ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ 13 ಜನರಿಗೆ 20 ವರ್ಷ ಸಜೆ..
ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಅಪ್ರಾಪ್ತ ಬಾಲಕಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 13 ಜನರಿಗೆ ಸ್ಥಳೀಯ ನ್ಯಾಯಾಲಯ 20 ವರ್ಷ ಶಿಕ್ಷೆ ವಿಧಿಸಿದ್ದಾರೆ. ರಾಜಸ್ಥಾನದ ಸುಕೇತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 6ರಂದು ಬುಲ್ಬುಲ್ ಅಲಿಯಾಸ್ ಪೂಜಾ ಜೈನ್ ಎಂಬ ಮಹಿಳೆ ಆಮಿಷವೊಡ್ಡಿ 15 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಳು. ನಂತರ ಬಾಲಕಿಯನ್ನು ಜಲಾವರ್‍ನಲ್ಲಿ ಮಾರಾಟ ಮಾಡಿದ್ದಳು.
ಬಾಲಕಿಯನ್ನು ಖರೀದಿಸಿದ ಆರೋಪಿಗಳು 9 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿದ್ದರು. ನಂತರ ಒಬ್ಬರಾದ ಮೇಲೆ ಒಬ್ಬರಂತೆ ಹಲವಾರು ಜನರ ಬಳಿ ಸರದಿಯಂತೆ ಕಳುಹಿಸಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿತ್ತು. ಕಷ್ಟಪಟ್ಟು ತಪ್ಪಿಸಿಕೊಂಡು ಬಂದ ಬಾಲಕಿ ಪೆÇಲೀಸರಿಗೆ ದೂರು ನೀಡಿದ್ದಳು.
ಮಾರ್ಚ್ 6ರಂದು ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿ ಮೇ 7ರಂದು ನ್ಯಾಯಾಲಯಕ್ಕೆ 1750 ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಪೊಸ್ಕೋ ನ್ಯಾಯಾಲಯದ ನ್ಯಾಯಾೀಧಿಶ ಅಶೋಕ್ ಚೌದರಿ ಅವರು, 13 ಜನರಿಗೆ 20 ವರ್ಷಗಳ ಶಿಕ್ಷೆ ಮತ್ತು 10 ಸಾವಿರ ರೂಪಾಯಿಗಳ ದಂಡ ವಿಸಿದ್ದಾರೆ. ನಾಲ್ವರು ಅಪರಾಗಳ ವಿಚಾರಣೆ ಸ್ಥಳೀಯ ಬಾಲ ಮಂಡಳಿಯಲ್ಲಿ ನಡೆಯುತ್ತಿದೆ.