ಬೆಂಗಳೂರು (ಅಕ್ಟೋಬರ್ 09); ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ (Petrol – Diesel Price) ಸತತ 11ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದು ಬೆಂಗಳೂರಿನಲ್ಲಿ (Banglore) ಪೆಟ್ರೋಲ್ ಬೆಲೆ 31 ಪೈಸೆ ಏರಿಸಿ 1 ಲೀಟರ್ ಪೆಟ್ರೋಲ್ ಅನ್ನು 107.14 ರೂ.ಗೆ ಮಾರಾಟ ಮಾಡಲಾಗಿದ್ದರೆ, ಬಳ್ಳಾರಿ (Bellary) 1 ಲೀಟರ್ ಪೆಟ್ರೋಲ್ಗೆ 22 ಪೈಸೆ ಏರಿಸಲಾಗಿದ್ದು, ಅತ್ಯಧಿಕ 109.19 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಪೆಟ್ರೋಲ್ ಬೆಲೆ ಶೀಘ್ರದಲ್ಲೆ 110 ರೂ ದಾಟುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಡೀಸೆಲ್ ಬೆಲೆಯನ್ನೂ ಏರಿಸಲಾಗಿದ್ದು, ದಾವಣಗೆರೆಯಲ್ಲಿ (Davanagere) ಅತ್ಯಧಿಕ ಲೀಟರ್ಗೆ 99 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;
ಬಾಗಲಕೋಟೆ – 106.66ರೂ. (30 ಪೈಸೆ ಏಳಿಕೆ)
ಬೆಂಗಳೂರು – 107.14 ರೂ. (31 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ -106.78ರೂ. (44 ಪೈಸೆ ಇಳಿಕೆ)
ಬೆಳಗಾವಿ – 108.15 ರೂ. (1.08 ರೂ. ಏರಿಕೆ)
ಬಳ್ಳಾರಿ – 109.19 ರೂ. (22 ಪೈಸೆ ಏರಿಕೆ )
ಬೀದರ್ – 107.67 ರೂ. (08 ಪೈಸೆ ಏರಿಕೆ)
ಬಿಜಾಪುರ – 107.07 ರೂ. (13 ಪೈಸೆ ಏರಿಕೆ)
ಚಾಮರಾಜನಗರ – 107.67 ರೂ. (81ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – 107.63 ರೂ. (70 ಪೈಸೆ ಏರಿಕೆ)
ಚಿಕ್ಕಮಗಳೂರು – 108.82ರೂ. (1.05 ರೂ ಏರಿಕೆ)
ಚಿತ್ರದುರ್ಗ – 109.15 ರೂ. (19 ಪೈಸೆ ಏರಿಕೆ)
ದಕ್ಷಿಣ ಕನ್ನಡ – 106.29 ರೂ. (09 ಪೈಸೆ ಏರಿಕೆ)
ದಾವಣಗೆರೆ – 108.62 ರೂ. (42 ಪೈಸೆ ಏರಿಕೆ)
ಧಾರವಾಡ – 106.87 ರೂ. (29 ಪೈಸೆ ಏರಿಕೆ)
ಗದಗ – 107.71 ರೂ. (65 ಪೈಸೆ ಏರಿಕೆ)
ಗುಲಬರ್ಗ – 106.86 ರೂ. (34 ಪೈಸೆ ಏರಿಕೆ)
ಹಾಸನ – 106.90 ರೂ. (31 ಪೈಸೆ ಏರಿಕೆ)
ಹಾವೇರಿ – 107.61 ರೂ. (31 ಪೈಸೆ ಇಳಿಕೆ)
ಕೊಡಗು – 108.15 ರೂ. (35 ಪೈಸೆ ಏರಿಕೆ)
ಕೋಲಾರ – 107.12 ರೂ. (03 ಪೈಸೆ ಇಳಿಕೆ)
ಕೊಪ್ಪಳ- 108.48 ರೂ. (79 ಪೈಸೆ ಏರಿಕೆ)
ಮಂಡ್ಯ – 107.35 ರೂ. (60 ಪೈಸೆ ಏರಿಕೆ)
ಮೈಸೂರು – 106.91 ರೂ. (58 ಪೈಸೆ ಏರಿಕೆ )
ರಾಯಚೂರು – 107.36 ರೂ. (16 ಪೈಸೆ ಇಳಿಕೆ)
ರಾಮನಗರ – 107.26 ರೂ. (31 ಪೈಸೆ ಏರಿಕೆ)
ಶಿವಮೊಗ್ಗ – 108.16 ರೂ. (09 ಪೈಸೆ ಏರಿಕೆ)
ತುಮಕೂರು – 107.94 ರೂ. (94 ಪೈಸೆ ಏರಿಕೆ)
ಉಡುಪಿ – 106.64 ರೂ. (46 ಪೈಸೆ ಇಳಿಕೆ)
ಉತ್ತರಕನ್ನಡ – 107.60 ರೂ . (1.08 ರೂ ಏರಿಕೆ)
ಯಾದಗಿರಿ – 107.95 ರೂ. (02 ಪೈಸೆ ಇಳಿಕೆ ).