ್ನಾಟಕ ರಾಜ್ಯಪಾಲರಾಗಿದ್ದರು. ಆಗ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ ವಜುಭಾಯಿ ವಾಲಾ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದರು. ಸುಮಾರು ಏಳು ಬಾರಿ ಬಜೆಟ್ ಮಂಡನೆ ಮಾಡುವ ದಾಖಲೆ ನಿರ್ಮಿಸಿದ್ದರು. ವೈ.ಎಸ್. ರಾಜಶೇಖರ್ ರೆಡ್ಡಿ ನಿಧನದ ನಂತರ ಅವಿಭಜಿತ ಆಂಧ್ರಪ್ರದೇಶದ ಸಿಇಒ ಆಗಿದ್ದರು. ಅಷ್ಟೇ ಅಲ್ಲ, ತಮಿಳು ನಾಡು ಮತ್ತು ಕರ್ನಾಟಕದ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.